ದೇವೇಂದ್ರ ಫಡ್ನವೀಸ್ ಸೇರಿ ಹಲವು ವಿಪಕ್ಷ ನಾಯಕರ ಭದ್ರತೆ ತಗ್ಗಿಸಿದ ಮಹಾರಾಷ್ಟ್ರ ಸರ್ಕಾರ
2019ರಲ್ಲಿ ಈ ಬಗ್ಗೆ ಕೊನೆಯ ಸಭೆ ನಡೆದಿತ್ತು. ಕೊರೊನಾ ಕಾರಣದಿಂದ 2020ರಲ್ಲಿ ಸಭೆ ಸೇರಲು ಆಗಿರಲಿಲ್ಲ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ: ಮಹಾರಾಷ್ಟ್ರ ವಿರೋಧ ಪಕ್ಷ ನಾಯಕರಾದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ಎಸ್) ನಾಯಕ ರಾಜ್ ಠಾಕ್ರೆ ಹಾಗೂ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಭದ್ರತೆಯನ್ನು ರಾಜ್ಯ ಸರ್ಕಾರ ತಗ್ಗಿಸಿದೆ.
ಎರಡು ದಿನಗಳ ಹಿಂದೆ ಮಹಾರಾಷ್ಟ್ರ ಸರ್ಕಾರ ಭದ್ರತೆ ಪರಿಶೀಲನಾ ಸಭೆ ಏರ್ಪಡಿಸಿತ್ತು. ಈ ವೇಳೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ವಿಐಪಿಗಳಿಗೆ ನೀಡುವ ಭದ್ರತೆಯನ್ನು ಆಗಾಗ ವಿಮರ್ಶೆ ಮಾಡಲಾಗುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ. 2019ರಲ್ಲಿ ಈ ಬಗ್ಗೆ ಕೊನೆಯ ಸಭೆ ನಡೆದಿತ್ತು. ಕೊರೊನಾ ಕಾರಣದಿಂದ 2020ರಲ್ಲಿ ಸಭೆ ಸೇರಲು ಆಗಿರಲಿಲ್ಲ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ದೇವೇಂದ್ರ ಫಡ್ನವೀಸ್ಗೆ ಈ ಮೊದಲು Z+ ಭದ್ರತೆ ನೀಡಲಾಗಿತ್ತು. ಇದನ್ನು ಈಗ Y+ಗೆ ಇಳಿಕೆ ಮಾಡಲಾಗಿದೆ. ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಹಾಗೂ ಮಗಳಿಗೆ ನೀಡಲಾಗಿದ್ದ Y + ಭದ್ರತೆಯನ್ನು X ಶ್ರೇಣಿಗೆ ಇಳಿಕೆ ಮಾಡಲಾಗಿದೆ. ಎಂಎನ್ಎಸ್ ಪಕ್ಷದ ನಾಯಕ ರಾಜ್ ಠಾಕ್ರೆ ಭದ್ರತೆಯನ್ನು Z ಶ್ರೇಣಿಯಿಂದ Y+ ಶ್ರೇಣಿಗೆ ಇಳಿಕೆ ಮಾಡಲಾಗಿದೆ. ಪ್ರಮುಖ ನಾಯಕರ ಭದ್ರತೆಯನ್ನು ತಗ್ಗಿಸಿದ ಸರ್ಕಾರದ ಕ್ರಮವನ್ನು ಬಿಜೆಪಿ ಟೀಕಿಸಿದೆ.
ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ‘Y’ ಶ್ರೇಣಿಯ ಭದ್ರತೆ ನೀಡಿದ ರಾಜ್ಯ ಸರ್ಕಾರ