IRCTC: ರೈಲಿನಲ್ಲಿ ಕುಳಿತು ಜಸ್ಟ್ ಆರ್ಡರ್ ಮಾಡಿ, ಆಹಾರ ನಿಮ್ಮ ಕೈಸೇರಲಿದೆ; ಆರ್ಡರ್ ಮಾಡುವ ವಿಧಾನ ಇಲ್ಲಿದೆ
IRCTC ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ನಿಮ್ಮ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವಂತೆಯೇ, ಸುಲಭವಾಗಿ ಆಹಾರವನ್ನು ಕೂಡ ಆರ್ಡರ್ ಮಾಡಬಹುದು. ಇದಕ್ಕಾಗಿ IRCTC ತನ್ನ ಹೊಸ ಇ-ಕೇಟರಿಂಗ್ ಅಪ್ಲಿಕೇಶನ್ ಪ್ರಾರಂಭಿಸಿದೆ.
ರೈಲಿನಲ್ಲಿ ದೂರ ಪ್ರಯಾಣ ಮಾಡುವವರು ಆಹಾರದ ವ್ಯವಸ್ಥೆಯನ್ನು ಮಾಡುವುದು ಅತ್ಯವಶ್ಯಕವಾಗಿದೆ. IRCTC ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ನಿಮ್ಮ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವಂತೆಯೇ, ಸುಲಭವಾಗಿ ಆಹಾರವನ್ನು ಆರ್ಡರ್ ಮಾಡಬಹುದು. ಇದಕ್ಕಾಗಿ IRCTC ತನ್ನ ಹೊಸ ಇ-ಕೇಟರಿಂಗ್ ಅಪ್ಲಿಕೇಶನ್ ಪ್ರಾರಂಭಿಸಿದೆ. ಇದು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ನಲ್ಲಿ ಲಭ್ಯವಿದ್ದು, ಇದರ ಮೂಲಕ ಆಹಾರ ಆರ್ಡರ್ ಮಾಡಿದರೆ ನೀವು ರೈಲಿನಲ್ಲಿ ಕುಳಿತಿರುವ ಸೀಟಿನ ಬಳಿ ಆಹಾರ ಬರಲಿದೆ.
ರೈಲು ನಿಲ್ದಾಣಗಳಲ್ಲಿ ಅನೇಕ ಆಹಾರ ಸಂಗ್ರಾಹಕಗಳೊಂದಿಗೆ ಪ್ರಯಾಣಿಕರು ಉತ್ತರ ಭಾರತ, ದಕ್ಷಿಣ ಭಾರತದ ಆಹಾರಗಳು, ಪಿಜ್ಜಾಗಳು, ಬಿರಿಯಾನಿಗಳು, ಬೆಣ್ಣೆ ಚಿಕನ್ ಮತ್ತು ಚೈನೀಸ್ ಭಕ್ಷ್ಯಗಳು ಇತ್ಯಾದಿ ಆಹಾರವನ್ನು ಸವಿಯಬಹುದು. ಹಾಗಿದ್ದರೆ ರೈಲಿನಲ್ಲಿ ಕುಳಿತಿರುವಾಗ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವುದು ಹೇಗೆ? ಈ ಕೆಳಗಿನ ಐದು ಸರಳ ಹಂತಗಳನ್ನು ಪರಿಶೀಲಿಸಿ:
- ecatering.irctc.co.in ಭೇಟಿ ಕೊಟ್ಟು ಲಾಗ್ ಇನ್ ಆಗಿ
- ನಿಮ್ಮ ರೈಲು ಹೆಸರು ಮತ್ತು ನಿಲ್ದಾಣದ ಸಂಖ್ಯೆ ಮತ್ತು ಟೈಪ್ ಮಾಡಿ
- ನಿಮ್ಮ PNR ನಮೂದಿಸಿ ಮತ್ತು ರೆಸ್ಟೋರೆಂಟ್ ಅನ್ನು ಆಯ್ಕೆ ಮಾಡಿ
- ನಿಮ್ಮ ಆಹಾರವನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಆರ್ಡರ್ ಅನ್ನು ಆನ್‌ಲೈನ್‌ನಲ್ಲಿ ಪಾವತಿಸುವ ಅಥವಾ ಕ್ಯಾಶ್ ಆನ್ ಡೆಲಿವರಿಯನ್ನು ನಿಗದಿಪಡಿಸಿ
- ನೀವು ಆಯ್ಕೆ ಮಾಡಿದ ಸಮಯದಲ್ಲಿ ನಿಮ್ಮ ಆಹಾರವನ್ನು ಶೀಘ್ರದಲ್ಲೇ ತಲುಪಿಸಲಾಗುತ್ತದೆ
ಮುಂಬೈ ಸೆಂಟ್ರಲ್, ಛತ್ರಪತಿ ಶಿವಾಜಿ ಟರ್ಮಿನಲ್, ಹೊಸ ದೆಹಲಿ ರೈಲು ನಿಲ್ದಾಣ, ಹಳೆಯ ದೆಹಲಿ ರೈಲು ನಿಲ್ದಾಣ, ಬೆಂಗಳೂರು ಸಿಟಿ ಜಂಕ್ಷನ್, ಚೆನ್ನೈ ಸೆಂಟ್ರಲ್, ಕಾನ್ಪುರ್, ಅಲಹಾಬಾದ್ ಜಂಕ್ಷನ್, ವಾರಣಾಸಿ, ಲಕ್ನೋ, ಇಟಾರ್ಸಿ, ಭೋಪಾಲ್ ಜಂಕ್ಷನ್, ವಿಜಯವಾಡ ಇತ್ಯಾದಿಗಳು ರೈಲಿನಲ್ಲಿ ನಿಮಗೆ ಆಹಾರ ಪೆಟ್ಟಿಗೆಯನ್ನು ತಲುಪಿಸುವ ಕೆಲವು ಪ್ರಮುಖ ನಿಲ್ದಾಣಗಳಾಗಿವೆ. ಇ-ಕೇಟರಿಂಗ್ ಸೇವೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ನಿಲ್ದಾಣಗಳಿಗೆ ವಿಸ್ತರಿಸಲು ಐಆರ್ಸಿಟಿಸಿ ಮುಂದಾಗಿದೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:50 pm, Fri, 12 August 22