AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಯುಷ್​ ಇಲಾಖೆ ತಡೆ ನೀಡಿದ್ದರೂ ಆನಂದಯ್ಯನವರ ಆಯುರ್ವೇದ ಔಷಧಿ ವಿತರಣೆಗೆ ಮುಂದಾದ ಟಿಟಿಡಿ..

ಆನಂದಯ್ಯನವರ ಶಿಷ್ಯಂದಿರು ತಿರುಪತಿಗೆ ಭೇಟಿ ನೀಡಲಿದ್ದಾರೆ. ಚೆವಿರೆಡ್ಡಿ ಭಾಸ್ಕರ್​ರೆಡ್ಡಿ ನೇತೃತ್ವದಲ್ಲಿ ಟಿಟಿಯ ಆಯುರ್ವೇದಿಕ್​ ಫಾರ್ಮಾಗೆ ಹೋಗಿ ಔಷಧೀಯ ಸಸ್ಯ, ಗಿಡಮೂಲಿಕೆಗಳನ್ನು ಪರಿಶೀಲನೆ ಮಾಡಲಿದ್ದಾರೆ.

ಆಯುಷ್​ ಇಲಾಖೆ ತಡೆ ನೀಡಿದ್ದರೂ ಆನಂದಯ್ಯನವರ ಆಯುರ್ವೇದ ಔಷಧಿ ವಿತರಣೆಗೆ ಮುಂದಾದ ಟಿಟಿಡಿ..
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: May 26, 2021 | 6:09 PM

Share

ತಿರುಪತಿ: ಆಂಧ್ರಪ್ರದೇಶದ ಕೃಷ್ಣಾಪಟ್ಟಣಂನಲ್ಲಿ ಆನಂದಯ್ಯ ಎಂಬುವರು ಕೊವಿಡ್​ 19 ಸೋಂಕಿಗೆ ನೀಡುತ್ತಿದ್ದ ಆಯುರ್ವೇದ ಔಷಧಿಗೆ ತಾತ್ಕಾಲಿಕ ತಡೆನೀಡಲಾಗಿದೆ. ಈಗಾಗಲೇ ಆಯುಷ್​ ಇಲಾಖೆಯ ತಜ್ಞರ ತಂಡ ಔಷಧಿ ತಯಾರಿಕೆಯನ್ನು ಪರಿಶೀಲನೆ ನಡೆಸಿದ್ದು, ಈ ಔಷಧಿ ಕೊವಿಡ್​ 19 ಸೋಂಕನ್ನು ಕಡಿಮೆ ಮಾಡುತ್ತದೆ, ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತು ಆಗುವವರೆಗೂ ಅದನ್ನು ಕೊವಿಡ್​ 19 ಔಷಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಇಲಾಖೆ ತಿಳಿಸಿದೆ.

ಹೀಗಿದ್ದಾಗ್ಯೂ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್​ ಬೋರ್ಡ್, ಬೋನಿಗಿ​ ಆನಂದಯ್ಯ ಅವರ ಔಷಧಿಯನ್ನು ಉತ್ಪಾದಿಸಿ, ವಿತರಿಸುವುದಾಗಿ ಹೇಳಿದೆ. ಇದಕ್ಕೆ ಚಂದ್ರಗಿರಿ ಶಾಸಕ ಚೆವಿರೆಡ್ಡಿ ಭಾಸ್ಕರ್​ ರೆಡ್ಡಿಯವರೂ ಸಾಥ್​ ನೀಡಿದ್ದಾರೆ. ಬೋನಿಗಿ ಆನಂದಯ್ಯ ಅವರ ಆಯುರ್ವೇದ ಔಷಧಿಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಅದು ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ. ಹೀಗಾಗಿ ನಾವು ಆ ಔಷಧಿಯನ್ನು ತಯಾರಿಸಿ, ವಿತರಣೆ ಮಾಡುತ್ತೇವೆ ಎಂದು ಟಿಟಿಡಿ ಹೇಳಿಕೊಂಡಿದೆ.

ಹೀಗಾಗಿ ಆನಂದಯ್ಯನವರ ಶಿಷ್ಯಂದಿರು ತಿರುಪತಿಗೆ ಭೇಟಿ ನೀಡಲಿದ್ದಾರೆ. ಚೆವಿರೆಡ್ಡಿ ಭಾಸ್ಕರ್​ರೆಡ್ಡಿ ನೇತೃತ್ವದಲ್ಲಿ ಟಿಟಿಯ ಆಯುರ್ವೇದಿಕ್​ ಫಾರ್ಮಾಗೆ ಹೋಗಿ ಔಷಧೀಯ ಸಸ್ಯ, ಗಿಡಮೂಲಿಕೆಗಳನ್ನು ಪರಿಶೀಲನೆ ಮಾಡಲಿದ್ದಾರೆ. ಹಾಗೇ, ಟಿಟಿಡಿಯ ಆಯುರ್ವೇದಿಕ್​ ಕಾಲೇಜಿನ ಪ್ರಾಧ್ಯಾಪಕರನ್ನೂ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಇನ್ನು ಸರ್ಕಾರದ ಅನುಮತಿ ದೊರೆತರೆ ಟಿಟಿಡಿ ಆಯುರ್ವೇದಿಕ್​ ಫಾರ್ಮ್​​ನಲ್ಲಿ ಔಷಧಿ ತಯಾರಿಕೆ ಶೀಘ್ರವೇ ಶುರುವಾಗಲಿದೆ.

ಇದನ್ನೂ ಓದಿ: ಕ್ರಿಕೆಟ್ ದುನಿಯಾದಲ್ಲಿ ಯಾರಿಂದಲೂ ಮುರಿಯಲಾಗದ 10 ವಿಶಿಷ್ಟ ದಾಖಲೆಗಳಿವು; ಈ ದಾಖಲೆಗಳ ಬಗ್ಗೆ ನಿಮಗೆಷ್ಟು ಗೊತ್ತು?

Follow Us
Lakshmi Hegde
Lakshmi Hegde
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್