ಕುಡಿದ ಮತ್ತಿನಲ್ಲಿ ಬಾಂಬ್ ಕಚ್ಚಿದ ವ್ಯಕ್ತಿ, ಬಾಯಿಯಲ್ಲೇ ಸ್ಫೋಟಗೊಂಡು ಸ್ಥಳದಲ್ಲೇ ಸಾವು
ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಾಂಬ್ ಅನ್ನು ಕಚ್ಚಿದ ಪರಿಣಾಮ ಸ್ಫೋಟಗೊಂಡು ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಬಂಗಾರುಪಾಲೆಂ ಮಂಡಲದ ಗದ್ದಂವಾರಿಪಲ್ಲಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ, 35 ವರ್ಷದ ವ್ಯಕ್ತಿಯೊಬ್ಬರು ಕಂಟ್ರಿ ಬಾಂಬ್ ಅನ್ನು ಕಚ್ಚಿದ ಪರಿಣಾಮ ಅದು ಸ್ಥಳದಲ್ಲೇ ಸ್ಫೋಟಗೊಂಡಿದೆ.

ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಾಂಬ್ ಅನ್ನು ಕಚ್ಚಿದ ಪರಿಣಾಮ ಬಾಯಿಯಲ್ಲೇ ಸ್ಫೋಟಗೊಂಡು ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಬಂಗಾರುಪಾಲೆಂ ಮಂಡಲದ ಗದ್ದಂವಾರಿಪಲ್ಲಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ, 35 ವರ್ಷದ ವ್ಯಕ್ತಿಯೊಬ್ಬರು ಕಂಟ್ರಿ ಬಾಂಬ್ ಅನ್ನು ಕಚ್ಚಿದ ಪರಿಣಾಮ ಅದು ಸ್ಥಳದಲ್ಲೇ ಸ್ಫೋಟಗೊಂಡಿದೆ.
ಬಂಗಾರುಪಾಲೆಂ ಸಿಐ ನಾಗರಾಜು ರಾವ್ ಅವರು ನೀಡಿರುವ ಮಾಹಿತಿ ಪ್ರಕಾರ, ಕೊಲೆಯಾದವರನ್ನು ಗದ್ದಂವಾರಿಪಲ್ಲಿ ನಿವಾಸಿ ಎಂ ಚಿರಂಜೀವಿ ಎಂದು ಗುರುತಿಸಲಾಗಿದೆ. ಚಿರಂಜೀವಿ ಪತ್ನಿ ಜತೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದರು, ಜತೆಗೆ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ಖಿನ್ನತೆಗೆ ಒಳಗಾಗಿದ್ದರು, ಕುಡಿತಕ್ಕೆ ದಾಸರಾಗಿದ್ದರು.
ಮತ್ತಷ್ಟು ಓದಿ: ಪಾಕಿಸ್ತಾನದಲ್ಲಿ ನೆಲ ಬಾಂಬ್ ಸ್ಫೋಟ, 7 ಮಂದಿ ಸಾವು
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆತ ಕುಡಿತದ ಅಮಲಿನಲ್ಲಿದ್ದ ಎಂಬುದು ತಿಳಿದುಬಂದಿದೆ. ಆಗ ಕಂಟ್ರಿ ಬಾಂಬ್ನ್ನು ಕಚ್ಚಿದ್ದಾನೆ, ಅದು ಬಾಯಿಯಲ್ಲಿಯೇ ಸ್ಫೋಟಗೊಂಡಿದೆ. ಘಟನೆಯಲ್ಲಿ ಮುಖವು ಸಂಪೂರ್ಣವಾಗಿ ಛಿದ್ರವಾಗಿತ್ತು. ಸ್ಥಳೀಯರು ಬಂದು ತಕ್ಷಣವೇ ಬಂಗಾರುಪಾಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಚಿರಂಜೀವಿ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಬಂಗಾರುಪಾಲೆಂ ಪೊಲೀಸರು ತಕ್ಷಣವೇ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಚಿರಂಜೀವಿ ಕೈಗೆ ಕಂಟ್ರಿ ಬಾಂಬ್ ಹೇಗೆ ಬಂದಿತ್ತು ಎನ್ನುವುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ