Video: ರಾಷ್ಟ್ರಗೀತೆ ಅರ್ಧಕ್ಕೇ ನಿಲ್ಲಿಸಿ, ಕುಳಿತ ಮಮತಾ ಬ್ಯಾನರ್ಜಿ; ಇಂಥ ನಡವಳಿಕೆ ನಾಚಿಕೆ ಗೇಡು ಎಂದ ತೇಜಸ್ವಿ ಸೂರ್ಯ

ಇನ್ನು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಡಾ. ಸುಕಾಂತಾ ಮಜುಂದಾರ್ ಕೂಡ ಟ್ವೀಟ್​ ಮೂಲಕ ಖಂಡಿಸಿದ್ದಾರೆ. ಅಷ್ಟೇ ಅಲ್ಲ, ಮುಂಬೈ ಬಿಜೆಪಿನಾಯಕರೊಬ್ಬರು ಮಮತಾ ಬ್ಯಾನರ್ಜಿ ವಿರುದ್ಧ ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪದಡಿ ಪೊಲೀಸರಿಗೆ ದೂರು ನೀಡಿದ್ದಾರೆ.

Video: ರಾಷ್ಟ್ರಗೀತೆ ಅರ್ಧಕ್ಕೇ ನಿಲ್ಲಿಸಿ, ಕುಳಿತ ಮಮತಾ ಬ್ಯಾನರ್ಜಿ; ಇಂಥ ನಡವಳಿಕೆ ನಾಚಿಕೆ ಗೇಡು ಎಂದ ತೇಜಸ್ವಿ ಸೂರ್ಯ
ಮಮತಾ ಬ್ಯಾನರ್ಜಿ
Edited By:

Updated on: Dec 02, 2021 | 9:19 AM

ದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಮಮತಾ ಬ್ಯಾನರ್ಜಿಯವರು ಸುದ್ದಿಗೋಷ್ಠಿ ನಡೆಸುವಾಗ ರಾಷ್ಟ್ರಗೀತೆಯನ್ನೇನೋ ಹಾಡಿದರು. ಆದರೆ ಅದನ್ನು ಪೂರ್ತಿಗೊಳಿಸಲಿಲ್ಲ ಮತ್ತು ಮಧ್ಯದಲ್ಲಿಯೇ ಉಳಿತುಕೊಂಡರು ಎಂದು ಬಿಜೆಪಿ ಹೇಳಿದೆ.  ಹಾಗೇ, ಮುಂಬೈನಲ್ಲಿ ನಡೆದ ಈ ಸುದ್ದಿಗೋಷ್ಠಿಯ ವಿಡಿಯೋವನ್ನೂ ಶೇರ್ ಮಾಡಿಕೊಂಡಿದೆ.

ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಬಿಜೆಪಿ ಘಟಕ, ಮಮತಾ ಬ್ಯಾನರ್ಜಿ ಮೊದಲು ಕುಳಿತುಕೊಂಡೇ ರಾಷ್ಟ್ರಗೀತೆ ಹಾಡಲು ಶುರು ಮಾಡಿದರು. ನಂತರ ಎದ್ದು ನಿಂತರು. ಸ್ವಲ್ಪ ಹೊತ್ತು ಹಾಡಿ, ರಾಷ್ಟ್ರಗೀತೆಯನ್ನು ಪೂರ್ಣಗೊಳಿಸದೆ ಮತ್ತೆ ಕುಳಿತುಕೊಂಡರು. ಅವರು ರಾಷ್ಟ್ರಗೀತೆ, ಪಶ್ಚಿಮ ಬಂಗಾಳದ ಸಂಸ್ಕೃತಿ ಮತ್ತು ರವೀಂದ್ರನಾಥ್ ಟಾಗೋರ್​​ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದೆ.  ಅಷ್ಟೇ ಅಲ್ಲ, ಬಿಜೆಪಿ ಐಟಿ ಸೆಲ್​ ಮುಖ್ಯಸ್ಥ ಅಮಿತ್ ಮಾಳ್ವಿಯಾ, ಸಂಸದ ತೇಜಸ್ವಿ ಸೂರ್ಯ ಕೂಡ ಟ್ವೀಟ್ ಮೂಲಕ ಇದನ್ನು ಖಂಡಿಸಿದ್ದಾರೆ.

ಟ್ವೀಟ್​ ಮಾಡಿರುವ ಅಮಿತ್ ಮಾಳ್ವಿಯಾ, ರಾಷ್ಟ್ರಗೀತೆ ಎಂಬುದು ನಮ್ಮ ದೇಶದ ಅತ್ಯಂತ ಶಕ್ತಿಶಾಲಿ ಅಭಿವ್ಯಕ್ತಿಗಳಲ್ಲಿ ಒಂದಾಗಿದೆ. ಸಾರ್ವಜನಿಕ ಹುದ್ದೆಯನ್ನು ಹೊಂದಿರುವ ಜನರು ಅದನ್ನು ಕೀಳಾಗಿಸಬಾರದು. ಆದರೆ ಪಶ್ಚಿಮ ಬಂಗಾಳ ಸಿಎಂ ರಾಷ್ಟ್ರಗೀತೆ ಹಾಡಿದ್ದನ್ನು ಕೇಳಿ ಎಂದಿದ್ದಾರೆ. ಹಾಗೇ, ತೇಜಸ್ವಿ ಸೂರ್ಯ ಟ್ವೀಟ್​ ಮಾಡಿ, ಇಲ್ಲಿ ನೋಡಿ, ನಮ್ಮ ದೇಶದಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡುವಂತ ಮುಖ್ಯಮಂತ್ರಿಗಳೂ ಇದ್ದಾರೆ. ವಿರೋಧ ಪಕ್ಷಗಳು ಭಾರತ ಮತ್ತು ಅದರ ಮೌಲ್ಯಗಳನ್ನು ಗೌರವಿಸಬೇಕು ಎಂದು ಕೇಳುವುದೇ ಕಷ್ಟವಾಗುತ್ತಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವವರು ಹೀಗೆ ನಡೆದುಕೊಳ್ಳುವುದು ತೀವ್ರ ಖಂಡನೀಯ, ನಾಚಿಕೆ ಗೇಡು ಎಂದು ಹೇಳಿದ್ದಾರೆ.

ಇನ್ನು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಡಾ. ಸುಕಾಂತಾ ಮಜುಂದಾರ್ ಕೂಡ ಟ್ವೀಟ್​ ಮೂಲಕ ಖಂಡಿಸಿದ್ದಾರೆ. ಅಷ್ಟೇ ಅಲ್ಲ, ಮುಂಬೈ ಬಿಜೆಪಿನಾಯಕರೊಬ್ಬರು ಮಮತಾ ಬ್ಯಾನರ್ಜಿ ವಿರುದ್ಧ ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪದಡಿ ಪೊಲೀಸರಿಗೆ ದೂರು ನೀಡಿದ್ದಾರೆ.  ಮಮತಾ ಬ್ಯಾನರ್ಜಿ ನಿನ್ನೆ ಶಿವಸೇನೆ, ಎನ್​ಸಿಪಿ ನಾಯಕರನ್ನು ಭೇಟಿಯಾಗಿದ್ದರು. ನಿನ್ನೆ ಶರದ್​ ಪವಾರ್​ರನ್ನು ಭೇಟಿಯಾದ ಬಳಿಕ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಇನ್ನು ಮುಂದೆ ಯುಪಿಎ ಎಂಬುದು ಇರುವುದಿಲ್ಲ ಎಂದಿದ್ದರು.

ಇದನ್ನೂ ಓದಿ: ಅತಿ ಹೆಚ್ಚು ಬಾಯಾರಿಕೆ ಉಂಟಾಗುವ ಸಮಸ್ಯೆ ಇದೆಯೇ? ಅಪಾಯಕ್ಕೂ ಮೊದಲು ಇರಲಿ ಎಚ್ಚರ