ಮಹಾರಾಷ್ಟ್ರ ಸರ್ಕಾರದ ಅಸಹಕಾರ, ಬುಲೆಟ್ ಟ್ರೇನ್ ಸಂಚಾರ ಇನ್ನೂ ತಡ: ಸಂಸತ್ತಿನಲ್ಲಿ ರೈಲ್ವೆ ಸಚಿವರ ಉತ್ತರ

ಯೋಜನೆಯ ಕಾಮಗಾರಿ ಮುಗಿಸಲು ಯಾವುದೇ ಹೊಸ ಡೆಡ್​ಲೈನ್ ನಿಗದಿಪಡಿಸಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿಗೆ ತಿಳಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಅಸಹಕಾರ, ಬುಲೆಟ್ ಟ್ರೇನ್ ಸಂಚಾರ ಇನ್ನೂ ತಡ: ಸಂಸತ್ತಿನಲ್ಲಿ ರೈಲ್ವೆ ಸಚಿವರ ಉತ್ತರ
ಜಪಾನ್​ನ ಹಿಂದಿನ ಪ್ರಧಾನಿ ಶಿಂಜೊ ಅಬೆ ಜೊತೆಗೆ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ).
Follow us
S Chandramohan
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 05, 2021 | 7:30 PM

ದೆಹಲಿ: ದೇಶದ ಮೊದಲ ಬುಲೆಟ್ ಟ್ರೇನ್ ಯೋಜನೆಯಾದ ಅಹಮದಾಬಾದ್-ಮುಂಬೈ ನಡುವಿನ ಯೋಜನೆಯು ನಿಗದಿತ ಕಾಲಮಿತಿಯಲ್ಲಿ ಮುಗಿಯುವುದಿಲ್ಲ ಎನ್ನುವುದು ಈಗ ಖಚಿತವಾಗಿದೆ. ಏಕೆಂದರೆ, ಈಗ ಕೇಂದ್ರ ಸರ್ಕಾರವು ಯೋಜನೆಯ ಕಾಮಗಾರಿ ಮುಗಿಸಲು ಯಾವುದೇ ಹೊಸ ಡೆಡ್​ಲೈನ್ ನಿಗದಿಪಡಿಸಿಲ್ಲ ಎಂದು ಸಂಸತ್ತಿಗೆ ತಿಳಿಸಿದೆ. ಕಾಮಗಾರಿ ವಿಳಂಬಕ್ಕೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಕಾರಣ ಎಂದು ಕೇಂದ್ರ ಸರ್ಕಾರ ಈಗ ಬೆರಳು ತೋರಿಸಿದೆ.

ಚೀನಾ, ಜಪಾನ್ ದೇಶಗಳಲ್ಲಿ ಈಗಾಗಲೇ ಬುಲೆಟ್ ಟ್ರೇನ್​ಗಳು ಓಡಾಡುತ್ತಿವೆ. ಭಾರತದಲ್ಲೂ ಗಂಟೆಗೆ 400ರಿಂದ 500 ಕಿಲೋಮೀಟರ್ ವೇಗದಲ್ಲಿ ಸಂಚರಿಸುವ ಬುಲೆಟ್ ಟ್ರೇನ್ ಯೋಜನೆ ಜಾರಿಗೊಳಿಸಬೇಕು ಎನ್ನುವುದು ಪ್ರಧಾನಿ ಮೋದಿ ಕನಸು. ಇದಕ್ಕಾಗಿ ಅಹಮದಾಬಾದ್-ಮುಂಬೈ ನಗರಗಳ ನಡುವಿನ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಕಾಮಗಾರಿಯನ್ನು ಆರಂಭಿಸಲಾಗಿದೆ. 2023ರ ಡಿಸೆಂಬರ್ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಪ್ರಾರಂಭದಲ್ಲಿ ಕೇಂದ್ರ ಸರ್ಕಾರ ಡೆಡ್​ಲೈನ್ ಹಾಕಿಕೊಂಡಿತ್ತು. ಆದರೆ, ಈಗ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಯಾವುದೇ ಡೆಡ್​ಲೈನ್ ಹಾಕಿಕೊಂಡಿಲ್ಲ. ಬುಲೆಟ್ ಟ್ರೇನ್ ಯೋಜನೆಯ ಕಾಮಗಾರಿ ಆರಂಭಿಸಿದ ಮೇಲೆ ಅನೇಕ ಅಡ್ಡಿ ಆತಂಕಗಳು ಎದುರಾಗಿವೆ. ಮಹಾರಾಷ್ಟ್ರ ರಾಜ್ಯ ಸರ್ಕಾರದ ಅಸಹಕಾರವು ಯೋಜನೆ ಪೂರ್ಣಗೊಳ್ಳಲು ಅಡ್ಡಿಯಾಗಿದೆ. ಇದರಿಂದಾಗಿ ಈಗ ಬುಲೆಟ್ ಟ್ರೇನ್ ಕಾಮಗಾರಿ ಪೂರ್ಣಗೊಳಿಸಲು ಯಾವುದೇ ಡೆಡ್​ಲೈನ್ ಸದ್ಯಕ್ಕೆ ಇಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣನ್ ಈ ಉತ್ತರ ನೀಡಿದ್ದಾರೆ.

ಬುಲೆಟ್ ಟ್ರೇನ್ ಕಾಮಗಾರಿಯು ಕೊರೊನಾ ಕಾರಣದಿಂದ ವಿಳಂಬವಾಗಿದೆ. ಯೋಜನೆಗೆ ಅಗತ್ಯವಾದ ಭೂಮಿ ಸ್ವಾಧೀನದಲ್ಲಿ ಪ್ರಗತಿಯಾಗಿಲ್ಲ. ಮಹಾರಾಷ್ಟ್ರ ರಾಜ್ಯದಲ್ಲಿ ಭೂಮಿ ಸ್ವಾಧೀನಪಡಿಸಿಕೊಂಡು ಯೋಜನೆಗೆ ನೀಡಲು ವಿಳಂಬ ಮಾಡಲಾಗುತ್ತಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರವು ಬಾಕಿ ಉಳಿದಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಬಳಿಕ ಪರಿಷ್ಕೃತ ಯೋಜನೆಯ ಪೂರ್ಣಗೊಳಿಸುವ ಕಾಲಮಿತಿಯನ್ನು ನಿಗದಿಪಡಿಲಾಗುವುದು ಎಂದು ಅವರು ಹೇಳಿದ್ದಾರೆ.

ಬುಲೆಟ್ ಟ್ರೇನ್ ಯೋಜನೆಯ ಕಾಮಗಾರಿ ಯಾವಾಗ ಪೂರ್ಣವಾಗುತ್ತೆ ಎಂದು ಇಬ್ಬರು ಸಂಸದರು ಕೇಳಿದ್ದ ಪ್ರಶ್ನೆಗೆ ಅಶ್ವಿನಿ ವೈಷ್ಣವ್ ಈ ಉತ್ತರ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಒಟ್ಟು 432 ಹೆಕ್ಟೇರ್ ಭೂಮಿಯನ್ನು ಬುಲೆಟ್ ಟ್ರೇನ್ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಬೇಕು. ಆದರೆ, ಈ ಪೈಕಿ ಕಾಲುಭಾಗ ಮಾತ್ರ ಪ್ರಗತಿಯಾಗಿದೆ. ಗುಜರಾತ್ ರಾಜ್ಯ ಹಾಗೂ ದಿಯು, ದಮನ್​ನಲ್ಲಿ ಯೋಜನೆಗೆ ಅಗತ್ಯವಿರುವ ಭೂಮಿಯ ಪೈಕಿ ಶೇ 75 ರಷ್ಟು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಯೋಜನೆಗೆ 2021-22ರ ಬಜೆಟ್​ನಲ್ಲಿ ₹14 ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಈ ವರ್ಷ ಇಲ್ಲಿಯವರೆಗೂ ₹2,090 ಕೋಟಿ ಹಣ ಖರ್ಚು ಮಾಡಲಾಗಿದೆ. ವಿಶೇಷವೆಂದರೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಲೆಟ್ ಟ್ರೇನ್ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಆಗ ಮಹಾರಾಷ್ಟ್ರ ರಾಜ್ಯ ಸರ್ಕಾರವು ಯೋಜನೆಗೆ ಬಾಕಿ ಇರುವ ಭೂಮಿಯನ್ನು 2021ರ ಏಪ್ರಿಲ್ 30ರೊಳಗೆ ಸ್ವಾಧೀನಪಡಿಸಿಕೊಂಡು ನೀಡಬೇಕೆಂದು ಹೇಳಿದ್ದರು. ಕಳೆದ ವರ್ಷದ ನವೆಂಬರ್​ವರೆಗೂ ಮಹಾರಾಷ್ಟ್ರ ರಾಜ್ಯದಲ್ಲಿ ಶೇ 22ರಷ್ಟು ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿತ್ತು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ಟ್ರೇನ್ ಯೋಜನೆಯು ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ಆದ್ಯತೆಯ ಯೋಜನೆಯಲ್ಲ ಎಂದು ಈ ಹಿಂದೆಯೇ ಹೇಳಿದ್ದರು. ಈ ಯೋಜನೆಯು ಅನಗತ್ಯ ಹಣ ವೆಚ್ಚದ ಯೋಜನೆ. ಈಗಾಗಲೇ ಮುಂಬೈ-ಅಹಮದಾಬಾದ್ ನಡುವೆ ಸಾಕಷ್ಟು ಉತ್ತಮ ರೈಲು ಸಂಪರ್ಕ ಇದೆ ಎಂದು ಉದ್ದವ್ ಠಾಕ್ರೆ ಹೇಳಿದ್ದರು. ಆದರೆ, ಯೋಜನೆಗೆ ಜಪಾನ್ ಸರ್ಕಾರದಿಂದ ಹಣವನ್ನು ಸಾಲವಾಗಿ ಪಡೆದು ಪೂರ್ಣಗೊಳಿಸಬೇಕೆಂದು ಮೋದಿ ಸರ್ಕಾರ ಹೊರಟಿದೆ. ಹೀಗಾಗಿಯೇ ₹ 1.15 ಲಕ್ಷ ಕೋಟಿ ರೂಪಾಯಿ ಮೊತ್ತದ ಬುಲೆಟ್ ಟ್ರೇನ್ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ನಿರೀಕ್ಷೆಯಂತೆ 2023ರ ಡಿಸೆಂಬರ್ ಹೊತ್ತಿಗೆ ಕಾಮಗಾರಿ ಪೂರ್ಣವಾಗುವುದಿಲ್ಲ ಎನ್ನುವುದು ಈಗ ಕೇಂದ್ರ ಸರ್ಕಾರದ ಉತ್ತರದಿಂದಲೇ ಸ್ಪಷ್ಟವಾಗಿದೆ.

(Bullet Train Run will miss deadline Due to Maharashtra Govt Non Cooperation says Union Railway Minister)

ಇದನ್ನೂ ಓದಿ: ಮುಂಬೈ: ಜುಲೈನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ 90,000ಕ್ಕೂ ಅಧಿಕ ಪ್ರಯಾಣಿಕರನ್ನು ಹಿಡಿದು ದಂಡ ಹಾಕಿದ ರೈಲ್ವೆ ಇಲಾಖೆ

ಇದನ್ನೂ ಓದಿ: ಯಶವಂತಪುರ – ಶಿವಮೊಗ್ಗ ನಡುವೆ ಆಗಸ್ಟ್​ 10 ರಿಂದ ಹೊಸ ರೈಲು ಸಂಚಾರ; ವೇಳಾಪಟ್ಟಿ ಇಲ್ಲಿದೆ

Published On - 6:37 pm, Thu, 5 August 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್