ಇಸ್ರೇಲ್ ಪ್ರಧಾನಿ ನೇತನ್ಯಾಹುವನ್ನು ದೆವ್ವ ಎಂದು ಕರೆದ ಓವೈಸಿ, ಪ್ಯಾಲೆಸ್ತೀನ್ ಜತೆ ನಿಲ್ಲುವಂತೆ ಪ್ರಧಾನಿ ಮೋದಿಗೆ ಒತ್ತಾಯ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹುವನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ದೆವ್ವ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೆ ಪ್ಯಾಲೆಸ್ತೀನ್ ಜತೆ ನಿಲ್ಲುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಸಾವಿರಾರು ಜನರು ಸಾವನ್ನಪ್ಪಿದ ಮತ್ತು ಗಾಯಗೊಂಡಿರುವ ಮಧ್ಯೆ ಗಾಜಾದ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಮತ್ತು ಅವರಿಗೆ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು(Benjamin Netanyahu)ವನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi) ದೆವ್ವ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೆ ಪ್ಯಾಲೆಸ್ತೀನ್ ಜತೆ ನಿಲ್ಲುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಸಾವಿರಾರು ಜನರು ಸಾವನ್ನಪ್ಪಿದ ಮತ್ತು ಗಾಯಗೊಂಡಿರುವ ಮಧ್ಯೆ ಗಾಜಾದ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಮತ್ತು ಅವರಿಗೆ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ನಾನು ಪ್ಯಾಲೆಸ್ತೀನ್ ಜತೆಗೆ ನಿಲ್ಲುತ್ತೇನೆ, ಇಂದಿಗೂ ಹೋರಾಡುತ್ತಿರುವ ಗಾಜಾದ ವೀರರಿಗೆ ವಂದನೆಗಳು ಎಂದಿದ್ದಾರೆ. ನೇತನ್ಯಾಹು ಒಬ್ಬ ದೆವ್ವ ಮತ್ತು ನಿರಂಕುಶಾಧಿಕಾರಿ ನಾನು ಹೆಮ್ಮೆಯಿಂದ ಪ್ಯಾಲೆಸ್ತೀನ್ ಧ್ವಜ ಧರಿಸಿ ನಮ್ಮ ತ್ರಿವರ್ಣ ಧ್ವಜವನ್ನೂ ಧರಿಸಿದ್ದೇನೆ. ನಾನು ಪ್ಯಾಲೆಸ್ತೀನ್‌ನೊಂದಿಗೆ ನಿಲ್ಲುತ್ತೇನೆ ಎಂದು ಓವೈಸಿ ಹೈದರಾಬಾದ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಹೇಳಿದರು.
ಪ್ಯಾಲೆಸ್ಟೀನಿಯನ್ನರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸುವಂತೆ ನಾನು ಪ್ರಧಾನಿಗೆ ಮನವಿ ಮಾಡಲು ಬಯಸುತ್ತೇನೆ ಎಂದು ಅವರು ಹೇಳಿದರು. ಪ್ಯಾಲೆಸ್ತೀನ್ ಕೇವಲ ಮುಸ್ಲಿಮರ ವಿಷಯವಲ್ಲ; ಇದು ಮಾನವೀಯ ಸಮಸ್ಯೆ.
ಮತ್ತಷ್ಟು ಓದಿ: Israel Hamas Conflict: ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ 29 ಮಂದಿ ಅಮೆರಿಕನ್ನರು ಸಾವು
ಹಮಾಸ್ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿಯ ಅಲೆಯನ್ನು ಪ್ರಾರಂಭಿಸಿತು , ನೂರಾರು ಜನರನ್ನು ಕೊಂದಿತು, ಇದು ದಶಕಗಳಲ್ಲಿನ ಸಂಘರ್ಷದ ಅತಿದೊಡ್ಡ ಯುದ್ಧವಾಗಿದೆ.
ದಾಳಿಯು ಇಸ್ರೇಲ್‌ನಲ್ಲಿ 1,300 ಕ್ಕೂ ಹೆಚ್ಚು ಜನರನ್ನು ಕೊಂದಿದೆ ಮತ್ತು ಇಸ್ರೇಲಿ ಪ್ರತಿ-ವೈಮಾನಿಕ ದಾಳಿಯು ಗಾಜಾದಲ್ಲಿ 2,200 ಕ್ಕೂ ಹೆಚ್ಚು ಜನರನ್ನು ಕೊಂದಿದೆ. ಇಸ್ರೇಲ್‌ನಲ್ಲಿ ಸುಮಾರು 1,500 ಹಮಾಸ್ ಉಗ್ರಗಾಮಿಗಳು ಕೊಲ್ಲಲ್ಪಟ್ಟರು ಎಂದು ಇಸ್ರೇಲ್ ಹೇಳಿಕೊಂಡಿದೆ.
ನಾವು ಯುದ್ಧವನ್ನು ಪ್ರಾರಂಭಿಸಿಲ್ಲ ಆದರೆ ಅದನ್ನು ನಾವೇ ಅಂತ್ಯಗೊಳಿಸುತ್ತೇವೆ, ಹಮಾಸ್ ಉಗ್ರರ ವಿರುದ್ಧದ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:09 am, Sun, 15 October 23