ಜಮ್ಮುವಿನಲ್ಲಿ ಅವಳಿ ಸ್ಫೋಟದ ಬೆನ್ನಲ್ಲೇ ಇಂದು 6ಕೆಜಿ ತೂಕದ ಐಇಡಿ ಪತ್ತೆ; ದೊಡ್ಡದೊಂದು ಉಗ್ರದಾಳಿ ತಪ್ಪಿತು ಎಂದ ಡಿಜಿಪಿ

| Updated By: Lakshmi Hegde

Updated on: Jun 27, 2021 | 4:10 PM

ಭಾರತೀಯ ವಾಯುಪಡೆ ಟ್ವೀಟ್​ ಮಾಡಿದ್ದು, ಜಮ್ಮುವಿನ ಏರ್​ಫೋರ್ಸ್​ ಸ್ಟೇಶನ್​​​ನಲ್ಲಿ ನಿನ್ನೆ ತಡರಾತ್ರಿ ಎರಡು ಕಡಿಮೆ ಸಾಂದ್ರತೆಯುಳ್ಳ ಸ್ಫೋಟಕಗಳು ಸ್ಫೋಟಗೊಂಡಿವೆ. ನಮ್ಮ ಯಾವುದೇ ಸಾಧನ, ಉಪಕರಣಗಳಿಗೆ ಹಾನಿಯಾಗಿಲ್ಲ ಎಂದು ತಿಳಿಸಿದೆ.

ಜಮ್ಮುವಿನಲ್ಲಿ ಅವಳಿ ಸ್ಫೋಟದ ಬೆನ್ನಲ್ಲೇ ಇಂದು 6ಕೆಜಿ ತೂಕದ ಐಇಡಿ ಪತ್ತೆ; ದೊಡ್ಡದೊಂದು ಉಗ್ರದಾಳಿ ತಪ್ಪಿತು ಎಂದ ಡಿಜಿಪಿ
ಜಮ್ಮು ಏರ್​ಫೋರ್ಸ್ ಸ್ಟೇಶನ್​
Follow us on

ಜಮ್ಮು ಏರ್​ಪೋರ್ಟ್​​ನಲ್ಲಿರುವ ಏರ್​ಫೋರ್ಸ್​​ನಲ್ಲಿ ನಿನ್ನೆ ತಡರಾತ್ರಿ ಕೇವಲ ಐದೇ ನಿಮಿಷಗಳ ಅಂತರದಲ್ಲಿ ಅವಳಿ ಸ್ಫೋಟ ನಡೆದ ಬೆನ್ನಲ್ಲೇ, ಇಂದು ಮಧ್ಯಾಹ್ನ ಸುಮಾರು 5-6 ಕೆಜಿಯಷ್ಟು ಭಾರದ ಐಇಡಿ (ಸುಧಾರಿತ ಸ್ಫೋಟಕ ಸಾಧನ)ಯನ್ನು ಜಮ್ಮು-ಕಾಶ್ಮೀರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದು ಉಗ್ರರ ಕೃತ್ಯ. ಐಇಡಿಯನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳುವ ಮೂಲಕ ದೊಡ್ಡ ಮಟ್ಟದ ದಾಳಿಯನ್ನು ತಪ್ಪಿಸಿದಂತಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ, ಲಷ್ಕರ್​ ಎ ತೊಯ್ಬಾ ಸಂಘಟನೆಗೆ ಸೇರಿದವನೊಬ್ಬನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ.

ನಿನ್ನೆ ತಡರಾತ್ರಿ ಸಂಭವಿಸಿದ ಅವಳಿ ಸ್ಫೋಟದ ಸಂಬಂಧ ಈಗಾಗಲೇ ತನಿಖೆ ಶುರುವಾಗಿದೆ. ಒಂದು ಏರ್​ಫೋರ್ಸ್ ಸ್ಟೇಶನ್​ನ ಮೇಲ್ಛಾವಣಿಯಿಂದ ಸ್ಫೋಟಗೊಂಡಿದ್ದು, ಇನ್ನೊಂದು ನೆಲದಿಂದ ಸ್ಫೋಟವಾಗಿದೆ. ಈ ಸ್ಫೋಟಕ್ಕಾಗಿ ದುಷ್ಕರ್ಮಿಗಳು ಡ್ರೋನ್​ ಬಳಸಿದ್ದಾಗಿ ಸೇನಾ ಮೂಲಗಳು ತಿಳಿಸಿವೆ. ಇನ್ನು ಐಇಡಿ ವಶಪಡಿಸಿಕೊಂಡಿದ್ದರಿಂದ ದೊಡ್ಡದೊಂದು ಅನಾಹುತ ತಪ್ಪಿದಂತಾಗಿದೆ. ನಾವು ಶೀಘ್ರವೇ ಇದಕ್ಕೆ ಸಂಬಂಧಪಟ್ಟವರನ್ನು ಬಂಧಿಸುತ್ತೇವೆ ಎಂದು ಜಮ್ಮು-ಕಾಶ್ಮೀರ ಡಿಜಿಪಿ ದಿಲ್​ಬಾಗ್​ ಸಿಂಗ್ ಹೇಳಿದ್ದಾರೆ.

ಭಾರತೀಯ ವಾಯುಪಡೆ ಟ್ವೀಟ್​ ಮಾಡಿದ್ದು, ಜಮ್ಮುವಿನ ಏರ್​ಫೋರ್ಸ್​ ಸ್ಟೇಶನ್​​​ನಲ್ಲಿ ನಿನ್ನೆ ತಡರಾತ್ರಿ ಎರಡು ಕಡಿಮೆ ಸಾಂದ್ರತೆಯುಳ್ಳ ಸ್ಫೋಟಕಗಳು ಸ್ಫೋಟಗೊಂಡಿವೆ. ನಮ್ಮ ಯಾವುದೇ ಸಾಧನ, ಉಪಕರಣಗಳಿಗೆ ಹಾನಿಯಾಗಿಲ್ಲ. ಯಾರದ್ದೂ ಪ್ರಾಣ ಹಾನಿಯಾಗಿಲ್ಲ. ತನಿಖೆ ಚುರುಕುಗೊಂಡಿದೆ ಎಂದು ಹೇಳಿದೆ. ಡ್ರೋನ್​ನಿಂದ ಬಿದ್ದು, ಸ್ಫೋಟಗೊಂಡಿದ್ದೂ ಸಹ ಐಇಡಿಯೇ ಆಗಿದ್ದು, ಅದನ್ನು ಹೆಲಿಪ್ಯಾಡ್​​ನಲ್ಲಿ ನಿಂತ ಏರ್​ಕ್ರಾಫ್ಟ್​ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಅದರ ಹೊರತಾಗಿ ಈಗ ಮತ್ತೆ 5-6 ಕೆಜಿ ತೂಕದ ಐಇಡಿಯನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಮುಂದಿನ ಮುಖ್ಯಮಂತ್ರಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದವರಿಗೆ ನೊಟೀಸ್: ಕೋಳಿವಾಡ

(Major terrorist attack averted in Jammu said Jammu Kashmir DGP Dilbagh Singh)