ಮುಂಬೈ: ಚಲಿಸ್ತಿದ್ದ ರೈಲಿನಲ್ಲಿ ಸ್ಟಂಟ್ ಮಾಡಲು ಹೋಗಿ ಯುವಕ ಪ್ರಾಣ ಕಳೆದುಕೊಂಡ ಘಟನೆ ಮುಂಬೈನ ದಿವಾ ಮತ್ತು ಮುಂಬ್ರ ರೈಲ್ವೆ ನಿಲ್ದಾಣಗಳ ಮಾರ್ಗದ ಮಧ್ಯೆ ನಡೆದಿದೆ. ದಿಲ್ಶಾಂತ್ ಖಾನ್ ರೈಲಿನ ಮೆಟ್ಟಿಲುಗಳ ಮೇಲೆ ನಿಂತು ರೈಲಿನ ಆಚೆ ಗಾಳಿಯಲ್ಲಿ ತೇಲುತ್ತಾ ಸಿನಿಮೀಯ ಮಾದರಿ ಸ್ಟಂಟ್ ಮಾಡುವಾಗ ಕಂಬ ಬಡಿದು ಯುವಕ ಮೃತಪಟ್ಟಿದ್ದಾನೆ. ಈತನ ಸ್ನೇಹಿತನ ಮೊಬೈಲ್ನಲ್ಲಿ ಈ ದೃಶ್ಯದ ವಿಡಿಯೋ ಸೆರೆಯಾಗಿದೆ.
Published On - 12:36 pm, Mon, 30 December 19