Viral Video: ಶಾಸಕನ ಕಾಲಿಗೆ ಶೂ ಹಾಕಿ, ಲೇಸ್ ಕಟ್ಟಿದ ಸರ್ಕಾರಿ ನೌಕರರು; ವೈರಲ್ ವಿಡಿಯೋಗೆ ಭಾರೀ ಟೀಕೆ

Viral Video: ಶಾಸಕನ ಕಾಲಿಗೆ ಶೂ ಹಾಕಿ, ಲೇಸ್ ಕಟ್ಟಿದ ಸರ್ಕಾರಿ ನೌಕರರು; ವೈರಲ್ ವಿಡಿಯೋಗೆ ಭಾರೀ ಟೀಕೆ
ಟಿಎಂಸಿ ಶಾಸಕನ ಶೂ ಲೇಸ್ ಕಟ್ಟುತ್ತಿರುವ ಯುವಕರು

ಸರ್ಕಾರಿ ನೌಕರರ ಕೈಯಲ್ಲಿ ಶೂ ಲೇಸ್ ಕಟ್ಟಿಸಿಕೊಂಡಿರುವ ಪಶ್ಚಿಮ ಬಂಗಾಳದ ಟಿಎಂಸಿ ಶಾಸಕರ ವರ್ತನೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

TV9kannada Web Team

| Edited By: Sushma Chakre

Aug 05, 2021 | 9:01 PM


ಕೊಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಶಾಸಕರ ಶೂ ಲೇಸ್ ಕಟ್ಟುತ್ತಿರುವ ಸರ್ಕಾರಿ ಸಿಬ್ಬಂದಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಕಾರಿ ನೌಕರರ ಕೈಯಲ್ಲಿ ಶೂ ಲೇಸ್ ಕಟ್ಟಿಸಿಕೊಂಡಿರುವ ಶಾಸಕರ ವರ್ತನೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ವರ್ಧಮಾನ್ ದಕ್ಷಿಣ ಕ್ಷೇತ್ರದ ಟಿಎಂಸಿ ಶಾಸಕ ಕೊಂಕಣ್ ದಾಸ್ ಇಂದು ಕಿಶೋರ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರಾಷ್ಟ್ರ ಧ್ವಜಾರೋಹಣ ಮಾಡಿದ ಬಳಿಕ ಬಿಚ್ಚಿಟ್ಟಿದ್ದ ಶೂ ಹಿಡಿದು ಶಾಸಕರ ಕಾಲಿಗೆ ಹಾಕಿರುವ ಸರ್ಕಾರ ಸಿಬ್ಬಂದಿ ಬಳಿಕ ಶೂಲೇಸ್ ಕಟ್ಟಿದ್ದಾರೆ.

ತನ್ನ ಕಾಲಿನ ಶೂ ಲೇಸ್ ಅನ್ನು ಸರ್ಕಾರಿ ನೌಕರರು ಕಟ್ಟುತ್ತಿರುವಾಗ ನೇರವಾಗಿ ನಿಂತುಕೊಂಡಿದ್ದ ಟಿಎಂಸಿ ಶಾಸಕ ಕೊಂಕಣ್ ದಾಸ್ ಅವರ ಕಾಲಿಗೆ ಆ ಇಬ್ಬರು ನಮಸ್ಕರಿಸಿರುವುದು ಕೂಡ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಈ ಬಗ್ಗೆ ಸಮಜಾಯಿಷಿ ನೀಡಿರುವ ಶಾಸಕ ಕೊಂಕಣ್ ದಾಸ್, ನಾನು ಸಿಕ್ಕಾಪಟ್ಟೆ ದಪ್ಪಗಿರುವುದರಿಂದ ಕೆಳಗೆ ಬಗ್ಗಿ ಶೂಲೇಸ್ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಅಲ್ಲೆಲ್ಲೂ ಕುಳಿತುಕೊಂಡು ಶೂ ಹಾಕಿಕೊಳ್ಳಲು ಜಾಗವಿಲ್ಲದ ಕಾರಣ ಅಲ್ಲಿದ್ದ ಇಬ್ಬರು ತಾವಾಗೇ ನನಗೆ ಸಹಾಯ ಮಾಡಿದರು ಎಂದಿದ್ದಾರೆ.

‘ನನಗೆ ಶೂ ಹಾಕಿಕೊಳ್ಳಲು ಸಹಾಯ ಮಾಡಿದವರು ನನ್ನ ಕಸಿನ್​ಗಳು. ನನ್ನ ಸಂಬಂಧಿಕರಿಂದ ನಾನು ಶೂ ಹಾಕಿಸಿಕೊಂಡಿದ್ದರಲ್ಲಿ ತಪ್ಪೇನಿದೆ? ಅವರು ಯಾವ ಪಕ್ಷಕ್ಕೂ ಸೇರಿದವರಲ್ಲ, ಸರ್ಕಾರಿ ನೌಕರರೂ ಅಲ್ಲ. ಅದೆಲ್ಲವೂ ಸುಳ್ಳು ಸುದ್ದಿ’  ಎಂದು ಕೊಂಕಣ್ ದಾಸ್ ಸಮರ್ಥಿಸಿಕೊಂಡಿದ್ದಾರೆ. ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಟಿಎಂಸಿ ಶಾಸಕನ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ನಾಯಕರು ಕೂಡ ಪಶ್ಚಿಮ ಬಂಗಾಳ ಆಡಳಿತ ಪಕ್ಷದ ಶಾಸಕರ ವರ್ತನೆಗೆ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರಿ ನೌಕರರನ್ನೇ ಟಿಎಂಸಿಯ ಗೂಂಡಾ ಶಾಸಕರು ಬಾಡಿಗಾರ್ಡ್​ ಆಗಿ ಮಾಡಿಕೊಂಡಿದ್ದಾರೆ. ಸರ್ಕಾರಿ ನೌಕರರನ್ನು ತಮ್ಮ ಸೇವಕರಂತೆ ನಡೆಸಿಕೊಳ್ಳುತ್ತಿದ್ದಾರೆ. ಇಂಥವರನ್ನು ಆರಿಸಿ ಕಳುಹಿಸಿರುವ ಜನರು ಕೂಡ ಇದರಿಂದ ತಲೆ ತಗ್ಗಿಸುವಂತಾಗಿದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: Viral Video: ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಯೋಗಾಸನ ಮಾಡಿದ ಯುವತಿ; ಶಾಕಿಂಗ್ ವಿಡಿಯೋ ಇಲ್ಲಿದೆ

Viral Video: 100 ಕೆಜಿ ತೂಕದ ಲೆಹೆಂಗಾ ತೊಟ್ಟು ನಿಂತ ವಧು; ವಿಷ್ ಮಾಡಲು ಜಾಗವಿಲ್ಲದೆ ಅತಿಥಿಗಳು ಕಂಗಾಲು!

(Viral video of 2 Government Employees helping TMC MLA Khokan Das to wear his shoes creates controversy)

Follow us on

Related Stories

Most Read Stories

Click on your DTH Provider to Add TV9 Kannada