ದೆಹಲಿ: ಸದನದಲ್ಲಿ ತಮ್ಮ ದನಿಯಡಗಿಸಲು ಕೇಂದ್ರ ಸರ್ಕಾರ ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡಿದೆ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದ್ದಾರೆ. ಸಮಸ್ಯೆಗಳ ಬಗ್ಗೆ ಅಧ್ಯಕ್ಷರಿಗೆ ನೆನಪಿಸಿದ್ದ ತೃಣಮೂಲ ಕಾಂಗ್ರೆಸ್ (TMC) ನಾಯಕರನ್ನು “ನಿನ್ನೆ (ಬುಧವಾರ) ಅಮಾನತುಗೊಳಿಸಲಾಗಿದೆ. ಕೇಂದ್ರ ಸರ್ಕಾರ ನಮ್ಮನ್ನು ಗುರಿಯಾಗಿಸಲು, ನಮಗೆ ಬೆದರಿಕೆ ಹಾಕಲು ಅಥವಾ ನಮ್ಮ ಧ್ವನಿ ಮತ್ತು ಸಮಸ್ಯೆಗಳನ್ನು ಹತ್ತಿಕ್ಕಲು ನಮ್ಮ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಮತ್ತು ವಿರೋಧ ಪಕ್ಷದಲ್ಲಿರುವ ಇತರ ಪಕ್ಷಗಳು ತಲೆಬಾಗುವುದಿಲ್ಲ. ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಖರ್ಗೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಟಿಎಂಸಿಯ ಆರು ಸಂಸದರು-ಡೋಲಾ ಸೇನ್, ಎಂಡಿ. ನಾಡಿಮುಲ್ ಹಕ್, ಅಬಿರ್ ರಂಜನ್ ಬಿಸ್ವಾಸ್, ಶಾಂತಾ ಛೆಟ್ರಿ, ಅರ್ಪಿತಾ ಘೋಷ್, ಮೌಸಮ್ ನೂರ್ ಘೋಷಣೆ ಕೂಗುತ್ತಾ ಸದನದ ಅಂಗಳಕ್ಕೆ ಪ್ರವೇಶಿಸಿದ್ದು, ನಂತರ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು. ಸಂಸದರು ಪೆಗಾಸಸ್ ಬೇಹುಗಾರಿಕೆ ಪ್ರಕರ , ವಿವಾದಾತ್ಮಕ ಕೃಷಿ ಕಾನೂನುಗಳು ಮತ್ತು ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸುತ್ತಿದ್ದರು.
Leader of Oppn @kharge makes a powerful intervention on behalf of all Oppn supporting AITC MPs who were STOPPED from re-entering Rajya Sabha AFTER suspension was lifted. There’s irrefutable video evidence.
Modi-Shah, here?is what a UNITED OPPOSITION looks like. pic.twitter.com/aaLTYE5rtP
— Derek O’Brien | ডেরেক ও’ব্রায়েন (@derekobrienmp) August 5, 2021
ಫ್ರಾನ್ಸ್ ಮತ್ತು ಇಸ್ರೇಲ್ನಂತಹ ದೇಶಗಳು ಈಗಾಗಲೇ ತನಿಖೆಯನ್ನು ಆರಂಭಿಸಿದಾಗ ಪೆಗಾಸಸ್ ವಿವಾದದ ಬಗ್ಗೆ ಏಕೆ ತನಿಖೆಗೆ ಆದೇಶಿಸಿಲ್ಲ ಎಂದು ಖರ್ಗೆ ಸರ್ಕಾರವನ್ನು ಕೇಳಿದ್ದಾರೆ. “ನಿಮಗೆ ತನಿಖೆ ಬೇಡ ಎಂದೋ ಅಥವಾ ಸದನದಲ್ಲಿ ಚರ್ಚೆ ಬೇಡ ಎಂದೋ? ನೀವು (ಸರ್ಕಾರ) ಯಾಕೆ ಹೆದರುತ್ತೀರಿ?” ಎಂದು ಖರ್ಗೆ ಕೇಳಿದ್ದಾರೆ.
ಸಂಸತ್ತ್ ಕಾರ್ಯನಿರ್ವಹಿಸಲು ಪ್ರತಿಪಕ್ಷಗಳು ಅವಕಾಶ ನೀಡುತ್ತಿಲ್ಲ ಮತ್ತು ಸಮಸ್ಯೆಗಳನ್ನು ಚರ್ಚಿಸಲು ನಿರಾಕರಿಸುತ್ತಿವೆ ಎಂಬ ಸರ್ಕಾರದ ಹೇಳಿಕೆಯನ್ನು ಅವರು ನಿರಾಕರಿಸಿದರು. ಪೆಗಾಸಸ್ ವಿವಾದ, ಹಣದುಬ್ಬರ ಮತ್ತು ಕೃಷಿ ಕಾನೂನುಗಳನ್ನು ಚರ್ಚಿಸುವ ಸರ್ಕಾರದ ಉದ್ದೇಶವನ್ನು ಸೂಚಿಸುವ ಯಾವುದೇ ಸೂಚನೆ ಪ್ರತಿಪಕ್ಷಕ್ಕೆ ಬಂದಿಲ್ಲ ಎಂದು ಖರ್ಗೆ ಹೇಳಿದರು. ಯುನೈಟೆಡ್ ಪ್ರೊಗ್ರೆಸಿವ್ ಅಲೈಯನ್ಸ್ ಆಡಳಿತದ ಅವಧಿಯಲ್ಲಿ, ಬಿಜೆಪಿ ಅತೀ ಹೆಚ್ಚು ಅಡ್ಡಿಗಳನ್ನು ಉಂಟುಮಾಡಿತು ಎಂದು ಅವರು ಹೇಳಿದ್ದಾರೆ.
Government is trying to “muzzle” opposition’s voice, but it will not be cowed down and will keep fighting to raise people’s issues, including farmers’ problems and Pegasus snooping matter: Congress leader Mallikarjun Kharge
— Press Trust of India (@PTI_News) August 5, 2021
ಪೆಗಾಸಸ್ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಿ 14 ವಿರೋಧ ಪಕ್ಷಗಳು ಜಂಟಿ ಪತ್ರಕ್ಕೆ ಸಹಿ ಹಾಕಿದ ಒಂದು ದಿನದ ನಂತರ ಖರ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ.
ಇದನ್ನೂ ಓದಿ: ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಸೆಲ್ಫ್ ಗೋಲ್ ಹೊಡೆಯುತ್ತಿವೆ: ಪ್ರಧಾನಿ ನರೇಂದ್ರ ಮೋದಿ
ಇದನ್ನೂ ಓದಿ: Tokyo Olympics: ಭಾರತ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದೀರಿ! ರವಿ ದಹಿಯಾಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
(Mallikarjun Kharge alleges government is targeting Opposition leaders to suppress their voices in the House)