ಗಲಭೆ, ಹಿಂಸಾಚಾರ ಮುನ್ನಡೆಸುವವರು ನಾಯಕರಲ್ಲ- ಬಿಪಿನ್ ರಾವತ್
ದೆಹಲಿ: ಭಾರತದಲ್ಲಿ ಸೇನಾ ಮುಖ್ಯಸ್ಥರಾದವರು ರಾಜಕೀಯವಾಗಿ ಯಾವುದೇ ಹೇಳಿಕೆ ಕೊಡಬಾರದು. ರಾಜಕೀಯದಿಂದ ದೂರ ಇರಬೇಕು. ಆದ್ರೆ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಈಗ ರಾಜಕೀಯ ಸ್ವರೂಪದ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಸಿಎಎ ವಿರೋಧಿ ಪ್ರತಿಭಟನೆಗಳ ವಿರುದ್ಧ ಬಿಪಿನ್ ರಾವತ್ ಕೊಟ್ಟಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಗಲಭೆ, ಹಿಂಸಾಚಾರ ಮುನ್ನಡೆಸುವವರು ನಾಯಕರಲ್ಲ: ಭಾರತೀಯ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾಮಾನ್ಯವಾಗಿ ಸೇನೆಗೆ ಸಂಬಂಧಪಟ್ಟ ಹೇಳಿಕೆಗಳನ್ನ ಮಾಧ್ಯಮಗಳಿಗೆ ನೀಡ್ತಾರೆ. ಆದ್ರೆ, ಗುರುವಾರ ಸಿಎಎ ವಿರೋಧಿ ಪ್ರತಿಭಟನೆಗಳ ಸಂಬಂಧ […]
ದೆಹಲಿ: ಭಾರತದಲ್ಲಿ ಸೇನಾ ಮುಖ್ಯಸ್ಥರಾದವರು ರಾಜಕೀಯವಾಗಿ ಯಾವುದೇ ಹೇಳಿಕೆ ಕೊಡಬಾರದು. ರಾಜಕೀಯದಿಂದ ದೂರ ಇರಬೇಕು. ಆದ್ರೆ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಈಗ ರಾಜಕೀಯ ಸ್ವರೂಪದ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಸಿಎಎ ವಿರೋಧಿ ಪ್ರತಿಭಟನೆಗಳ ವಿರುದ್ಧ ಬಿಪಿನ್ ರಾವತ್ ಕೊಟ್ಟಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಗಲಭೆ, ಹಿಂಸಾಚಾರ ಮುನ್ನಡೆಸುವವರು ನಾಯಕರಲ್ಲ: ಭಾರತೀಯ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾಮಾನ್ಯವಾಗಿ ಸೇನೆಗೆ ಸಂಬಂಧಪಟ್ಟ ಹೇಳಿಕೆಗಳನ್ನ ಮಾಧ್ಯಮಗಳಿಗೆ ನೀಡ್ತಾರೆ. ಆದ್ರೆ, ಗುರುವಾರ ಸಿಎಎ ವಿರೋಧಿ ಪ್ರತಿಭಟನೆಗಳ ಸಂಬಂಧ ನೀಡಿದ ಒಂದೇ ಒಂದು ಹೇಳಿಕೆ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಹೌದು, ಜನರನ್ನ ಗಲಭೆ, ಲೂಟಿ ಮತ್ತು ಹಿಂಸಾಚಾರದತ್ತ ಮುನ್ನಡೆಸುವವರು ನಾಯಕರಲ್ಲ.
ನಾಯಕತ್ವವು ಜನರನ್ನ ಮುನ್ನಡೆಸುವುದಕ್ಕೆ ಸಂಬಂಧಿಸಿದ್ದು. ನೀವು ಮುನ್ನುಗ್ಗಿದಾಗ ಜನರು ನಿಮ್ಮನ್ನು ಹಿಂಬಾಲಿಸುತ್ತಾರೆ. ಜನ್ರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವವರು ನಿಜವಾದ ನಾಯಕರು. ಜನ್ರನ್ನ ಸರಿಯಾದ ದಿಕ್ಕಿನಲ್ಲಿ ಮುನ್ನಡೆಸದೇ ಇರೋರು ನಾಯಕರಲ್ಲ ಅಂತಾ ಬಿಪಿನ್ ರಾವತ್ ಸಿಎಎ ವಿರೋಧಿ ಗಲಭೆಗಳ ಬಗ್ಗೆ ದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ. ಇದೇ ಈಗ ವಿವಾದದ ಕಿಡಿ ಹೊತ್ತಿಸಿದೆ.
ಭಾರತೀಯ ಭೂ ಸೇನಾ ಮುಖ್ಯಸ್ಥರಾದವರು ರಾಜಕೀಯವಾಗಿ ನ್ಯೂಟ್ರಲ್ ಆಗಿರಬೇಕು. ರಾಜಕೀಯವಾಗಿ ಯಾವುದೇ ಪಕ್ಷದ ಪರವಾಗಿರಬಾರದು. ಪಕ್ಷಪಾತದ ಹೇಳಿಕೆಯನ್ನೂ ಕೊಡಬಾರದು. ಸೇನೆಯು ನಾಗರಿಕ ಸರ್ಕಾರಕ್ಕೆ ವಿಧೇಯವಾಗಿರಬೇಕು. ಆಡಳಿತ ಪಕ್ಷವನ್ನೇ ಆಗಲಿ, ವಿಪಕ್ಷವನ್ನೇ ಆಗಲಿ ಟೀಕಿಸಬಾರದು. ಆದ್ರೀಗ, ಸೇನಾ ಮುಖ್ಯಸ್ಥ ಬಿಪಿನ್ ರಾವತ್, ವಿಪಕ್ಷಗಳನ್ನ ಟೀಕಿಸಿದ್ದಾರೆ.
ಇದೇ ಡಿಸೆಂಬರ್ 31 ರಂದು ಬಿಪಿನ್ ರಾವತ್, ಭೂ ಸೇನಾ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾಗ್ತಿದ್ದಾರೆ. ನಿವೃತ್ತಿಗೆ 5 ದಿನ ಮುಂಚೆ ಈ ಹೇಳಿಕೆ ನೀಡಿರುವುದಕ್ಕೆ ಕಾಂಗ್ರೆಸ್ ನಾಯಕ ಬ್ರಿಜೇಶ್ ಕಾಳಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೇನಾ ಮುಖ್ಯಸ್ಥರು ಸಿಎಎ ಪ್ರತಿಭಟನೆಗಳ ವಿರುದ್ಧ ಮಾತನಾಡಿರೋದು ಸಂವಿಧಾನಿಕ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದ್ದು. ಒಂದು ವೇಳೆ, ಸೇನಾ ಮುಖ್ಯಸ್ಥರು ರಾಜಕೀಯ ವಿಚಾರದ ಬಗ್ಗೆ ಮಾತನಾಡಲು ಹೀಗೆ ಅವಕಾಶ ಕೊಟ್ಟರೇ, ನಾಳೆ ಸರ್ಕಾರವನ್ನ ಪತನಗೊಳಿಸಿ ಸೇನೆಯೇ ಸರ್ಕಾರ ನಡೆಸಬಹುದು ಅಂತಾ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ನಿಮ್ಮ ಮಾತುಗಳನ್ನು ನಾನು ಒಪ್ಪುತ್ತೇನೆ ಜನರಲ್ ಸಾಹೇಬ್. ಆದ್ರೆ, ನಾಯಕರಾದವರು ತಮ್ಮ ಹಿಂಬಾಲಕರಿಗೆ ಕೋಮು ಹಿಂಸಾಚಾರದ ನರಹತ್ಯೆ ನಡೆಸಲು ಅವಕಾಶ ಕೊಡಬಾರದಲ್ಲವೇ ಎಂದೂ ಪ್ರಶ್ನಿಸಿದ್ದಾರೆ. ಒಟ್ನಲ್ಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗಿದೆ.
Published On - 7:24 am, Fri, 27 December 19