AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸಲು ಭಾರತ ಮಾತುಕತೆಗಳಲ್ಲಿ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ: ಫಿನ್​​ಲ್ಯಾಂಡ್​​ ಸಚಿವ

ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ವಿಶೇಷವಾಗಿ ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು 5G ಮತ್ತು 6G ಯಲ್ಲಿ ಜಂಟಿಯಾಗಿ ಕೆಲಸ ಮಾಡಲು, ಪಾರದರ್ಶಕ ಮತ್ತು ವಿಶ್ವಾಸಾರ್ಹ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ಫಿನ್‌ಲ್ಯಾಂಡ್‌ಗೆ ಸಾಕಷ್ಟು ಅವಕಾಶಗಳಿವೆ.

ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸಲು ಭಾರತ ಮಾತುಕತೆಗಳಲ್ಲಿ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ: ಫಿನ್​​ಲ್ಯಾಂಡ್​​ ಸಚಿವ
ಫಿನ್‌ಲ್ಯಾಂಡ್‌ನ ಆರ್ಥಿಕ ವ್ಯವಹಾರಗಳ ಸಚಿವ ಮಿಕಾ ಲಿಂಟಿಲಾ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Apr 18, 2022 | 11:04 PM

Share

ದೆಹಲಿ: ಯುರೋಪ್‌ನಾದ್ಯಂತ ಆರ್ಥಿಕ ಮತ್ತು ಭದ್ರತಾ ಕ್ಷೇತ್ರಗಳ ಮೇಲೆ ಭಾರಿ ಪರಿಣಾಮ ಬೀರಿರುವ ಉಕ್ರೇನ್‌ನಲ್ಲಿನ (Ukraine) ಸಂಘರ್ಷವನ್ನು ಕೊನೆಗೊಳಿಸಲು ಭಾರತವು ಮಾತುಕತೆಗೆ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ ಎಂದು ಫಿನ್‌ಲ್ಯಾಂಡ್‌ನ (Finland) ಆರ್ಥಿಕ ವ್ಯವಹಾರಗಳ ಸಚಿವ ಮಿಕಾ ಲಿಂಟಿಲಾ (Mika Lintilä)  ಸೋಮವಾರ ಹೇಳಿದ್ದಾರೆ. ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ವಿಶೇಷವಾಗಿ ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು 5G ಮತ್ತು 6G ಯಲ್ಲಿ ಜಂಟಿಯಾಗಿ ಕೆಲಸ ಮಾಡಲು, ಪಾರದರ್ಶಕ ಮತ್ತು ವಿಶ್ವಾಸಾರ್ಹ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ಫಿನ್‌ಲ್ಯಾಂಡ್‌ಗೆ ಸಾಕಷ್ಟು ಅವಕಾಶಗಳಿವೆ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಲಿಂಟಿಲಾ ಮತ್ತು ಆರ್ಥಿಕ ವ್ಯವಹಾರಗಳ ರಾಜ್ಯದ ಅಧೀನ ಕಾರ್ಯದರ್ಶಿ ಪೆಟ್ರಿ ಪೆಲ್ಟೋನೆನ್ ಅವರು ಭಾರತೀಯ ಹೂಡಿಕೆಗಳು ಮತ್ತು ಕಂಪನಿಗಳನ್ನು ಫಿನ್‌ಲ್ಯಾಂಡ್‌ಗೆ ಆಕರ್ಷಿಸಲು ಮತ್ತು ಕ್ವಾಂಟಮ್ ತಂತ್ರಜ್ಞಾನ, ದೂರಸಂಪರ್ಕ, ಕೃತಕ ಬುದ್ಧಿಮತ್ತೆ (AI) ಮತ್ತು ನವೀಕರಿಸಬಹುದಾದ ಇಂಧನದಲ್ಲಿ ಸಹಯೋಗವನ್ನು ರೂಪಿಸಲು ವ್ಯಾಪಾರ ನಿಯೋಗದೊಂದಿಗೆ ಪ್ರಸ್ತುತ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣವು ಇಡೀ ಯುರೋಪ್‌ಗೆ ಗಂಭೀರ ಪರಿಣಾಮಗಳನ್ನು ಬೀರಿದೆ.ಶೇ 6 ಕ್ಕಿಂತ ಹೆಚ್ಚು ಫಿನ್ನಿಷ್ ನಾಗರಿಕರು ಈಗ ದೇಶವು ನ್ಯಾಟೊ (NATO) ಸದಸ್ಯನಾಗಬೇಕೆಂದು ಬಯಸುತ್ತಾರೆ ಎಂದು ಲಿಂಟಿಲಾ ಹೇಳಿದರು. ಉಕ್ರೇನ್ ಬಿಕ್ಕಟ್ಟಿಗೆ ಭಾರತದ ಪ್ರತಿಕ್ರಿಯೆಯು ಅವರ ಭಾರತೀಯ ಸಂವಾದಕರೊಂದಿಗೆ ಅವರ ಸಂಭಾಷಣೆಯಲ್ಲಿ ಕಾಣಿಸಿಕೊಂಡಿದೆಯೇ ಎಂದು ಕೇಳಿದಾಗ ಲಿಂಟಿಲಾ ಅವರು, ವಾಸ್ತವವಾಗಿ ಇದು ವಿದೇಶಾಂಗ ಸಚಿವರ ವಲಯವಾಗಿದೆ ಆದರೆ ಭಾರತವು ಮಾತುಕತೆಗಳಲ್ಲಿ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಭಾರತವು ಏನನ್ನಾದರೂ ಮಾಡಲು ಸಾಧ್ಯವಾದರೆ, ಅದಕ್ಕಾಗಿ ನಾವು ತುಂಬಾ ಕೃತಜ್ಞರಾಗಿರುತ್ತೇವೆ, ಏಕೆಂದರೆ ಈ ಸಮಯದಲ್ಲಿ ಸಂಧಾನಗಳು ಯಾವುದೇ ಫಲಿತಾಂಶಗಳನ್ನು ನೀಡುತ್ತಿಲ್ಲ ಎಂಬ ಭಾವನೆ ಬಂದಿದೆ ಎಂದಿದ್ದಾರೆ.

ಭಾರತವು ಉಕ್ರೇನ್‌ನಲ್ಲಿನ ರಷ್ಯಾ ಆಕ್ರಮಣ ಕೊನೆಗೊಳಿಸಲು ಮತ್ತು ರಾಜತಾಂತ್ರಿಕತೆ ಮತ್ತು ಮಾತುಕತೆಯ ಹಾದಿಗೆ ಮರಳಲು ಪದೇ ಪದೇ ಕರೆ ನೀಡಿದೆ. ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರ ನಡುವೆ ನೇರ ಮಾತುಕತೆ ನಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಸಲಹೆ ನೀಡಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಿಸ್ಥಿತಿಯ ಬಗ್ಗೆ ಏನು ಯೋಚಿಸುತ್ತಾರೆ ಎಂದು ಯಾರಿಗೂ ತಿಳಿದಿಲ್ಲ ಎಂದು ಲಿಂಟಿಲಾ ಹೇಳಿದರು. ವ್ಯಾಪಾರ ಮತ್ತು ಆರ್ಥಿಕ ಪರಿಸ್ಥಿತಿಯು ಈ ಸಂಘರ್ಷದಿಂದ ಜಟಿಲವಾಗಿದೆ. ಆದರೆ ಯುರೋಪ್‌ನ ಜನರು ಇಂಧನ, ಹಣಕಾಸು ಮತ್ತು ಲಾಜಿಸ್ಟಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಬಿಗಿಯಾದ ನಿರ್ಬಂಧಗಳನ್ನು “ಅದೇನೇ ಇರಲಿ” ನಿರ್ವಹಿಸಬೇಕು ಎಂದು ಭಾವಿಸುತ್ತಾರೆ ಎಂದು ಅವರು ಹೇಳಿದರು. “ರಷ್ಯಾದ ದಾಳಿಯನ್ನು ಫಿನ್ಲ್ಯಾಂ​​ಡ್ ಬಲವಾಗಿ ಖಂಡಿಸುತ್ತದೆ. ರಷ್ಯಾದ ಕ್ರಮಗಳು ಉಕ್ರೇನ್‌ ನ್ನು ಗುರಿಯಾಗಿಸುತ್ತವೆ. ಆದರೆ ಅವು ಒಟ್ಟಾರೆಯಾಗಿ ಯುರೋಪಿಯನ್ ಭದ್ರತೆಯ ಮೇಲೆ ದಾಳಿಯಾಗಿದೆ. ರಷ್ಯಾದ ದಾಳಿಯು ಅಂತರರಾಷ್ಟ್ರೀಯ ಕಾನೂನು ಮತ್ತು ಯುಎನ್ ಚಾರ್ಟರ್​​ನ ಸ್ಪಷ್ಟ ಉಲ್ಲಂಘನೆಯಾಗಿದೆ. 2022 ರಲ್ಲಿ ಯುರೋಪ್‌ನಲ್ಲಿ ಯುದ್ಧವಿದೆ ಎಂದು ಇಡೀ ಯುರೋಪ್ ಒಂದು ರೀತಿಯ ಆಘಾತದಲ್ಲಿದೆ ಎಂದು ಲಿಂಟಿಲಾ ಹೇಳಿದರು.

ಇದನ್ನೂ ಓದಿRussia Ukraine War: ಅಣ್ವಸ್ತ್ರ ದಾಳಿ ಭೀತಿಯಲ್ಲಿ ಜಗತ್ತು, ಉಕ್ರೇನ್​ ಬೆಂಬಲಕ್ಕೆ ಸಬ್​ಮರೀನ್ ಕಳುಹಿಸಿದ ಬ್ರಿಟನ್, ಕೆರಳಿದ ರಷ್ಯಾ

Published On - 10:46 pm, Mon, 18 April 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ