ಉತ್ತರಾಖಂಡ್​​ನಲ್ಲಿ ಭೀಕರ ಅಪಘಾತ; ಆಳವಾದ ಕಂದಕಕ್ಕೆ ಬಿದ್ದ ವಾಹನ, 13 ಮಂದಿ ದುರ್ಮರಣ

ಇದೊಂದು ಯುಟಿಲಿಟಿ ವಾಹನವಾಗಿದ್ದು ಡೆಹ್ರಾಡೂನ್​​ನ ಬೈಲಾ ಗ್ರಾಮದಿಂದ ವಿಕಾಸನಗರಕ್ಕೆ ಹೋಗುತ್ತಿದ್ದಾಗ ಚಕ್ರತಾ ಬಳಿ ಕಲ್ಲಿನಿಂದ ಕೂಡಿದ ಕಂದಕಕ್ಕೆ ಬಿದ್ದಿದೆ. ಇದರಲ್ಲಿ ಸುಮಾರು 16 ಜನರಿದ್ದರು ಎಂದು ಮಾಹಿತಿ ಸಿಕ್ಕಿದೆ.

ಉತ್ತರಾಖಂಡ್​​ನಲ್ಲಿ ಭೀಕರ ಅಪಘಾತ; ಆಳವಾದ ಕಂದಕಕ್ಕೆ ಬಿದ್ದ ವಾಹನ, 13 ಮಂದಿ ದುರ್ಮರಣ
ಅಪಘಾತ ನಡೆದ ಸ್ಥಳ
Follow us
| Updated By: Lakshmi Hegde

Updated on:Oct 31, 2021 | 11:28 AM

ಡೆಹ್ರಾಡೂನ್​: ಉತ್ತರಾಖಂಡ್​​ನ ರಾಜಧಾನಿ ಡೆಹ್ರಾಡೂನ್​ನಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ನಡೆದಿದೆ. ಇಲ್ಲಿನ ಚಕ್ರತಾ ಪ್ರದೇಶದ ಬುಲ್ಹಾದ್​-ಬೈಲಾ ರಸ್ತೆಯಲ್ಲಿ ವಾಹವೊಂದು ಕಂದಕಕ್ಕೆ ಬಿದ್ದ ಪರಿಣಾಮ 13 ಮಂದಿ ದುರ್ಮರಣಹೊಂದಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದೊಂದು ಯುಟಿಲಿಟಿ ವಾಹನವಾಗಿದ್ದು ಡೆಹ್ರಾಡೂನ್​​ನ ಬೈಲಾ ಗ್ರಾಮದಿಂದ ವಿಕಾಸನಗರಕ್ಕೆ ಹೋಗುತ್ತಿದ್ದಾಗ ಚಕ್ರತಾ ಬಳಿ ಕಲ್ಲಿನಿಂದ ಕೂಡಿದ ಕಂದಕಕ್ಕೆ ಬಿದ್ದಿದೆ. ಇದರಲ್ಲಿ ಸುಮಾರು 16 ಜನರಿದ್ದರು ಎಂದು ಮಾಹಿತಿ ಸಿಕ್ಕಿದೆ. ಮೃತದೇಹಗಳನ್ನು ಕಂದಕದಿಂದ ಹೊರಗೆ ತೆಗೆಯಲಾಗಿದೆ. ಈ ಪ್ರದೇಶ ಸ್ವಲ್ಪ ದುರ್ಗಮವಾಗಿದ್ದರಿಂದ ರಕ್ಷಣಾ ತಂಡಗಳು ಅಲ್ಲಿಗೆ ತಲುಪಲು ವಿಳಂಬವಾಯಿತು. ಆದರೆ ಸ್ಥಳೀಯ ಜನರು ಸುಮ್ಮನೆ ಕೂರಲಿಲ್ಲ. ಗ್ರಾಮಸ್ಥರೇ ಸೇರಿಕೊಂಡು ರಕ್ಷಣಾ ಕಾರ್ಯ ನಡೆಸಿದರು. ಸದ್ಯ ಸ್ಥಳಕ್ಕೆ ಪೊಲೀಸರು, ಎಸ್​ಡಿಆರ್​ಎಫ್​ ಸಿಬ್ಬಂದಿ, ಜಿಲ್ಲಾಧಿಕಾರಿ ಸೇರಿ ಹಲವು ಧಾವಿಸಿದ್ದಾರೆ.  ಹಾಗೇ ಪ್ರತಿಪಕ್ಷ ನಾಯಕ ಪ್ರೀತಂ ಸಿಂಗ್​ ಕೂಡ ಸ್ಥಳಕ್ಕೆ ತೆರಳಿ, ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ಸರ್ಕಾರಿ ಕಚೇರಿಗಳನ್ನು ಗಲ್ಲ ಮಂಡಿಗಳನ್ನಾಗಿ ಪರಿವರ್ತಿಸುವ ಎಚ್ಚರಿಕೆ ನೀಡಿದ ರಾಕೇಶ್​ ಟಿಕಾಯತ್​

Coronavirus cases in India: ಭಾರತದಲ್ಲಿ 12,830 ಹೊಸ ಕೊವಿಡ್ ಪ್ರಕರಣ ಪತ್ತೆ, 446 ಮಂದಿ ಸಾವು

Published On - 11:27 am, Sun, 31 October 21

ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ