ಎಎಪಿಯ ಸುಗ್ರೀವಾಜ್ಞೆ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ; ಬೆಂಗಳೂರಿನಲ್ಲಿ ನಡೆಯುವ ಪ್ರತಿಪಕ್ಷಗಳ ಸಭೆಗೆ ಹಾಜರಾಗಲು ಆಪ್ ಸಮ್ಮತಿ
ತೃಣಮೂಲ ಕಾಂಗ್ರೆಸ್‌ನಿಂದ ತೊಡಗಿ ಆರ್‌ಜೆಡಿ, ಜೆಡಿಯು, ಎನ್‌ಸಿಪಿ, ಸಮಾಜವಾದಿ ಪಕ್ಷ, ಉದ್ಧವ್ ಠಾಕ್ರೆ ಅವರ ಶಿವಸೇನೆ ಎಲ್ಲರೂ ಈ ದೇಶವಿರೋಧಿ ಸುಗ್ರೀವಾಜ್ಞೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಇದನ್ನು ಸೋಲಿಸಲು ನಾವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ರಾಘವ್ ಹೇಳಿದ್ದಾರೆ.
ನವದೆಹಲಿ, ಜುಲೈ 16: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (BJP) ವಿರುದ್ಧ ಸೆಣಸಲು ಕಾರ್ಯತಂತ್ರ ರೂಪಿಸಲು ಬೆಂಗಳೂರಿನಲ್ಲಿ ಸೋಮವಾರ ನಡೆಯಲಿರುವ ವಿಪಕ್ಷಗಳ ಸಭೆಯಲ್ಲಿ ಭಾಗವಹಿಸುವುದಾಗಿ ಆಮ್ ಆದ್ಮಿ ಪಾರ್ಟಿ (AAP) ಭಾನುವಾರ ಘೋಷಿಸಿದೆ. ಸುಗ್ರೀವಾಜ್ಞೆ ವಿಚಾರದಲ್ಲಿ ದೆಹಲಿಯ ಎಎಪಿ ಸರ್ಕಾರವನ್ನು ಬೆಂಬಲಿಸಲು ಕಾಂಗ್ರೆಸ್ ಒಪ್ಪಿದ ಬೆನ್ನಲ್ಲೇ ಈ ನಿರ್ಧಾರ ಪ್ರಕಟಿಸಲಾಗಿದೆ. ಇದಕ್ಕೂ ಮುನ್ನ, ಸುಗ್ರೀವಾಜ್ಞೆ ವಿಚಾರದಲ್ಲಿ ದೆಹಲಿ ಸರ್ಕಾರವನ್ನು ಬೆಂಬಲಿಸುವುದಾಗಿ ಕಾಂಗ್ರೆಸ್ ನಾಯಕ ಪವನ್ ಖೇರಾ ತಿಳಿಸಿದ್ದರು.
ಎಎಪಿಯ ರಾಜಕೀಯ ಕ್ರಿಯಾ ಸಮಿತಿ ಸಭೆ ಇಂದು ನಡೆಯಿತು. ಪ್ರತಿಯೊಂದು ಅಂಶವನ್ನು ವಿವರವಾಗಿ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯು ಸ್ಪಷ್ಟವಾಗಿ ರಾಷ್ಟ್ರವಿರೋಧಿಯಾಗಿದೆ ಎಂದು ಎಎಪಿ ಸಂಸದ ರಾಘವ್ ಚಡ್ಡಾ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್‌ನಿಂದ ತೊಡಗಿ ಆರ್‌ಜೆಡಿ, ಜೆಡಿಯು, ಎನ್‌ಸಿಪಿ, ಸಮಾಜವಾದಿ ಪಕ್ಷ, ಉದ್ಧವ್ ಠಾಕ್ರೆ ಅವರ ಶಿವಸೇನೆ ಎಲ್ಲರೂ ಈ ದೇಶವಿರೋಧಿ ಸುಗ್ರೀವಾಜ್ಞೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಇದನ್ನು ಸೋಲಿಸಲು ನಾವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ರಾಘವ್ ಹೇಳಿದ್ದಾರೆ.
#WATCH | “Congress party will oppose the Centre’s ordinance on Delhi government,” says party leader Pawan Khera. pic.twitter.com/lOaLwK6Jba
— ANI (@ANI) July 16, 2023
ಇದನ್ನೂ ಓದಿ: Lok Sabha Election: ಬಿಜೆಪಿಯನ್ನ ಮಣಿಸಲು ಒಗ್ಗೂಡಿದ ವಿರೋಧ ಪಕ್ಷಗಳು ; ಜು. 18 ರಂದು ಬೆಂಗಳೂರಿನಲ್ಲಿ ಸಭೆ
ಜೂನ್ 23 ರಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದ ಮೊದಲ ಪ್ರತಿಪಕ್ಷಗಳ ಸಮಾವೇಶದ ನಂತರ, ಸುಗ್ರೀವಾಜ್ಞೆ ವಿಚಾರದಲ್ಲಿ ದೆಹಲಿ ಸರ್ಕಾರ ಮತ್ತು ಎಎಪಿಯನ್ನು ಬೆಂಬಲಿಸದ ಪ್ರತಿಪಕ್ಷಗಳ ವಿರುದ್ಧ ಕೇಜ್ರಿವಾಲ್ ಪಕ್ಷ ಆಕ್ರೋಶ ವ್ಯಕ್ತಪಡಿಸಿತ್ತು. ಅದರ ಬೆನ್ನಲ್ಲೇ ಕಾಂಗ್ರೆಸ್ ಹೊರತುಪಡಿಸಿ ಎಲ್ಲಾ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಸುಗ್ರೀವಾಜ್ಞೆ ವಿರುದ್ಧ ಹೋರಾಟಕ್ಕೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡಿದ್ದವು. ಇದೀಗ ಕಾಂಗ್ರೆಸ್ ಸಹ ಅದೇ ಹಾದಿ ಹಿಡಿದಿದ್ದು, ಎಎಪಿ ಕೂಡ ಪ್ರತಿಪಕ್ಷಗಳ ಒಕ್ಕೂಟ ಸೇರಲು ಕಾರಣವಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:57 pm, Sun, 16 July 23