Maharashtra Politics: ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ರನ್ನು ಭೇಟಿಯಾದ ಅಜಿತ್ ಪವಾರ್

ಶರದ್ ಪವಾರ್ ಶಿಬಿರದ ಮೂಲಗಳ ಪ್ರಕಾರ, ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಮತ್ತು ಪಕ್ಷದ ನಾಯಕ ಜಿತೇಂದ್ರ ಅವ್ಹಾದ್ ಕೂಡ ಸಂಭಾಷಣೆಯ ಸಮಯದಲ್ಲಿ ಶರದ್ ಅವರೊಂದಿಗೆ ಇದ್ದರು.

Maharashtra Politics: ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ರನ್ನು ಭೇಟಿಯಾದ ಅಜಿತ್ ಪವಾರ್
ಶರದ್ ಪವಾರ್ & ಅಜಿತ್ ಪವಾರ್Image Credit source: PTI
Follow us
Ganapathi Sharma
|

Updated on:Jul 16, 2023 | 6:15 PM

ಮುಂಬೈ, ಜುಲೈ 16: ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಅವರು ಭಾನುವಾರ ಮುಂಬೈನ ವೈಬಿ ಚವಾಣ್ ಸೆಂಟರ್‌ನಲ್ಲಿ ಎನ್‌ಸಿಪಿ ಅಧ್ಯಕ್ಷ ಶರದ್​​​ ಪವಾರ್ (Sharad Pawar) ಅವರನ್ನು ಭೇಟಿಯಾದರು. ಪ್ರಫುಲ್ ಪಟೇಲ್, ಛಗನ್ ಭುಜಬಲ್ ಹಾಗೂ ಎನ್​ಸಿಪಿಯ ಕೆಲವು ಸಚಿವರು ಉಪಸ್ಥಿತರಿದ್ದರು. ಜುಲೈ 2 ರಂದು ತನ್ನ ಪವಾರ್ ವಿರುದ್ಧ ಬಂಡಾಯವೆದಿದ್ದ ಅಜಿತ್ ಪವಾರ್, ಬೆಂಬಲಿಗ ಶಾಸಕರೊಂದಿಗೆ ಬಿಜೆಪಿ ಬೆಂಬಲಿತ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಭಾಗವಾಗಿದ್ದರು. ಆ ನಂತರ ಇದೇ ಮೊದಲ ಬಾರಿ ಎನ್​ಸಿಪಿ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನ ಪ್ರಾರಂಭವಾಗುವ ಒಂದು ದಿನ ಮೊದಲು ಈ ಸಭೆ ನಡೆದಿದೆ.

ಎಲ್ಲರೂ ಶರದ್ ಪವಾರ್ ಅವರ ಆಶೀರ್ವಾದ ಪಡೆಯಲು ಬಂದಿದ್ದಾರೆ ಎಂದು ಪ್ರಫುಲ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ. ಭೇಟಿ ವೇಳೆ, ಅವರು (ಶರದ್ ಪವಾರ್) ಎನ್‌ಸಿಪಿಯಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲು ಪವಾರ್ ಬಳಿ ಕೇಳಿಕೊಂಡರು. ಆದರೆ, ಇದಕ್ಕೆ ಶರದ್ ಪವಾರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಅವರು ಹೇಳಿದರು.

ಸಭೆಯಲ್ಲಿ ಎನ್‌ಸಿಪಿ ಸಚಿವರಾದ ಹಸನ್ ಮುಶ್ರಿಫ್, ಅದಿತಿ ತಟ್ಕರೆ ಮತ್ತು ದಿಲೀಪ್ ವಾಲ್ಸೆ ಪಾಟೀಲ್ ಕೂಡ ಭಾಗವಹಿಸಿದ್ದರು.

ಶರದ್ ಪವಾರ್ ಶಿಬಿರದ ಮೂಲಗಳ ಪ್ರಕಾರ, ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಮತ್ತು ಪಕ್ಷದ ನಾಯಕ ಜಿತೇಂದ್ರ ಅವ್ಹಾದ್ ಕೂಡ ಸಂಭಾಷಣೆಯ ಸಮಯದಲ್ಲಿ ಶರದ್ ಅವರೊಂದಿಗೆ ಇದ್ದರು.

ಇದನ್ನೂ ಓದಿ: Pawar Vs Pawar: ಯಾರು ಹೆಚ್ಚು ಶಾಸಕರನ್ನು ಹೊಂದಿದ್ದಾರೆ ಎಂಬುದನ್ನು ನಿರೂಪಿಸಲು ಎನ್​ಸಿಪಿಯ ಎರಡು ಬಣಗಳ ಸಭೆ

ಶುಕ್ರವಾರ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರತಿಭಾ ಪವಾರ್ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ, ಅವರ ಆರೋಗ್ಯ ವಿಚಾರಿಸಲು ಎನ್‌ಸಿಪಿ ನಾಯಕರ ಅಧಿಕೃತ ಭವನ ಸಿಲ್ವರ್ ಓಕ್‌ಗೆ ಅಜಿತ್ ಪವಾರ್ ಧಾವಿಸಿದ್ದರು.

ವರದಿಗಳ ಪ್ರಕಾರ, ಅಜಿತ್ ಪವಾರ್ ಮತ್ತು ಅವರ ಚಿಕ್ಕಮ್ಮ ಪ್ರತಿಭಾ ಆತ್ಮೀಯರಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ವಿಧಾನಸಭೆ ಚುನಾವಣೆಯ ನಂತರ ತರಾತುರಿಯಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ರಚಿಸಿಸಲಾದ ಸಮ್ಮಿಶ್ರ ಸರ್ಕಾರವನ್ನು 2019 ರಲ್ಲಿ ಎನ್‌ಸಿಪಿ ತೆಕ್ಕೆಗೆ ಮರಳಿ ತರುವಲ್ಲಿ ಪ್ರತಿಭಾ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗುಗತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Sun, 16 July 23