ಮನೆ ಮೇಲೆ ಬಾವುಟ ರಾರಾಜಿಸ್ತಿರಬೇಕು ಅಂತಾ ಪಾಕ್ ಧ್ವಜ ಹಾರಿಸಿಬಿಟ್ಟ! ಆಮೇಲೆ?

ಭೋಪಾಲ್​: ಬಾವುಟ ಹಾರಿಸೋ ಉತ್ಸಾಹದಲ್ಲಿ ಪಾಕಿಸ್ತಾನದ ಧ್ವಜವನ್ನ ಹಾರಿಸಿರೋ ಘಟನೆ ಮಧ್ಯಪ್ರದೇಶದ ದೇವಾಸ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ನಮ್ಮ ಮನೆ ಮೇಲೆ ಒಂದು ಬಾವುಟ ರಾರಾಜಿಸಬೇಕು ಅನ್ನೋ ಆಸೆಯಲ್ಲಿ 12 ವರ್ಷದ ಹುಡುಗನೊಬ್ಬ ಪಾಕಿಸ್ತಾನದ ಧ್ವಜ ಹಾರಿಸಿದ್ದಾನೆ. ಇದನ್ನು ಕಂಡು ಒಂದು ಕ್ಷಣ ಅವಾಕ್ಕಾದ ಸ್ಥಳೀಯರು ಅದರ ವಿಡಿಯೋ ಮಾಡಿ ಪೊಲೀಸರಿಗೆ ಕಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತರಾದ ಖಾಕಿ ಪಡೆ ಮನೆ ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ. ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ ತನ್ನ ಮಗನಿಗೆ ಅದು ಯಾವ ಬಾವುಟವೆಂದು ತಿಳಿಯದೆ […]

ಮನೆ ಮೇಲೆ ಬಾವುಟ ರಾರಾಜಿಸ್ತಿರಬೇಕು ಅಂತಾ ಪಾಕ್ ಧ್ವಜ ಹಾರಿಸಿಬಿಟ್ಟ! ಆಮೇಲೆ?
Edited By:

Updated on: Aug 31, 2020 | 6:39 PM

ಭೋಪಾಲ್​: ಬಾವುಟ ಹಾರಿಸೋ ಉತ್ಸಾಹದಲ್ಲಿ ಪಾಕಿಸ್ತಾನದ ಧ್ವಜವನ್ನ ಹಾರಿಸಿರೋ ಘಟನೆ ಮಧ್ಯಪ್ರದೇಶದ ದೇವಾಸ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ನಮ್ಮ ಮನೆ ಮೇಲೆ ಒಂದು ಬಾವುಟ ರಾರಾಜಿಸಬೇಕು ಅನ್ನೋ ಆಸೆಯಲ್ಲಿ 12 ವರ್ಷದ ಹುಡುಗನೊಬ್ಬ ಪಾಕಿಸ್ತಾನದ ಧ್ವಜ ಹಾರಿಸಿದ್ದಾನೆ. ಇದನ್ನು ಕಂಡು ಒಂದು ಕ್ಷಣ ಅವಾಕ್ಕಾದ ಸ್ಥಳೀಯರು ಅದರ ವಿಡಿಯೋ ಮಾಡಿ ಪೊಲೀಸರಿಗೆ ಕಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತರಾದ ಖಾಕಿ ಪಡೆ ಮನೆ ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ.

ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ ತನ್ನ ಮಗನಿಗೆ ಅದು ಯಾವ ಬಾವುಟವೆಂದು ತಿಳಿಯದೆ ತಪ್ಪು ಮಾಡಿಬಿಟ್ಟ ಅಂತಾ ಮನೆ ಮಾಲೀಕ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Published On - 6:23 pm, Mon, 31 August 20