National Unity Day 2021: ರಾಷ್ಟ್ರೀಯ ಏಕತಾ ದಿವಸ್ ಆಚರಣೆ; ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಅಮಿತ್ ಶಾರಿಂದ ಮಾಲಾರ್ಪಣೆ
ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಕಾರ್ಯಕ್ರಮವನ್ನು ಇಂದು ಗುಜರಾತ್ನ ಕೇವಾಡಿಯಾದಲ್ಲಿರುವ 182 ಮೀಟರ್ ಎತ್ತರದ ಏಕತಾ ಪ್ರತಿಮೆ ಸಮೀಪವೇ ನಡೆಸಲಾಗುವುದು. ಈ ಮೊದಲು ಪ್ರಧಾನಿ ನರೇಂದ್ರ ಮೋದಿಯವರೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಗುಜರಾತ್ ಮುಖ್ಯಮಂತ್ರಿ ಕಚೇರಿ ತಿಳಿಸಿತ್ತು.
ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 146ನೇ ಜನ್ಮಜಯಂತಿ. ದೇಶಾದ್ಯಂತ ರಾಷ್ಟ್ರೀಯ ಏಕತಾ ದಿನ (National Unity Day) ಆಚರಿಸಲಾಗುತ್ತಿದೆ. ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿರುವ ಪಟೇಲ್ ಜಿ ಜನ್ಮದಿನ (ಅಕ್ಟೋಬರ್ 31)ವನ್ನು 2014ರಿಂದಲೂ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ತಿಂಗಳ ಕಾರ್ಯಕ್ರಮ ಮನ್ ಕೀ ಬಾತ್ನಲ್ಲಿ ಕೂಡ ರಾಷ್ಟ್ರೀಯ ಏಕತಾ ದಿನ ಆಚರಣೆಯನ್ನು ನೆನಪಿಸಿದ್ದರು. ಸದ್ಯ ರೋಮ್ ಪ್ರವಾಸದಲ್ಲಿರುವ ಅವರು, ಬೆಳಗ್ಗೆ ಟ್ವೀಟ್ ಮಾಡಿ ಸರ್ದಾರ್ ವಲ್ಲಭಭಾಯಿ ಅವರ ಜೀವನದ ಬಗ್ಗೆ ತಾವು ಮಾತನಾಡಿದ ವಿಡಿಯೋವೊಂದನ್ನು ಶೇರ್ ಮಾಡಿಕೊಂಡು ಗೌರವ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅನುಪಸ್ಥಿತಿಯಲ್ಲಿ ಇಂದು ಗೃಹ ಸಚಿವ ಅಮಿತ್ ಶಾ ಇಂದು ಗುಜರಾತ್ನ ಕೇವಾಡಿಯಾದಲ್ಲಿರುವ ವಲ್ಲಭಭಾಯಿಯವರ 182 ಮೀಟರ್ ಎತ್ತರದ ಏಕತಾ ಮೂರ್ತಿಯ ಬಳಿ ತೆರಳಿ ಗೌರವ ಸಲ್ಲಿಸಿದ್ದಾರೆ. ರಾಷ್ಟ್ರೀಯ ಏಕತಾ ದಿನ ಸಮಾರಂಭ ಆಚರಣೆಗೆ ಅಮಿತ್ ಶಾ ಇಂದು ಮುಖ್ಯ ಅತಿಥಿಯಾಗಿದ್ದಾರೆ. ಸರ್ದಾರ್ ವಲ್ಲಭಭಾಯಿ ಅವರ ಬಗ್ಗೆ ಇಂದು ವಿಡಿಯೋ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ರಾಷ್ಟ್ರದ ಹಿರೋ ಸರ್ದಾರ್ ವಲ್ಲಭಭಾಯಿ ಪಟೇಲ್ರಿಗೆ ಇಂದು ಇಡೀ ರಾಷ್ಟ್ರ ಗೌರವ ಸಲ್ಲಿಸುತ್ತಿದೆ. ಅವರು ತಮ್ಮ ಜೀವನದ ಪ್ರತಿ ಕ್ಷಣವನ್ನೂ ಏಕ್ ಭಾರತ್, ಶ್ರೇಷ್ಠ ಭಾರತಕ್ಕಾಗಿ ಮುಡಿಪಾಗಿಟ್ಟಿದದರು. ಇವತ್ತಿಗೂ ಕೋಟ್ಯಂತರ ಭಾರತೀಯರ ಹೃದಯದಲ್ಲಿ ಅವರಿಗೆ ವಿಶೇಷ ಸ್ಥಾನವಿದೆ ಎಂದು ಹೇಳಿದ್ದಾರೆ. ಹಾಗೇ ಇಂದು ರಾಷ್ಟ್ರಪತಿ ರಾಮನಾಥ ಕೋವಿಂದ್, ಸಚಿವರಾದ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಮತ್ತಿತರ ಗಣ್ಯರು ಸರ್ದಾರ್ ವಲ್ಲಭಭಾಯಿ ಅವರಿಗೆ ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ.
A tribute to the great Sardar Patel. https://t.co/P2eUmvo61n
— Narendra Modi (@narendramodi) October 31, 2021
ಏಕತಾ ಮೂರ್ತಿ ಸಮೀಪವೇ ಕಾರ್ಯಕ್ರಮ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಕಾರ್ಯಕ್ರಮವನ್ನು ಇಂದು ಗುಜರಾತ್ನ ಕೇವಾಡಿಯಾದಲ್ಲಿರುವ 182 ಮೀಟರ್ ಎತ್ತರದ ಏಕತಾ ಪ್ರತಿಮೆ ಸಮೀಪವೇ ನಡೆಸಲಾಗುವುದು. ಈ ಮೊದಲು ಪ್ರಧಾನಿ ನರೇಂದ್ರ ಮೋದಿಯವರೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಗುಜರಾತ್ ಮುಖ್ಯಮಂತ್ರಿ ಕಚೇರಿ ತಿಳಿಸಿತ್ತು. ಆದರೆ ಅವರು ರೋಮ್ನಲ್ಲಿ ಇರುವ ಕಾರಣ ಅಮಿತ್ ಶಾ ಆಗಮಿಸಿದ್ದಾರೆ. ಇಂದು ಅಮಿತ್ ಶಾ ಅವರು ಮೊದಲು ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಅದರ ಹೊರತಾಗಿ ಐಟಿಬಿಪಿ, ಎಸ್ಎಸ್ಬಿ, ಸಿಐಎಸ್ಎಫ್, ಸಿಆರ್ಪಿಎಫ್ ಮತ್ತು ಬಿಎಸ್ಎಫ್ನ 75 ಸೈಕ್ಲಿಸ್ಟ್ಗಳು, ತ್ರಿಪುರ, ತಮಿಳುನಾಡು, ಜಮ್ಮು-ಕಾಶ್ಮೀರ, ಗುಜರಾತ್ ಪೊಲೀಸ್ ಪಡೆಗಳ 101 ಮೋಟರ್ಸೈಕಲಿಸ್ಟ್ಗಳು ಪರೇಡ್ನಲ್ಲಿ ಭಾಗವಹಿಸಲಿದ್ದಾರೆ.
Glimpses from the #NationalUnityDay event in Kevadia, Gujarat. pic.twitter.com/OFwfalrrQ6
— Amit Shah (@AmitShah) October 31, 2021
2014ರಿಂದಲೂ ಆಚರಣೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರತಿವರ್ಷ ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಏಕತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಈ ಸಮಾರಂಭದ ಭಾಗವಾಗಿ ಪ್ರತಿವರ್ಷ ರಾಷ್ಟ್ರಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ದೇಶಾದ್ಯಂತ ಪೊಲೀಸ್ ಸಿಬ್ಬಂದಿ ಏಕತಾ ಪರೇಡ್ ನಡೆಸುತ್ತಾರೆ. ಹೀಗೆ ವಿವಿಧ ರಾಜ್ಯಗಳ ಪೊಲೀಸರು ಸೈಕ್ಲಿಂಗ್, ಮೋಟರ್ ಸೈಕ್ಲಿಂಗ್ಗಳನ್ನು ನಡೆಸಿ, ಏಕತಾ ದಿನದಂದು ಕೇವಾಡಿಯಾಕ್ಕೆ ಆಗಮಿಸುತ್ತಾರೆ.
लौह पुरुष सरदार वल्लभभाई पटेल की जयंती पर मेरी विनम्र श्रद्धांजलि। देश की एकता के प्रतीक, सरदार पटेल का हमारे अग्रणी राष्ट्र निर्माताओं में उच्च स्थान है। नैतिकता पर आधारित कार्य-संस्कृति की स्थापना तथा राष्ट्र-सेवा के लिए देशवासी सरदार पटेल के प्रति सदैव ऋणी रहेंगे।
— President of India (@rashtrapatibhvn) October 31, 2021
दृढ़ संकल्प और मजबूत इच्छाशक्ति के प्रतीक तथा आधुनिक भारत के शिल्पकार भारत रत्न लौह पुरुष सरदार वल्लभ भाई पटेल जी के जयंती दिवस पर उन्हें कोटि-कोटि नमन। सभी को राष्ट्रीय एकता दिवस की शुभकामनाएं। #RashtriyaEktaDiwas #SardarVallabhbhaiPatel #NationalUnityDay pic.twitter.com/mDFJBh4HXz
— Nitin Gadkari (@nitin_gadkari) October 31, 2021
ಇದನ್ನೂ ಓದಿ: ಮಂತ್ರಾಲಯದಲ್ಲಿ ಪುನೀತ್ ಬಂದಾಗ ತೊಟ್ಟಿಲು ಅಲುಗಾಡಿದ ವಿಡಿಯೋ ವೈರಲ್; ಪೀಠಾಧಿಪತಿಗಳಿಂದ ಸ್ಪಷ್ಟನೆ
Viral Video: ಅಬ್ಬಬ್ಬಾ! ದೈತ್ಯ ಹೆಬ್ಬಾವಿನ ಎದುರು ಮಲಗಿರುವ ವ್ಯಕ್ತಿ ನೋಡಿ; ವಿಡಿಯೊ ವೈರಲ್