ಮಹಾರಾಷ್ಟ್ರದಲ್ಲಿ ಮೋಸ್ಟ್​ ವಾಂಟೆಡ್ ನಕ್ಸಲ್ ಚೈನುರಾಮ್ ಬಂಧನ

|

Updated on: Oct 15, 2023 | 9:31 AM

ಮಹಾರಾಷ್ಟ್ರದ ಗಡ್​ಚಿರೋಲಿಯಲ್ಲಿ ಮೋಸ್ಟ್​ ವಾಂಟೆಡ್ ನಕ್ಸಲ್​ನನ್ನು ಬಂಧಿಸಲಾಗಿದೆ. ಆತನನ್ನು ಹಿಡಿದುಕೊಟ್ಟವರಿಗೆ 16 ಲಕ್ಷ ರೂ ಬಹುಮಾನವನ್ನು ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಭಾಗದ ಗಡ್‌ಚಿರೋಲಿ ಬಳಿ ಹಾರ್ಡ್‌ಕೋರ್ ನಕ್ಸಲೈಟ್ ಚೈನುರಾಮ್ ಅಲಿಯಾಸ್ ಸುಕ್ಕು ವಾಟೆ ಕೊರ್ಸಾ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಅವರು ಜರವಂಡಿ ಮತ್ತು ಪೆಂಧಾರಿ ಪೋಸ್ಟ್‌ಗಳಲ್ಲಿ ಪೊಲೀಸ್ ಪಕ್ಷಗಳ ಚಲನವಲನದ ಮೇಲೆ ನಿಗಾ ಇರಿಸುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮೋಸ್ಟ್​ ವಾಂಟೆಡ್ ನಕ್ಸಲ್ ಚೈನುರಾಮ್ ಬಂಧನ
ನಕ್ಸಲ್-ಸಾಂದರ್ಭಿಕ ಚಿತ್ರ
Image Credit source: India Today
Follow us on

ಮಹಾರಾಷ್ಟ್ರದ ಗಡ್​ಚಿರೋಲಿಯಲ್ಲಿ ಮೋಸ್ಟ್​ ವಾಂಟೆಡ್ ನಕ್ಸಲ್​ನನ್ನು ಬಂಧಿಸಲಾಗಿದೆ. ಆತನನ್ನು ಹಿಡಿದುಕೊಟ್ಟವರಿಗೆ 16 ಲಕ್ಷ ರೂ ಬಹುಮಾನವನ್ನು ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಭಾಗದ ಗಡ್‌ಚಿರೋಲಿ ಬಳಿ ಹಾರ್ಡ್‌ಕೋರ್ ನಕ್ಸಲೈಟ್ ಚೈನುರಾಮ್ ಅಲಿಯಾಸ್ ಸುಕ್ಕು ವಾಟೆ ಕೊರ್ಸಾ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಅವರು ಜರವಂಡಿ ಮತ್ತು ಪೆಂಧಾರಿ ಪೋಸ್ಟ್‌ಗಳಲ್ಲಿ ಪೊಲೀಸ್ ಪಕ್ಷಗಳ ಚಲನವಲನದ ಮೇಲೆ ನಿಗಾ ಇರಿಸುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಸುಳಿವಿನ ಆಧಾರದ ಮೇಲೆ ಸಿ-60 ಗಡ್‌ಚಿರೋಲಿಯ ಸಿಬ್ಬಂದಿ ಜರವಂಡಿಯಿಂದ ಸೊಹಗಾಂವ್‌ಗೆ ಹೋಗುವ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಲು ಯೋಜಿಸಿದ್ದರು ಮತ್ತು ಕೊರ್ಸಾನನ್ನು ಬಂಧಿಸಲಾಯಿತು ಎಂದು ಅವರು ಹೇಳಿದರು.

ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಟೆಕಮೆಟ್ಟಾ ನಿವಾಸಿ, ಕೊರ್ಸಾ ಈ ವರ್ಷದ ಮಾರ್ಚ್‌ನಲ್ಲಿ ಹಿಕ್ಕರ್‌ನಲ್ಲಿ ನಡೆದ ಶೂಟೌಟ್, ಇತರ ಏಳು ಎನ್‌ಕೌಂಟರ್‌ಗಳು ಮತ್ತು ಕೊಲೆಯಲ್ಲಿ ಭಾಗಿಯಾಗಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಉತ್ತರ ಪ್ರದೇಶದಲ್ಲಿ ಮಹಿಳೆ ಸೇರಿದಂತೆ ಐವರು ನಕ್ಸಲರನ್ನು ಬಂಧಿಸಿದ ಭಯೋತ್ಪಾದನಾ ನಿಗ್ರಹ ದಳ

ಆತ ನವೆಂಬರ್ 2016 ರಲ್ಲಿ ಮಾಡ್ ಸರಬರಾಜು ತಂಡದಲ್ಲಿ ವಿಭಾಗೀಯ ಸಮಿತಿಯ ಸದಸ್ಯರಾಗಿ ಪ್ರಾರಂಭಿಸಿದರು ಮತ್ತು ನಂತರ ತಂಡದ ಉಪ ಕಮಾಂಡರ್ ಆಗಿದ್ದ ಎಂದು ಅವರು ಹೇಳಿದರು.

ಮಹಾರಾಷ್ಟ್ರ ಸರ್ಕಾರ ಕೊರ್ಸಾ ಹಿಡಿದುಕೊಟ್ಟವರಿಗೆ 16 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು ಎಂದು ಅವರು ಹೇಳಿದರು.
ಗಡ್ಚಿರೋಲಿ ಪೊಲೀಸರು ನಡೆಸಿದ ತೀವ್ರ ಕಾರ್ಯಾಚರಣೆಯಿಂದಾಗಿ ಜನವರಿ 2022 ರಿಂದ ಎಪ್ಪತ್ತೊಂದು ನಕ್ಸಲೀಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ