Johnson & Johnson: ಮಹಾರಾಷ್ಟ್ರದಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ಲೈಸೆನ್ಸ್​ ರದ್ದು

| Updated By: ಸುಷ್ಮಾ ಚಕ್ರೆ

Updated on: Sep 17, 2022 | 2:49 PM

ಪ್ರಯೋಗಾಲಯದಲ್ಲಿ ಈ ಪೌಡರ್​ನ ಪರೀಕ್ಷೆ ಮಾಡಿದ ನಂತರ ಎಫ್‌ಡಿಎ ಡ್ರಗ್ಸ್ ಕಾಸ್ಮೆಟಿಕ್ಸ್ ಆಕ್ಟ್ 1940 ಮತ್ತು ನಿಯಮಗಳ ಅಡಿಯಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್‌ಗೆ ಶೋಕಾಸ್ ನೋಟಿಸ್ ನೀಡಿದೆ.

Johnson & Johnson: ಮಹಾರಾಷ್ಟ್ರದಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ಲೈಸೆನ್ಸ್​ ರದ್ದು
ಜಾನ್ಸನ್ ಬೇಬಿ ಪೌಡರ್
Follow us on

ಮುಂಬೈ: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಜಾನ್ಸನ್ ಆ್ಯಂಡ್ ಜಾನ್ಸನ್ (Johnson & Johnson) ಪ್ರೈವೇಟ್ ಲಿಮಿಟೆಡ್‌ನ ಬೇಬಿ ಪೌಡರ್ ಉತ್ಪಾದನೆಯ ಲೈಸೆನ್ಸ್​ ಅನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧಗಳ ಆಡಳಿತ (ಎಫ್‌ಡಿಎ) ರದ್ದುಗೊಳಿಸಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಉತ್ಪನ್ನವಾದ ಜಾನ್ಸನ್ ಬೇಬಿ ಪೌಡರ್ ನವಜಾತ ಶಿಶುಗಳ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಯೋಗಾಲಯದ ಪರೀಕ್ಷೆಯ ಸಮಯದಲ್ಲಿ ಶಿಶುಗಳಿಗೆ ಈ ಪೌಡರ್​ನ ಮಾದರಿಗಳು ಪ್ರಮಾಣಿತ ಪಿಹೆಚ್​ ಮೌಲ್ಯಕ್ಕೆ ಅನುಗುಣವಾಗಿಲ್ಲ ಎಂದು ತಿಳಿದುಬಂದಿದೆ ಎನ್ನಲಾಗಿದೆ. ಕೊಲ್ಕತ್ತಾ ಮೂಲದ ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿಯ ನಿರ್ಣಾಯಕ ವರದಿಯ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಪೌಡರ್ ಗುಣಮಟ್ಟದ ತಪಾಸಣೆಯ ಉದ್ದೇಶಗಳಿಂದ ಎಫ್‌ಡಿಎ ಪುಣೆ ಮತ್ತು ನಾಸಿಕ್‌ನಿಂದ ಜಾನ್ಸನ್ ಬೇಬಿ ಪೌಡರ್‌ನ ಮಾದರಿಗಳನ್ನು ಪಡೆದುಕೊಂಡಿತ್ತು.

ಇದನ್ನೂ ಓದಿ: 2023ರಲ್ಲಿ ಜಾಗತಿಕ ಮಟ್ಟದಲ್ಲಿ ಬೇಬಿ ಪೌಡರ್ ಮಾರಾಟ ನಿಲ್ಲಿಸಲಿದೆ ಜಾನ್ಸನ್ ಆಂಡ್ ಜಾನ್ಸನ್

ಪ್ರಯೋಗಾಲಯದಲ್ಲಿ ಈ ಪೌಡರ್​ನ ಪರೀಕ್ಷೆ ಮಾಡಿದ ನಂತರ ಎಫ್‌ಡಿಎ ಡ್ರಗ್ಸ್ ಕಾಸ್ಮೆಟಿಕ್ಸ್ ಆಕ್ಟ್ 1940 ಮತ್ತು ನಿಯಮಗಳ ಅಡಿಯಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್‌ಗೆ ಶೋಕಾಸ್ ನೋಟಿಸ್ ನೀಡಿದೆ. ಹಾಗೇ, ಮಾರುಕಟ್ಟೆಯಿಂದ ಈ ಉತ್ಪನ್ನದ ಸ್ಟಾಕ್ ಅನ್ನು ಹಿಂಪಡೆಯಲು ಕಂಪನಿಗೆ ಸೂಚನೆಗಳನ್ನು ನೀಡಿದೆ. ಈ ಆದೇಶವನ್ನು ಪ್ರಶ್ನಿಸಿ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ಈಗ ಕೋರ್ಟ್​ ಮೆಟ್ಟಿಲೇರಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ