Mukul Roy ನನಗೆ ಬಿಜೆಪಿಯಲ್ಲಿ ಇರಲಾಗಲಿಲ್ಲ, ಬಂಗಾಳ ಮತ್ತು ಭಾರತಕ್ಕೆ ಒಬ್ಬರೇ ನಾಯಕಿ ಮಮತಾ ಬ್ಯಾನರ್ಜಿ : ಮುಕುಲ್ ರಾಯ್

| Updated By: ರಶ್ಮಿ ಕಲ್ಲಕಟ್ಟ

Updated on: Jun 11, 2021 | 6:40 PM

Mukul Roy Returns To TMC:   ಕೊಲ್ಕತ್ತಾದ ಟಿಎಂಸಿ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಕುಲ್ ರಾಯ್, ಬಿಜೆಪಿಯನ್ನು ತೊರೆದ ನಂತರ ನನ್ನ ಹಳೆಯ ಸಹೋದ್ಯೋಗಿಗಳನ್ನು ನೋಡಿದ್ದು ನನಗೆ ತುಂಬಾ ಖುಷಿ ಆಯ್ತು. ನನಗೆ ಬಿಜೆಪಿಯಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ

Mukul Roy ನನಗೆ ಬಿಜೆಪಿಯಲ್ಲಿ ಇರಲಾಗಲಿಲ್ಲ, ಬಂಗಾಳ ಮತ್ತು ಭಾರತಕ್ಕೆ ಒಬ್ಬರೇ ನಾಯಕಿ ಮಮತಾ ಬ್ಯಾನರ್ಜಿ : ಮುಕುಲ್ ರಾಯ್
ಮುುಕುಲ್ ರಾಯ್
Follow us on

ಕೊಲ್ಕತ್ತಾ: ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರವಾಗಿಗ್ಗದ ಮುಕುಲ್ ರಾಯ್, ಮಗ ಶುಭ್ರಂಶು ಅವರೊಂದಿಗೆ ಇಂದು ತಮ್ಮ ಟಿಎಂಸಿಗೆ ಮರಳುವ ಮೂಲಕ ವಾರಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದರು. “ಘೋರೆರ್ ಚೆಲೆ ಘೋರ್ ಫಿರ್ಲೊ (ಮುಕುಲ್ ಮನೆಗೆ ಮರಳಿದ್ದಾರೆ)” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು. ಅವನು ಎಂದಿಗೂ ಇತರರಂತೆ ದೇಶದ್ರೋಹಿ ಅಲ್ಲ, ಮಮತಾ ಒತ್ತಿ ಹೇಳಿದರು.

ಮುಕುಲ್ ರಾಯ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಮಮತಾ, ಮತ್ತಷ್ಟು ಜನರು ಪಕ್ಷಕ್ಕೆ ಬರಲಿದ್ದಾರೆ. ನಿಮಗೆ ತಿಳಿದಿರುವಂತೆ ಓಲ್ಡ್ ಈಸ್ ಆಲ್ವೇಸ್ ಗೋಲ್ಡ್ ಎಂದು ಹೇಳಿದ್ದಾರೆ.  ಕೊಲ್ಕತ್ತಾದ ಟಿಎಂಸಿ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಕುಲ್ ರಾಯ್, ಬಿಜೆಪಿಯನ್ನು ತೊರೆದ ನಂತರ ನನ್ನ ಹಳೆಯ ಸಹೋದ್ಯೋಗಿಗಳನ್ನು ನೋಡಿದ್ದು ನನಗೆ ತುಂಬಾ ಖುಷಿ ಆಯ್ತು. ನನಗೆ ಬಿಜೆಪಿಯಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅದೇ ವೇಳೆ ಭಾರತ ಮತ್ತು ಬಂಗಾಳಕ್ಕೊಬ್ಬರೇ ನಾಯಕಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಬಣ್ಣಿಸಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ “ದೀದಿ” ಯ ಮೇಲೆ ನಡೆಯುತ್ತಿರುವ ಪದೇಪದೇ ದಾಳಿ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ “ಮಮತಾ ಬ್ಯಾನರ್ಜಿಯೊಂದಿಗೆ ನಾನು ಎಂದಿಗೂ ಯಾವುದೇ ಭಿನ್ನಾಭಿಪ್ರಾಯಗಳನ್ನು ಹೊಂದಿಲ್ಲ.” ಎಂದು ಹೇಳಿದ್ದಾರೆ. ತಕ್ಷಣವೇ ರಾಯ್ ಅವರ ರಕ್ಷಣೆಗೆ ಬಂದ ಮಮತಾ ಬ್ಯಾನರ್ಜಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಪ್ರಯತ್ನಿಸಬೇಡಿ ಎಂದು ಹೇಳಿದ್ದಾರೆ .

ಸುವೇಂದು ಅಧಿಕಾರಿಯ ಬಗ್ಗೆ ಕೇಳಿದಾಗ ಮಮತಾ ಬ್ಯಾನರ್ಜಿ ಶಾಂತ ಮತ್ತು ಕಹಿಯನ್ನು ಪ್ರೋತ್ಸಾಹಿಸದವರಿಗೆ ಮಾತ್ರ ಮತ್ತೆ ಸ್ವಾಗತ ಎಂದಿದ್ದಾರೆ. ಮಮತಾ ಬ್ಯಾನರ್ಜಿಯ ಆಪರೇಷನ್ “ರಿಟರ್ನ್ ಆಫ್ ದಿ ಪ್ರಾಡಿಗಲ್” ನ ಮೊದಲ ಗುರಿಯು ಮುಕುಲ್ ರಾಯ್ ಎಂದು ಮೂಲಗಳು ಹೇಳುತ್ತವೆ.  ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರು ಮುಕುಲ್ ರಾಯ್ ಅವರು ಸುವೇಂದು ಅಧಿಕಾರಿಯಂತೆ ಕೆಟ್ಟವರಲ್ಲ ಎಂದು ಹೇಳಿದ್ದರು.

ತೃಣಮೂಲ ಸಂಸ್ಥಾಪಕ ಸದಸ್ಯರಾದ ಮುಕುಲ್ ರಾಯ್ ಅವರು ಪಕ್ಷ ತೊರೆದಾಗ ಅವರು ಅದರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಈ ಹುದ್ದೆಯಲ್ಲಿ ಈಗ ಮುಖ್ಯಮಂತ್ರಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಇದ್ದಾರೆ.


ಮುಕುಲ್ ರಾಯ್ ಘರ್ ವಾಪ್ಸಿ
ಬಿಜೆಪಿಗೆ ಸಂಬಂಧಿಸಿದಂತೆ ಮುಕುಲ್ ರಾಯ್ ಬಂಗಾಳದಲ್ಲಿ ರಾಜಕೀಯ ಸಂಚಲನದ ಭರವಸೆಯನ್ನು ಹುಟ್ಟುಹಾಕಿದ್ದ ದೊಡ್ಡ ನಾಯಕರಾಗಿದ್ದರು. ರಾಯ್ ಮತ್ತು ಅವರ ಬೆಂಬಲಿಗರು 2019ರಲ್ಲಿ ಈ ಕಾರ್ಯವನ್ನು ಮಾಡಿದ್ದು ಇದು ರಾಜ್ಯ ಚುನಾವಣೆಗೆ ಬರುವ ಹೊತ್ತಿಗೆ ಸಾಕಾರವಾಯಿತು

ಬಿಜೆಪಿ   ಪಕ್ಷದಲ್ಲಿ ಉಸಿರುಗಟ್ಟಿಸುವಂತಿದೆ ಎಂದು ಮುಕುಲ್ ರಾಯ್ ನಿಕಟವರ್ತಿಗಳಿಗೆ ತಿಳಿಸಿದ್ದರು ಎಂದು ಮೂಲಗಳು ತಿಳಿಸಿವೆ. ಬಂಗಾಳ ಚುನಾವಣೆಯಲ್ಲಿ ಬಿಜೆಪಿಯ ಸೋಲಿನಿಂದ ಅವರ ಹತಾಶೆ ಮತ್ತಷ್ಟು ಹೆಚ್ಚಾಗಿತ್ತು

ಬಿಜೆಪಿಯ ರಾಜಕೀಯ ಸಂಸ್ಕೃತಿ ಮತ್ತು ನೀತಿಗಳು ಬಂಗಾಳಕ್ಕೆ ಅನ್ಯವಾಗಿದೆ ಮತ್ತು ಭವಿಷ್ಯದಲ್ಲಿ “ಹೊರಗಿನವನಾಗಿ” ಉಳಿಯುವಂತೆ ಮಾಡುತ್ತದೆ ಎಂಬ ಅಭಿಪ್ರಾಯವನ್ನು ರಾಯ್ ಹೊಂದಿದ್ದರು ಎಂದು ಅವರ ನಿಕಟವರ್ತಿಗಳು ಹೇಳಿದ್ದಾರೆ.

“ಮಮತಾ ಬ್ಯಾನರ್ಜಿಯಂತ ಜನರಿಗೆ ಯಾರೂ ಬೆರಳು ತೋರಿಸಿಲ್ಲ” ಎಂದು ಮುಕುಲ್ ರಾಯ್ ಅವರ ಆಪ್ತ ಮೂಲಗಳು ನಾಯಕನನ್ನು ಉಲ್ಲೇಖಿಸಿ ಹೇಳಿದ್ದಾರೆ.

ಇದನ್ನೂ ಓದಿ:  Mukul Roy ಮಮತಾ ಬ್ಯಾನರ್ಜಿ ಭೇಟಿ ನಂತರ ಟಿಎಂಸಿಗೆ ಮರುಸೇರ್ಪಡೆಯಾದ ಮುಕುಲ್​ ರಾಯ್​

(Mamata Banerjee the only leader of Bengal and India says Mukul Roy after Returns To TMC)