ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿದ್ದ ಮತ್ತು ಕೆಟ್ಟದಾಗಿ ಅಪಹಾಸ್ಯ ಮಾಡಿದ್ದ ವ್ಯಕ್ತಿಯೊಬ್ಬನನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಈತ ಪ್ರಧಾನಿ ಮತ್ತು ಗೃಹ ಸಚಿವರನ್ನು ನಿಂದಿಸಿದ, ಅಪಹಾಸ್ಯ ಮಾಡಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಆತನ ಪತ್ತೆ ಕಾರ್ಯ ಶುರು ಮಾಡಿದರು. ಇದೀಗ ಜಬಲ್ಪುರ್ನಲ್ಲಿ ಬಂಧಿಸಿದ್ದಾರೆ. ಬಂಧಿತನ ಹೆಸರು ಆದಿಲ್ ಅಲಿ ಎಂದು ಹೇಳಲಾಗಿದ್ದು, ಇವನಿಗೆ 38ವರ್ಷ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ಅವಹೇಳನ ಮಾಡಿದ್ದರಿಂದಲೇ ಬಂಧಿಸಿದ್ದಾಗಿ ಸ್ಥಳೀಯ ಎಸ್ಪಿ ಸಿದ್ಧಾರ್ಥ್ ಬಹುಗುಣ್ ತಿಳಿಸಿದ್ದಾರೆ.
ಅಲಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 153 (ಗಲಭೆಗೆ ಪ್ರಚೋದನೆ), ಸೆಕ್ಷನ್ 294 ( ಅಶ್ಲೀಲ ಪದಗಳುಳ್ಳ ಹಾಡುಗಳನ್ನು ಹೇಳಿದ್ದು ಮತ್ತು ಕೃತ್ಯ ಎಸಗಿದ್ದು)ರಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಅಜಂಗಢ್ನಲ್ಲಿ ಪ್ರಧಾನಿ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಅವಹೇಳನ ಮಾಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಅಂದಹಾಗೇ, ಇವರು ಸಹಾಯಕ ಪ್ರಾಧ್ಯಾಪಕರಾಗಿದ್ದು, ರಾಜಕೀಯ ಪಕ್ಷವೊಂದರ ಜತೆಗೆ ಗುರುತಿಸಿಕೊಂಡಿದ್ದರು. ಹಾಗೇ, ಆ ಪಕ್ಷದ ಪರವಾಗಿ ಸಾರ್ವಜನಿಕ ಸಂಪರ್ಖ ಸಭೆಗಳು, ಪ್ರಚಾರಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಇದನ್ನೂ ಓದಿ: ಸೌತ್ ಚಿತ್ರಗಳ ಎದುರು ಬಾಲಿವುಡ್ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್ 2’ ಅಧೀರ ಸಂಜಯ್ ದತ್