ಆರ್ಥಿಕ ಬಿಕ್ಕಟ್ಟಿನತ್ತ ಚೀನಾ: ಕೊವಿಡ್​ನಿಂದ ಮತ್ತೆ ಸರಣಿ ಸಾವು, ತತ್ತರಿಸಿವೆ ರಿಯಲ್ ಎಸ್ಟೇಟ್, ಆಟೊ ವಲಯ

ಕೊವಿಡ್ ವಿಚಾರದಲ್ಲಿ ಚೀನಾ ಅನುಸರಿಸುತ್ತಿರುವ ಶೂನ್ಯ ಸಹಿಷ್ಣು ಅನಾನುಕೂಲವೇ ಹೆಚ್ಚು. ಶಾಂಘೈನ ಆರೋಗ್ಯ ಇಲಾಖೆ ನೌಕರರು ಬಿಡುವಿಲ್ಲದ ದುಡಿಮೆಯಿಂದ ಹೈರಾಣಾಗಿದ್ದಾರೆ.

ಆರ್ಥಿಕ ಬಿಕ್ಕಟ್ಟಿನತ್ತ ಚೀನಾ: ಕೊವಿಡ್​ನಿಂದ ಮತ್ತೆ ಸರಣಿ ಸಾವು, ತತ್ತರಿಸಿವೆ ರಿಯಲ್ ಎಸ್ಟೇಟ್, ಆಟೊ ವಲಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 18, 2022 | 7:31 AM

ಚೀನಾದ ಶಾಂಘೈ ಮಹಾನಗರದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ. ವೃದ್ಧರ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರ ಸಾವು ಪ್ರತಿದಿನ ಎಂಬಂತೆ ವರದಿಯಾಗುತ್ತಿದೆ. ಕೊವಿಡ್ ವಿಚಾರದಲ್ಲಿ ಚೀನಾ ಅನುಸರಿಸುತ್ತಿರುವ ಶೂನ್ಯ ಸಹಿಷ್ಣು (ಝೀರೊ ಟಾಲರೆನ್ಸ್) ನೀತಿಯಿಂದ ಅನುಕೂಲಕ್ಕಿಂತಲೂ ಅನಾನುಕೂಲವೇ ಹೆಚ್ಚು ಎಂದು ವರದಿಗಳು ಹೇಳಿವೆ. ಓರ್ವ ಆರೋಗ್ಯ ಕಾರ್ಯಕರ್ತನೂ ಮೃತಪಟ್ಟಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಶಾಂಘೈನ ಆರೋಗ್ಯ ಇಲಾಖೆ ನೌಕರರು ಲಾಕ್​ಡೌನ್ ನಿರ್ಬಂಧ ಜಾರಿ ಮತ್ತು ಜನರಿಗೆ ಸೇವೆ ಒದಗಿಸುವ ಕರ್ತವ್ಯದಲ್ಲಿ ಏಕಕಾಲಕ್ಕೆ ತೊಡಗಿಸಿಕೊಂಡಿದ್ದು ಕೆಲಸದ ಒತ್ತಡದಿಂದ ಹೈರಾಣಾಗಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಆರೋಗ್ಯ ಇಲಾಖೆ ನೌಕರರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಶನಿವಾರ ಚೀನಾದ ಶಾಂಘೈನಲ್ಲಿ 23,000 ಮಂದಿಯಲ್ಲಿ ಹೊಸದಾಗಿ ಕೊವಿಡ್ ಸೋಂಕು ಪತ್ತೆಯಾಗಿದೆ. ಆದರೆ ಈ ಪೈಕಿ 1015 ಮಂದಿಯಲ್ಲಿ ಮಾತ್ರ ರೋಗ ಲಕ್ಷಣಗಳಿದ್ದವು.

ಶಾಂಘೈ ನಗರದಲ್ಲಿ ಕಂಡುಬಂದಿರುವ ಈವರೆಗಿನ 10 ಪ್ರಮುಖ ಬೆಳವಣಿಗೆಗಳು ಇವು

  1. ಶಾಂಘೈನ ಡೊಂಘೈ ಎಲ್​ಡರ್​ಲಿ ಕೇರ್ ಆಸ್ಪತ್ರೆಯಲ್ಲಿ ಹಲವು ರೋಗಿಗಳು ಮೃತಪಟ್ಟಿದ್ದಾರೆ ಎಂದು ಅಸೋಸಿಯೇಟೆಟ್ ಪ್ರೆಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ವೃದ್ಧರನ್ನು ನೋಡಿಕೊಳ್ಳುತ್ತಿದ್ದವರಲ್ಲಿ ಸೋಂಕು ಪತ್ತೆಯಾದ ನಂತರ ಅವರನ್ನು ಕಡ್ಡಾಯ ಕ್ವಾರಂಟೈನ್​ಗೆ ಒಳಪಡಿಸಲಾಯಿತು. ಈ ವೇಳೆ ವೃದ್ಧರ ಆರೈಕೆ ಮಾಡಲು ಯಾರೂ ಇರಲಿಲ್ಲ. ಆಸ್ಪತ್ರೆಗೆ ಸಿಬ್ಬಂದಿಯ ಮೇಲೆಯೂ ಕೊರೊನಾ ಕರ್ತವ್ಯದ ಒತ್ತಡವಿದ್ದ ಕಾರಣ ಅವರಿಗೂ ವೃದ್ಧರ ಆರೈಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಆಗಲಿಲ್ಲ. ಹೀಗಾಗಿ ಸಾಕಷ್ಟು ಜನರು ಮೃತಪಟ್ಟಿದ್ದಾರೆ ಎಂದು ಚೀನಾದ ಅಧಿಕಾರಿಗಳು ವಿವರಿಸಿದ್ದಾರೆ.
  2. ಕ್ವಾರಂಟೈನ್​ನಲ್ಲಿರುವ ಸಂಬಂಧಿಗಳು ಆಸ್ಪತ್ರೆಯಲ್ಲಿರುವ ತಮ್ಮ ಕುಟುಂಬಗಳ ಹಿರಿಯರ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿರುವವರಿಗೆ ನೀಡುತ್ತಿರುವ ಚಿಕಿತ್ಸೆಯ ವಿಡಿಯೊಗಳನ್ನು ಪೋಸ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
  3. ಶಾಂಘೈನಲ್ಲಿ ಕೊವಿಡ್ ಸೋಂಕು ಪತ್ತೆಯಾಗಿದ್ದರೂ ಬಹುತೇಕ ಸೋಂಕಿತರಲ್ಲಿ ಯಾವುದೇ ಸೋಂಕು ಲಕ್ಷಣಗಳಿಲ್ಲ. ಆದರೆ ಚೀನಾ ಸರ್ಕಾರವು ಹಟಕ್ಕೆ ಬಿದ್ದಂತೆ ಲಾಕ್​ಡೌನ್ ಹೇರಿ, ಸೋಂಕಿತರನ್ನು ಕ್ವಾರಂಟೈನ್​ಗೆ ಒಳಪಡಿಸಿರುವ ಕಾರಣ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಆಗುತ್ತಿದೆ.
  4. ಚೀನಾದ ಶಾಂಘೈ ನಗರದಲ್ಲಿ ಕಾಣಿಸಿಕೊಂಡಿರುವ ಕೊವಿಡ್ ಸೋಂಕು ಮತ್ತು ಅದನ್ನು ತಡೆಯಲು ಚೀನಾ ಅನುಸರಿಸುತ್ತಿರುವ ಕಟ್ಟುನಿಟ್ಟಿನ ಪ್ರತಿಬಂಧಕ ನೀತಿಯಿಂದಾಗಿ ಸರಕು ಪೂರೈಕೆ ಸರಪಣಿಗೆ ಧಕ್ಕೆ ಒದಗಿದೆ. ಬಂದರುಗಳಲ್ಲಿ ಸರಕು ಇಳಿಸುವುದು ಮತ್ತು ಹಡಗುಗಳಿಗೆ ಲೋಡ್ ಮಾಡುವ ಪ್ರಕ್ರಿಯೆ ಸ್ಥಗಿತಗೊಂಡಿದೆ.
  5. ಬಂದರಿನಲ್ಲಿ ಇಳಿಸಿರುವ ಸರಕುಗಳು ಸಹ ಉದ್ದೇಶಿತ ಸ್ಥಳಗಳಿಗೆ ತಲುಪುತ್ತಿಲ್ಲ. ಸರಕು ಪೂರೈಕೆ ಸರಪಣಿಯಲ್ಲಿ ಏರುಪೇರಾಗಿರುವುದರಿಂದ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕ್ರಿಯೆಗಳು ಸ್ಥಗಿತತೊಂಡಿದ್ದು, ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗುವ ಅಪಾಯ ಎದುರಾಗಿದೆ.
  6. ಚೀನಾದ ಮಹತ್ವಾಕಾಂಕ್ಷಿ ಜಿಡಿಪಿ ಪ್ರಗತಿಯ ನಿರೀಕ್ಷೆಗೂ ಕೊವಿಡ್ ತಣ್ಣೀರು ಎರಚಿದೆ. ಇತ್ತೀಚೆಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಚೀನಾದ ಆರ್ಥಿಕತೆಯನ್ನು ನಿರ್ವಹಿಸುವುದೇ ಅಲ್ಲಿನ ಆಡಳಿತಕ್ಕೆ ದೊಡ್ಡ ಸವಾಲಾಗಿದೆ.
  7. ಕಳೆದ ವರ್ಷ ಕುಸಿದಿದ್ದ ಚೀನಾದ ರಿಯಲ್ ಎಸ್ಟೇಟ್ ಮಾರುಕಟ್ಟೆ ಇನ್ನೂ ಚೇತರಿಸಿಕೊಂಡಿಲ್ಲ. ಭವಿಷ್ಯದ ಬಗ್ಗೆ ಭರವಸೆ ತುಂಬುವಲ್ಲಿ ಸರ್ಕಾರ ವಿಫಲವಾಗಿರುವುದರಿಂದ ಮತ್ತು ಕೊವಿಡ್ ಕಾರ್ಮೋಡ ಆವರಿಸಬಹುದು ಎಂಬ ಆತಂಕದಿಂದ ಜನರು ದೊಡ್ಡ ಮಟ್ಟದ ಖರೀದಿಗೆ ಮುಂದಾಗುತ್ತಿಲ್ಲ. ಗ್ರಾಹಕರು ಈ ಮನಃಸ್ಥಿತಿಯಿಂದ ಉತ್ಪಾದನೆ-ಮಾರಾಟ-ಖರೀದಿ ಪ್ರಕ್ರಿಯೆಗೆ ಧಕ್ಕೆಯೊದಗಿದೆ.
  8. ಕಳೆದ ಒಂದು ದಶಕದಲ್ಲಿಯೇ ಅತ್ಯಂತ ಕನಿಷ್ಠ ಪ್ರಮಾಣಕ್ಕೆ ಜಿಡಿಪಿ ಗುರಿಯನ್ನು ಚೀನಾ ಇಳಿಸಿಕೊಳ್ಳಬೇಕಾಗಿದೆ. ಅಲ್ಲಿನ ಸರ್ಕಾರ ಶೇ 5.5ರ ಪ್ರಗತಿಯನ್ನು ಘೋಷಿಸಿದೆಯಾದರೂ, ಶೇ 4ರಷ್ಟು ಪ್ರಗತಿ ಸಾಧಿಸುವುದೂ ಕಷ್ಟ ಎಂದು ವಿಶ್ವ ಆರ್ಥಿಕ ವಿಶ್ಲೇಷಕರು ಹೇಳುತ್ತಿದ್ದಾರೆ.
  9. ಚೀನಾದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡ ಕೊರೊನಾ ಉಂಟುಮಾಡಿರುವ ಆತಂಕ ಮತ್ತು ಕೊವಿಡ್​ಗೆ ಕಡಿವಾಣ ಹಾಕುವ ನೆಪದಲ್ಲಿ ಪೂರೈಕೆ ಸರಪಳಿಗೆ ಧಕ್ಕೆಯೊದಗಿಸುವಂಥ ನಿರ್ಧಾರಗಳನ್ನು ಅಲ್ಲಿನ ಸರ್ಕಾರ ತೆಗೆದುಕೊಂಡಿರುವುದು ಎರಡು ವರ್ಷದ ಪ್ರಗತಿಯನ್ನು ಹಿಂದಕ್ಕೆ ತಳ್ಳುತ್ತಿದೆ.
  10. ಚೀನಾದ ವಾಣಿಜ್ಯ ನಗರಿ ಶಾಂಘೈ ಮಾತ್ರವೇ ಅಲ್ಲ, ಟೆಕ್ ಸಿಟಿ ಎನಿಸಿಕೊಳ್ಳುವ ಶೆನ್​ಝೆನ್​ನಲ್ಲಿಯೂ ಕೊವಿಡ್ ಕಾಣಿಸಿಕೊಂಡಿದ್ದು ಲಾಕ್​ಡೌನ್ ಘೋಷಿಸಲಾಗಿದೆ. ಶಾಂಘೈ ಬಂದರು ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ಕಾರು ತಯಾರಿಕಾ ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿವೆ.

ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಹರಡುತ್ತಿದೆ ಕೊವಿಡ್: 13000 ಹೊಸ ಪ್ರಕರಣಗಳು, ಮತ್ತೊಂದು ಅಲೆಯ ಆತಂಕ

ಇದನ್ನೂ ಓದಿ: ದೆಹಲಿಯಲ್ಲಿ ಕೊವಿಡ್ 19 ಪಾಸಿಟಿವಿಟಿ ರೇಟ್​ ಶೇ. 3.95ಕ್ಕೆ ಏರಿಕೆ; ಮತ್ತೆ ಶುರುವಾಗಿದೆ ಕೊರೊನಾ ಆತಂಕ

Published On - 7:31 am, Mon, 18 April 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ