ಏಷ್ಯಾದ ಅತಿದೊಡ್ಡ ಸ್ಲಂನಲ್ಲಿ ಕೊರೊನಾ ಕಂಟ್ರೋಲ್‌, ಯಶಸ್ಸಿಗೆ ಕಾರಣವಾಯ್ತು ಆ ‘4’ ಸೂತ್ರ!

ದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ಹರಡುವಿಕೆಯ ಆರಂಭಿಕ ದಿನಗಳಲ್ಲಿ ಹೆಚ್ಚು ಭಯ ಸೃಷ್ಟಿಸಿದ್ದೆ ಮುಂಬೈನ ಧಾರಾವಿ ಸ್ಲಂ, ಧಾರಾವಿ ಸ್ಲಂನಲ್ಲಿ ರಾಕೆಟ್‌ ವೇಗದಲ್ಲಿ ಕೊರೊನಾ ಹಬ್ಬುತ್ತಿತ್ತು. ಎಷ್ಟು ವೇಗದಲ್ಲಿ ಏರಿಕೆ ಕಂಡಿತ್ತು ಅಷ್ಟೇ ವೇಗದಲ್ಲಿ ಕೊರೊನಾ ಕಂಟ್ರೋಲ್‌ಗೆ ಬಂದಿದೆ. ಧಾರಾವಿಯಲ್ಲಿ ಕೊರೊನಾ ಕಂಟ್ರೋಗೆ ಪ್ರಮುಖ ನಾಲ್ಕು ಸೂತ್ರಗಳು ಕಾರಣವಾಗಿವೆ. ಕೊರೊನಾ ಅಬ್ಬರಿಸಿದ್ದ ಏರಿಯಾದಲ್ಲೀಗ ಅಚ್ಚರಿ ಯಶಸ್ಸು! ಧಾರಾವಿ ಸ್ಲಂ.. ಮುಂಬೈನಲ್ಲಿರೋ ಈ ಚಿಕ್ಕ ಏರಿಯಾ ಏಷ್ಯಾದ ಅತಿದೊಡ್ಡ ಸ್ಲಂ. ಕೇವಲ 2.1 ಚದರ ಕಿಲೋಮೀಟರ್‌ ಇರೋ ಮೂಲಸೌಕರ್ಯದಿಂದ […]

ಏಷ್ಯಾದ ಅತಿದೊಡ್ಡ ಸ್ಲಂನಲ್ಲಿ ಕೊರೊನಾ ಕಂಟ್ರೋಲ್‌, ಯಶಸ್ಸಿಗೆ ಕಾರಣವಾಯ್ತು ಆ ‘4’ ಸೂತ್ರ!
Follow us
ಆಯೇಷಾ ಬಾನು
|

Updated on: Jul 06, 2020 | 6:43 AM

ದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ಹರಡುವಿಕೆಯ ಆರಂಭಿಕ ದಿನಗಳಲ್ಲಿ ಹೆಚ್ಚು ಭಯ ಸೃಷ್ಟಿಸಿದ್ದೆ ಮುಂಬೈನ ಧಾರಾವಿ ಸ್ಲಂ, ಧಾರಾವಿ ಸ್ಲಂನಲ್ಲಿ ರಾಕೆಟ್‌ ವೇಗದಲ್ಲಿ ಕೊರೊನಾ ಹಬ್ಬುತ್ತಿತ್ತು. ಎಷ್ಟು ವೇಗದಲ್ಲಿ ಏರಿಕೆ ಕಂಡಿತ್ತು ಅಷ್ಟೇ ವೇಗದಲ್ಲಿ ಕೊರೊನಾ ಕಂಟ್ರೋಲ್‌ಗೆ ಬಂದಿದೆ. ಧಾರಾವಿಯಲ್ಲಿ ಕೊರೊನಾ ಕಂಟ್ರೋಗೆ ಪ್ರಮುಖ ನಾಲ್ಕು ಸೂತ್ರಗಳು ಕಾರಣವಾಗಿವೆ.

ಕೊರೊನಾ ಅಬ್ಬರಿಸಿದ್ದ ಏರಿಯಾದಲ್ಲೀಗ ಅಚ್ಚರಿ ಯಶಸ್ಸು! ಧಾರಾವಿ ಸ್ಲಂ.. ಮುಂಬೈನಲ್ಲಿರೋ ಈ ಚಿಕ್ಕ ಏರಿಯಾ ಏಷ್ಯಾದ ಅತಿದೊಡ್ಡ ಸ್ಲಂ. ಕೇವಲ 2.1 ಚದರ ಕಿಲೋಮೀಟರ್‌ ಇರೋ ಮೂಲಸೌಕರ್ಯದಿಂದ ವಂಚಿತವಾಗಿರುವ ಈ ಕೊಳೆಗೇರಿಯಲ್ಲಿ ಕೊರೊನಾ ಮಾತ್ರವಲ್ಲ ಯಾವುದೇ ಸೋಂಕು ಕೂಡಾ ಅತಿವೇಗವಾಗಿ ಹರಡುವಂತಹ ಪರಿಸ್ಥಿತಿ. ಆಸ್ಕರ್‌ ಗೆದ್ದ ಸ್ಲಂ ಡಾಗ್‌ ಮಿಲಿಯನೇರ್‌ ಸಿನಿಮಾ ಆಗಿದ್ದು ಇದೇ ಏರಿಯಾ ಆಧರಿಸಿ. ಇಂತಹ ಏರಿಯಾದಲ್ಲೇ ಕೊರೊನಾ ರಾಕೆಟ್‌ ವೇಗದಲ್ಲಿ ವ್ಯಾಪಿಸಿತ್ತು.

ಒಂದಲ್ಲ ಎರಡಲ್ಲ, ಧಾರಾವಿ ಸ್ಲಂನಲ್ಲಿ ಏಪ್ರಿಲ್‌ನಲ್ಲಿ 491 ಮಂದಿಗೆ ಕೊರೊನಾ ಹಬ್ಬಿತ್ತು. ಈ ಸಂಖ್ಯೆ ಮೇನಲ್ಲಿ 1216ಕ್ಕೆ ಏರಿಯಾಗಿತ್ತು. ಬರೋಬ್ಬರಿ 80 ಮಂದಿಯನ್ನ ಹೆಮ್ಮಾರಿ ಬಲಿಪಡೆದಿತ್ತು. ಇಡೀ ಧಾರಾವಿ ಸ್ಲಂ ಕೊರೊನಾ ಕೂಪವಾಗುತ್ತೆ ಎಂಬ ಆತಂಕ ಶುರುವಾಗಿತ್ತು. ಆದ್ರೆ, ಅಚ್ಚರಿಯೆಂಬಂತೆ ಧಾರಾವಿಯಲ್ಲಿ ಕೊರೊನಾ ಕಂಟ್ರೋಲ್‌ಗೆ ಬಂದಿದೆ. ಕಳೆದ ತಿಂಗಳಲ್ಲಿ 274 ಪ್ರಕರಣಗಳು ದಾಖಲಾಗಿ 6 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಗ್ರಾಫ್ ಒಮ್ಮಲೇ ಇಳಿಕೆಯಾಗಿದೆ.

ಧಾರಾವಿಯಲ್ಲಿ ಕಮ್ಮಿಯಾಯ್ತು ಕೊರೊನಾ! ಧಾರಾವಿಯಲ್ಲಿ ಈ ಪ್ರಮಾಣದ ಕೊರೊನಾ ನಿಯಂತ್ರಣಕ್ಕೆ ಕಾರಣವಾಗಿದ್ದು, ನಾಲ್ಕು ಟಿಗಳು ಅಂದ್ರೆ ನಾಲ್ಕು ಸೂತ್ರ ಎನ್ನಲಾಗ್ತಿದೆ.

ಧಾರಾವಿಯ 4‘T’ ಸೂತ್ರ! ಮೊದಲ T = ಟ್ರೇಸಿಂಗ್‌ – ಸೋಂಕಿತರನ್ನ ಹುಡುಕುವುದು ಎರಡನೇ T = ಟ್ರ್ಯಾಕಿಂಗ್‌ – ಸೋಂಕಿತರ ಸಂಪರ್ಕ ಪತ್ತೆ ಮೂರನೇ T = ಟೆಸ್ಟಿಂಗ್ – ವೇಗವಾಗಿ ಟೆಸ್ಟಿಂಗ್‌ ಮಾಡಿದ್ದು ನಾಲ್ಕನೇ T = ಟ್ರೀಟೀಂಗ್‌ – ಸೋಂಕಿತರಿಗೆ ವೇಗವಾಗಿ ಚಿಕಿತ್ಸೆ

ಈ ಕೆಲಸಕ್ಕಾಗಿ ಬಿಎಂಸಿ ಆರೋಗ್ಯ ಸೇವಾ ಕಾರ್ಯಕರ್ತರು 4.76 ಲಕ್ಷ ಮಂದಿಯನ್ನು ಇಲ್ಲಿಯವರೆಗೆ ಸಂಪರ್ಕಿಸಿದ್ದಾರೆ. ಕ್ರಿಟಿಕಲ್‌ ಸ್ಟೇಜ್ನಲ್ಲಿರುವ 8,246 ಹಿರಿಯ ನಾಗರಿಕರನ್ನು ಗುರುತಿಸಿ ಉಳಿದವರಿಂದ ಪ್ರತ್ಯೇಕಿಸಿದ್ರು. ಸುಮಾರು ಆರು ಲಕ್ಷ ಮಂದಿಯನ್ನು ಪರಿಶೀಲನೆಗೆ ಒಳಪಡಿಸಿದ್ರು. ಸುಸಜ್ಜಿತವಾದ ಕರೊನಾ ಕೇರ್‌ ಕೇಂದ್ರಗಳನ್ನು ಹಾಗೂ ಕ್ವಾರಂಟೈನ್‌ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ರು. 2450 ಮಂದಿ ಆರೋಗ್ಯ ಕಾರ್ಯಕರ್ತರನ್ನು ಧಾರಾವಿ ಪ್ರದೇಶವೊಂದಕ್ಕೇ ನಿಯೋಜಿಸಲಾಗಿದೆ. ಹೀಗಾಗಿ ಕೊರೊನಾ ಕಂಟ್ರೋಲ್ ಗೆ ಬಂದಿದೆ. ಬೆಂಗಳೂರಿನಲ್ಲೂ ಸೋಂಕು ಹೆಚ್ಚಾಗ್ತಿರೋವಾಗ್ಲೇ, ಇತರೆಡೆಯ ಕೊರೊನಾ ಕಂಟ್ರೋಲ್‌ ಮಾದರಿ ಅಳವಡಿಸಿಕೊಳ್ಳಬಹುದು. ಅದರಲ್ಲಿ ಧಾರಾವಿ ಸ್ಲಂ ಮಾದರಿ ಕೂಡ ಒಂದಾಗಬಹುದು.