2023ರಲ್ಲಿ ಜಾಗತಿಕ ಮಟ್ಟದಲ್ಲಿ ಬೇಬಿ ಪೌಡರ್ ಮಾರಾಟ ನಿಲ್ಲಿಸಲಿದೆ ಜಾನ್ಸನ್ ಆಂಡ್ ಜಾನ್ಸನ್

2020ರಲ್ಲಿ ಜಾನ್ಸನ್ ಆಂಡ್ ಜಾನ್ಸನ್ ಕಂಪನಿ ಟಾಲ್ಕ್ ಆಧಾರಿತ ಬೇಬಿ ಪೌಡರ್​​​ನ್ನು ಅಮೆರಿಕ ಮತ್ತು ಕೆನಡಾದಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸಿತ್ತು

2023ರಲ್ಲಿ ಜಾಗತಿಕ ಮಟ್ಟದಲ್ಲಿ ಬೇಬಿ ಪೌಡರ್ ಮಾರಾಟ ನಿಲ್ಲಿಸಲಿದೆ ಜಾನ್ಸನ್ ಆಂಡ್ ಜಾನ್ಸನ್
ಜಾನ್ಸನ್ ಆಂಡ್ ಜಾನ್ಸನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 12, 2022 | 2:05 PM

2023ರಲ್ಲಿ ಜಾಗತಿಕ ಮಟ್ಟದಲ್ಲಿ ಜಾನ್ಸನ್ ಆಂಡ್ ಜಾನ್ಸನ್  (Johnson & Johnson) ಕಂಪನಿ ಟಾಲ್ಕ್ ಆಧಾರಿತ ಬೇಬಿ ಪೌಡರ್ (baby powder) ಮಾರಾಟ ಸ್ಥಗಿತಗೊಳಿಸಲಿದೆ ಎಂದು ಪ್ರಸ್ತುತ ಕಂಪನಿ ಗುರುವಾರ ಹೇಳಿದಾರೆ. ಸಾವಿರಾರು ಗ್ರಾಹಕರು ಸುರಕ್ಷತೆ ಬಗ್ಗೆ ಮೊಕದ್ದಮೆ ದಾಖಲಿಸಿದ್ದರಿಂದ ಎರಡು ವರ್ಷಗಳ ಹಿಂದೆ ಅಮೆರಿಕದಲ್ಲಿ ಈ ಕಂಪನಿ ಬೇಬಿ ಪೌಡರ್ ಮಾರಾಟ ನಿಲ್ಲಿಸಿತ್ತು. ವಿಶ್ವದಾದ್ಯಂತ ಬಂಡವಾಳದ ಮೌಲ್ಯ ಮಾಪನ ಮಾಡಿದ ನಂತರ ಕಾರ್ನ್ ಸ್ಟಾರ್ಚ್ ಆಧಾರಿತ ಬೇಬಿ ಪೌಡರ್ ಮಾರಾಟ ಸ್ಥಗಿತಗೊಳಿಲು ನಿರ್ಧರಿಸಿದ್ದೇವೆ. ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಈಗಾಗಲೇ ಕಾರ್ನ್ ಸ್ಟಾರ್ಚ್ ಆಧಾರಿತ ಬೇಬಿ ಪೌಡರ್ ಮಾರಾಟವಾಗಿದೆ ಎಂದು ಕಂಪನಿ ಹೇಳಿದೆ. 2020ರಲ್ಲಿ ಜಾನ್ಸನ್ ಆಂಡ್ ಜಾನ್ಸನ್ ಕಂಪನಿ ಟಾಲ್ಕ್ ಆಧಾರಿತ ಬೇಬಿ ಪೌಡರ್​​​ನ್ನು ಅಮೆರಿಕ ಮತ್ತು ಕೆನಡಾದಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸಿತ್ತು. ಈ ಉತ್ಪನ್ನ ಸುರಕ್ಷಿತವಲ್ಲ ಎಂದು ತಪ್ಪು ಮಾಹಿತಿ ಹರಿದಾಡಿತ್ತು ಎಂದು ಕಂಪನಿ ಹೇಳಿದೆ. ಆದಾಗ್ಯೂ, ಉತ್ಪನ್ನದ ವಿರುದ್ದ ದೂರು ನೀಡಿ ಗ್ರಾಹಕರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಮಾರಾಟವೂ ಕುಸಿದಿತ್ತು. ಟಾಲ್ಕ್ ಪೌಡರ್ ಅಸ್ಬೆಸ್ಟೋಸ್ ಜತೆ ಕಲುಷಿತಗೊಂಡು ಕ್ಯಾನ್ಸರ್​​ಗೆ ಕಾರಣವಾಗುತ್ತದೆ ಎಂದು ಗ್ರಾಹಕರು ಕಂಪನಿ ವಿರುದ್ದ ದೂರಿದ್ದು ಈ ಬಗ್ಗೆ ಸುಮಾರು38,000 ಮೊಕದ್ದಮೆ ದಾಖಲಾಗಿದೆ.

ಈ ಆರೋಪವನ್ನು ಜೆ ಆಂಡ್ ಜೆ ನಿರಾಕರಿಸಿದ್ದು, ದಶಕಗಳ ಕಾಲ ನಡೆಸಿದ ವೈಜ್ಞಾನಿಕ ಪರೀಕ್ಷೆ ಮತ್ತು ನಿಯಂತ್ರಕಗಳ ಅನುಮೋದನೆಯು ಆ ಟಾಲ್ಕ್ ಸುರಕ್ಷಿತ ಮತ್ತು ಅಸ್ಬೆಸ್ಟೋಸ್ ಮುಕ್ತ ಎಂದು ತೋರಿಸಿದೆ. ಗುರುವಾರ ತಮ್ಮ ಉತ್ಪನ್ನವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದಾ ಕಂಪನಿ ಈ ಮಾತನ್ನು ಪುನರುಚ್ಚರಿಸಿದೆ. ಜೆ ಆಂಡ್ ಜೆ ಆಕ್ಟೋಬರ್ ತಿಂಗಳಲ್ಲಿ ಎಲ್​​ಟಿಎಲ್ ಮ್ಯಾನೇಜ್​​ಮೆಂಟ್​​ನಿಂದ ಹೊರ ಬಂದಿದ್ದು, ಅದು ದಿವಾಳಿಯಾಯಿತು. ಮೊಕದ್ದಮೆ ಹೂಡುವವರು ಜಾನ್ಸನ್ ಆಂಡ್ ಜಾನ್ಸನ್ ಮೊಕದ್ದಮೆಗಳ ವಿರುದ್ಧ ತಮ್ಮನ್ನು ತಾವು ಸಮರ್ಥಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಆದರೆ ಜೆ ಆಂಡ್ ಜೆ ಮತ್ತು ದಿವಾಳಿಯಾದ ಅಂಗಸಂಸ್ಥೆ ಪ್ರಕ್ರಿಯೆಯ ಪ್ರತಿವಾದಿಗಳು ಹಕ್ಕುದಾರರಿಗೆ ಸರಿದೂಗಿಸಲು ಇದು ಒಂದು ಸಮಾನವಾದ ಮಾರ್ಗವಾಗಿದೆ ಎಂದು ಹೇಳುತ್ತಾರೆ.

ಫಿರ್ಯಾದಿ ಸಂಸ್ಥೆ ಕೆಲ್ಲರ್ ಪೋಸ್ಟ್ ಮ್ಯಾನ್ ವಕೀಲ ಬೆನ್ ವಿಟ್ಟಿಂಗ್, ದಿವಾಳಿ ಎಂದು ಘೋಷಿಸಿರುವ ಕಾರಣ ಕಂಪನಿಯ ಮಾರಾಟದ ನಿರ್ಧಾರವು ತಕ್ಷಣವೇ ಅವುJohnson & Johnson will stop selling talc-based baby powder globally in 2023ಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. ಆದರೆ ಫೆಡರಲ್ ಉಚ್ಚ ನ್ಯಾಯಾಲಯವು ಪ್ರಕರಣಗಳನ್ನು ಮುಂದುವರಿಸಲು ಅನುಮತಿಸಿದರೆ, ಜಾನ್ಸನ್ ಮತ್ತು ಜಾನ್ಸನ್ ನಿರ್ಧಾರವನ್ನು ಗ್ರಾಹಕರು ಪುರಾವೆಯಾಗಿ ಬಳಸಲು ಪ್ರಯತ್ನಿಸಬಹುದು ಎಂದು ವೈಟಿಂಗ್ ಹೇಳಿದರು. ಈ ಪ್ರಕರಣಗಳು ಮುಂದುವರಿದರೆ ಅದು ತುಂಬಾ ದೊಡ್ಡ ವಿಷಯ ಎಂದು ವೈಟಿಂಗ್ ಹೇಳಿದರು. ದಿವಾಳಿ ಎಂದು ಘೋಷಿಸುವ ಮುನ್ನ ಕಂಪನಿಯು 3.5 ಬಿಲಿಯನ್ ಡಾಲರ್ ಪರಿಹಾರ ನೀಡಿತ್ತು. ಇದರಲ್ಲಿ 22 ಮಹಿಳೆಯರಿಗೆ 2 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚಿನ ಪರಿಹಾರ ನೀಡಲಾಯಿತು. ಟಾಲ್ಕ್ ಬೇಬಿ ಪೌಡರ್‌ನ ಜಾಗತಿಕ ಮಾರಾಟವನ್ನು ಕೊನೆಗೊಳಿಸಲು ಕರೆ ನೀಡುವ ಷೇರುದಾರರ ಪ್ರಸ್ತಾಪವು ಏಪ್ರಿಲ್‌ನಲ್ಲಿ ವಿಫಲವಾಗಿತ್ತು.

ಇದನ್ನೂ ಓದಿಭಾರತೀಯ ಗ್ರಾಹಕರಿಗೆ 5ಜಿ ವಲಯದಲ್ಲಿ ಕ್ರಾಂತಿಕಾರಕ ಸೇವೆ ಒದಗಿಸುವ ನಿಟ್ಟಿನಲ್ಲಿ 19,867.8 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್‌ ಖರೀದಿಸಿದ ಏರ್‌ಟೆಲ್‌

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ