ಡೆಹ್ರಾಡೂನ್: ಉತ್ತರಾಖಂಡ್ನ ರಾಜಧಾನಿ ಡೆಹ್ರಾಡೂನ್ನಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ನಡೆದಿದೆ. ಇಲ್ಲಿನ ಚಕ್ರತಾ ಪ್ರದೇಶದ ಬುಲ್ಹಾದ್-ಬೈಲಾ ರಸ್ತೆಯಲ್ಲಿ ವಾಹವೊಂದು ಕಂದಕಕ್ಕೆ ಬಿದ್ದ ಪರಿಣಾಮ 13 ಮಂದಿ ದುರ್ಮರಣಹೊಂದಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದೊಂದು ಯುಟಿಲಿಟಿ ವಾಹನವಾಗಿದ್ದು ಡೆಹ್ರಾಡೂನ್ನ ಬೈಲಾ ಗ್ರಾಮದಿಂದ ವಿಕಾಸನಗರಕ್ಕೆ ಹೋಗುತ್ತಿದ್ದಾಗ ಚಕ್ರತಾ ಬಳಿ ಕಲ್ಲಿನಿಂದ ಕೂಡಿದ ಕಂದಕಕ್ಕೆ ಬಿದ್ದಿದೆ. ಇದರಲ್ಲಿ ಸುಮಾರು 16 ಜನರಿದ್ದರು ಎಂದು ಮಾಹಿತಿ ಸಿಕ್ಕಿದೆ. ಮೃತದೇಹಗಳನ್ನು ಕಂದಕದಿಂದ ಹೊರಗೆ ತೆಗೆಯಲಾಗಿದೆ. ಈ ಪ್ರದೇಶ ಸ್ವಲ್ಪ ದುರ್ಗಮವಾಗಿದ್ದರಿಂದ ರಕ್ಷಣಾ ತಂಡಗಳು ಅಲ್ಲಿಗೆ ತಲುಪಲು ವಿಳಂಬವಾಯಿತು. ಆದರೆ ಸ್ಥಳೀಯ ಜನರು ಸುಮ್ಮನೆ ಕೂರಲಿಲ್ಲ. ಗ್ರಾಮಸ್ಥರೇ ಸೇರಿಕೊಂಡು ರಕ್ಷಣಾ ಕಾರ್ಯ ನಡೆಸಿದರು. ಸದ್ಯ ಸ್ಥಳಕ್ಕೆ ಪೊಲೀಸರು, ಎಸ್ಡಿಆರ್ಎಫ್ ಸಿಬ್ಬಂದಿ, ಜಿಲ್ಲಾಧಿಕಾರಿ ಸೇರಿ ಹಲವು ಧಾವಿಸಿದ್ದಾರೆ. ಹಾಗೇ ಪ್ರತಿಪಕ್ಷ ನಾಯಕ ಪ್ರೀತಂ ಸಿಂಗ್ ಕೂಡ ಸ್ಥಳಕ್ಕೆ ತೆರಳಿ, ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ.
ಇದನ್ನೂ ಓದಿ: ದೇಶಾದ್ಯಂತ ಸರ್ಕಾರಿ ಕಚೇರಿಗಳನ್ನು ಗಲ್ಲ ಮಂಡಿಗಳನ್ನಾಗಿ ಪರಿವರ್ತಿಸುವ ಎಚ್ಚರಿಕೆ ನೀಡಿದ ರಾಕೇಶ್ ಟಿಕಾಯತ್
Coronavirus cases in India: ಭಾರತದಲ್ಲಿ 12,830 ಹೊಸ ಕೊವಿಡ್ ಪ್ರಕರಣ ಪತ್ತೆ, 446 ಮಂದಿ ಸಾವು
Published On - 11:27 am, Sun, 31 October 21