ಮೇ1ರಿಂದ ಶಿರಡಿ ಸಾಯಿ ಬಾಬಾ ದೇವಸ್ಥಾನ ಬಂದ್ ಆಗಲ್ಲ; ಎಂದಿನಂತೆ ನಡೆಯಲಿದೆ ಆರತಿ, ಪೂಜೆ

|

Updated on: Apr 29, 2023 | 12:53 PM

ಸಾಯಿಬಾಬಾ ದೇವಾಲಯ ಬಂದ್ ಆಗಲಿದೆ ಎಂಬ ಸುದ್ದಿಯನ್ನು ನಿರಾಕರಿಸಿದ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (SSST), 2023  ಮೇ1 ಸೋಮವಾರದಂದು ಎಲ್ಲಾ ಆರತಿ, ಪ್ರಾರ್ಥನೆ  ಮತ್ತು ಎಲ್ಲಾ ಧಾರ್ಮಿಕ ಸಂಪ್ರದಾಯಗಳು  ಮುಂದುವರಿಯುತ್ತದೆ

ಮೇ1ರಿಂದ ಶಿರಡಿ ಸಾಯಿ ಬಾಬಾ ದೇವಸ್ಥಾನ ಬಂದ್ ಆಗಲ್ಲ; ಎಂದಿನಂತೆ ನಡೆಯಲಿದೆ ಆರತಿ, ಪೂಜೆ
ಶಿರಡಿ ಸಾಯಿ ಬಾಬಾ ದೇಗುಲ
Follow us on

ಮಹಾರಾಷ್ಟ್ರದ (Maharashtra) ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದಾಗ ಶಿರಡಿ ಸಾಯಿಬಾಬಾ ದೇವಸ್ಥಾನ (Shirdi sai baba temple) ಮೇ 1ರಿಂದ ಅನಿರ್ದಿಷ್ಟಾವಧಿ ಬಂದ್ (indefinite closure)ಆಗಲಿದೆ ಎಂಬ ವರದಿಯನ್ನು ಆಡಳಿತ ಮಂಡಳಿ ನಿರಾಕರಿಸಿದೆ. ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿರುವ ಶಿರಡಿ ಸಾಯಿಬಾಬಾ ದೇಗುಲ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಈ ದೇವಾಲಯವು ಅಹಮದ್‌ನಗರ-ಮನ್ಮಾಡ್ ಹೆದ್ದಾರಿಯಲ್ಲಿದೆ. ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನಿಂದ ಆಡಳಿತ ಇದನ್ನು ನಡೆಸುತ್ತಿದೆ. ಸಾಯಿಬಾಬಾ ದೇವಾಲಯ ಬಂದ್ ಆಗಲಿದೆ ಎಂಬ ಸುದ್ದಿಯನ್ನು ನಿರಾಕರಿಸಿದ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (SSST), 2023  ಮೇ1 ಸೋಮವಾರದಂದು ಎಲ್ಲಾ ಆರತಿ, ಪ್ರಾರ್ಥನೆ  ಮತ್ತು ಎಲ್ಲಾ ಧಾರ್ಮಿಕ ಸಂಪ್ರದಾಯಗಳು  ಮುಂದುವರಿಯುತ್ತದೆ. ಶ್ರೀ ಸಾಯಿ ಪ್ರಸಾದಾಲಯ, ಎಲ್ಲಾ ಭಕ್ತ ನಿವಾಸ ಸ್ಥಳಗಳು ಮತ್ತು ಆಸ್ಪತ್ರೆಗಳು ಇತ್ಯಾದಿಗಳು ಎಂದಿನಂತೆ ನಿಯಮಿತವಾಗಿ ಕಾರ್ಯನಿರ್ವಹಿಸುತ್ತವೆ. ಈ ಮಾಹಿತಿಯನ್ನು ಸಂಸ್ಥಾನದ ಉಸ್ತುವಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಜಾಧವ್ ಅವರು ಒದಗಿಸಿದ್ದಾರೆ ಎಂದು ಟ್ರಸ್ಟ್ ತಮ್ಮ ವೆಬ್​​ಸೈಟ್​​ನಲ್ಲಿ ಹೇಳಿದೆ.

ಪ್ರಾಥಮಿಕವಾಗಿ ಕೈಗಾರಿಕಾ ಸ್ಥಾಪನೆಗಳು, ಮೆಟ್ರೋ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳನ್ನು ರಕ್ಷಿಸುವ ಪಡೆಗಳಾದ CISF ನಿಯೋಜನೆಯ ವಿರುದ್ಧ ಟ್ರಸ್ಟ್ ಪ್ರತಿಭಟನೆಯ ಸೂಚಕವಾಗಿ ದೇವಸ್ಥಾನವನ್ನು ಅನಿರ್ದಿಷ್ಟಾವಧಿ ಬಂದ್ ಮಾಡಲು ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಈ ರೀತಿ ದೇವಾಲಯ ಬಂದ್ ಆದರೆ ಸ್ಥಳೀಯ ಸಮುದಾಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿತ್ತು. ಯಾಕೆಂದರೆ ಇದು ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹೋಟೆಲ್‌ಗಳು ಮತ್ತು ಅಂಗಡಿಗಳನ್ನು ಮುಚ್ಚುವ ಕಾರಣ ಸಾವಿರಾರು ಜನರ ಜೀವನೋಪಾಯದ ಮೇಲೆ ಹೊಡೆತ ಬೀಳುತ್ತಿತ್ತು.

ಇದನ್ನೂ ಓದಿ: Defamation Case: ರಾಹುಲ್ ಗಾಂಧಿ ಅರ್ಜಿ ಗುಜರಾತ್ ಹೈಕೋರ್ಟ್​​ನಲ್ಲಿ ಇಂದು ವಿಚಾರಣೆ

ಇದಲ್ಲದೆ, ಈ ದೇವಾಲಯಕ್ಕೆ ತಮ್ಮ ಭೇಟಿಯನ್ನು ಸಮಯಕ್ಕಿಂತ ಮುಂಚಿತವಾಗಿ ನಿಗದಿಪಡಿಸುವ ಲಕ್ಷಾಂತರ ಭಕ್ತರ ಮೇಲೆಯೂ ಇದು ಪರಿಣಾಮ ಬೀರುತ್ತಿತ್ತು.

ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ದೇವಸ್ಥಾನದ ಆವರಣದ ನಿರ್ವಹಣೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದೆ. ಇದು ಉಚಿತ ಊಟ, ವಸತಿ ಮತ್ತು ಇತರ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ದತ್ತಿ ಶಾಲೆಗಳು ಮತ್ತು ಕಾಲೇಜುಗಳನ್ನು ನಿರ್ವಹಿಸುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Sat, 29 April 23