ನೆಲ್ಲೂರು ನಾಟಿ ವೈದ್ಯ ಆನಂದಯ್ಯ ಬಳಿ ಔಷಧಿ ಪಡೆದಿದ್ದ ವ್ಯಕ್ತಿ ಸಾವು

ಕೃಷ್ಣಪಟ್ಟಣಂನಲ್ಲಿ ಆನಂದಯ್ಯ ಬಳಿ ಔಷಧ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಇದೇ ಮೇ ತಿಂಗಳ 22ರಂದು ಕೋಟಯ್ಯ ನೆಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೋಟಯ್ಯ ಸಾವನ್ನಪ್ಪಿದ್ದಾರೆ.

ನೆಲ್ಲೂರು ನಾಟಿ ವೈದ್ಯ ಆನಂದಯ್ಯ ಬಳಿ ಔಷಧಿ ಪಡೆದಿದ್ದ ವ್ಯಕ್ತಿ ಸಾವು
ಪ್ರಾತಿನಿಧಿಕ ಚಿತ್ರ

Updated on: May 31, 2021 | 11:38 AM

ತಿರುಪತಿ: ಕೊವಿಡ್ ನಿವಾರಣೆಗೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಗ್ರಾಮದ ನಾಟಿ ವೈದ್ಯ ಆನಂದಯ್ಯ ನೀಡುತ್ತಿದ್ದ ಔಷಧ ಪಡೆದಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ನೆಲ್ಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಆಂಧ್ರದ ನೆಲ್ಲೂರು‌ ಜಿಲ್ಲೆಯ‌ ನಿವೃತ್ತ ಹೆಡ್ ಮಾಸ್ಟರ್ ಕೋಟಯ್ಯ ಮೃತಪಟ್ಟಿದ್ದಾರೆ.

ಕೃಷ್ಣಪಟ್ಟಣಂನಲ್ಲಿ ಆನಂದಯ್ಯ ಬಳಿ ಔಷಧ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಇದೇ ಮೇ ತಿಂಗಳ 22ರಂದು ಕೋಟಯ್ಯ ನೆಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೋಟಯ್ಯ ಸಾವನ್ನಪ್ಪಿದ್ದಾರೆ.

ಕೆಲ ದಿನಗಳ ಹಿಂದೆ ನೆಲ್ಲೂರು ನಾಟಿ ವೈದ್ಯ ಆನಂದಯ್ಯ ಬಳಿ ಔಷಧಿ ಪಡೆದಿದ್ದ ಮೃತ ವ್ಯಕ್ತಿಯ ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಕೋಟಯ್ಯ ನಾನು ಆನಂದಯ್ಯ ಬಳಿ ಜೇನಿನಿಂದ ಮಾಡಲಾಗಿರುವ ಕಣ್ಣಿನ ಔಷಧಿ ಪಡೆದ ಬಳಿಕ ನನ್ನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಹೇಳಿದ್ದರು. ಆದರೆ ಔಷಧಿ ಪಡೆದ ಕೆಲವೇ ದಿನಗಳಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದು ಐಸಿಯುಗೆ ದಾಖಲಾಗಿದ್ದರು. ಆದರೆ ಈಗ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಆಯುಷ್​ ಇಲಾಖೆ ತಡೆ ನೀಡಿದ್ದರೂ ಆನಂದಯ್ಯನವರ ಆಯುರ್ವೇದ ಔಷಧಿ ವಿತರಣೆಗೆ ಮುಂದಾದ ಟಿಟಿಡಿ..

ಆನಂದಯ್ಯರ ಔಷಧವನ್ನು ಕೊವಿಡ್ ಔಷಧಿ ಎಂದು ಹೇಳಲಾಗದು: ಆಂಧ್ರಪ್ರದೇಶ ಆಯುಷ್ ಇಲಾಖೆ