ಸಿಗ್ನಲ್ ಜಂಪ್ ಮಾಡಿ, ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡೆದು ಬಾನೆಟ್​ ಮೇಲೆ 1.5 ಕಿ.ಮೀ ಎಳೆದೊಯ್ದ ಚಾಲಕ

| Updated By: ನಯನಾ ರಾಜೀವ್

Updated on: Feb 14, 2023 | 10:25 AM

ಟ್ರಾಫಿಕ್ ಸಿಗ್ನಲ್ ದಾಟದಂತೆ ತಡೆದ ಟ್ರಾಫಿಕ್​ ಪೊಲೀಸರನ್ನು ಕಾರಿನ ಬಾನೆಟ್​ ಮೇಲೆ ಸುಮಾರು ಒಂದೂವರೆ ಕಿಲೋಮೀಟರ್​ನಷ್ಟು ಎಳೆದೊಯ್ದ ಘಟನೆ ಮಹಾರಾಷ್ಟ್ರದ ಪಾಲಘಡದಲ್ಲಿ ನಡೆದಿದೆ.

ಸಿಗ್ನಲ್ ಜಂಪ್ ಮಾಡಿ, ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡೆದು ಬಾನೆಟ್​ ಮೇಲೆ 1.5 ಕಿ.ಮೀ ಎಳೆದೊಯ್ದ ಚಾಲಕ
ಕಾರು
Image Credit source: IndiaToday
Follow us on

ಟ್ರಾಫಿಕ್ ಸಿಗ್ನಲ್ ದಾಟದಂತೆ ತಡೆದ ಟ್ರಾಫಿಕ್​ ಪೊಲೀಸರನ್ನು ಕಾರಿನ ಬಾನೆಟ್​ ಮೇಲೆ ಸುಮಾರು ಒಂದೂವರೆ ಕಿಲೋಮೀಟರ್​ನಷ್ಟು ಎಳೆದೊಯ್ದ ಘಟನೆ ಮಹಾರಾಷ್ಟ್ರದ ಪಾಲಘಡದಲ್ಲಿ ನಡೆದಿದೆ. ಮಾಣಿಕಪುರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸಂಪತ್ರಾವ್ ಪಾಟೀಲ್ ಮಾತನಾಡಿ, ಕಾರು ಚಾಲಕನಿಗೆ 19 ವರ್ಷ ವಯಸ್ಸಾಗಿದ್ದು, ಅವರ ಬಳಿ ಸರಿಯಾದ ಪರವಾನಗಿ ಕೂಡ ಇಲ್ಲ. ಭಾನುವಾರ ಈ ಘಟನೆ ನಡೆದಿದೆ ಎಂದು ತಿಳಿಸಿದರು.

ಕಾನ್ಸ್‌ಟೇಬಲ್‌ ವಿಚಾರಣೆ ನಡೆಸುತ್ತಿದ್ದಾಗ ಚಾಲಕ ಏಕಾಏಕಿ ಕಾರಿನ ವೇಗ ಹೆಚ್ಚಿಸಿ ಪೊಲೀಸರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಿದರು. ಡಿಕ್ಕಿ ಹೊಡೆದ ನಂತರ ಪೊಲೀಸರು ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ. ಈ ಸ್ಥಿತಿಯಲ್ಲಿ, ಚಾಲಕ ಸುಮಾರು ಒಂದೂವರೆ ಕಿಲೋಮೀಟರ್ ವಾಹನ ಚಲಾಯಿಸುವುದನ್ನು ಮುಂದುವರೆಸಿದ್ದು, ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಟ್ರಾಫಿಕ್ ಜಾಮ್‌ನಿಂದ ಕಾರು ನಿಲ್ಲಿಸಿದ್ದು, ದಾರಿಹೋಕರು ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಇನ್ಸ್‌ಪೆಕ್ಟರ್ ಪಾಟೀಲ್ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು: ಕಾರಿನ ಬಾನೆಟ್​​​ ಮೇಲೆ ಬಿದ್ದ ವ್ಯಕ್ತಿಯನ್ನು 2 ಕಿ.ಮೀ. ದೂರಕ್ಕೆ ಹೊತ್ತೊಯ್ದ ಚಾಲಕಿ; ಐವರು ಅರೆಸ್ಟ್

ಮುಂಬೈ ಡೌನ್‌ಟೌನ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ವಸಾಯಿ ಉಪನಗರದಲ್ಲಿ ಈ ಘಟನೆ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಟ್ರಾಫಿಕ್ ಪೊಲೀಸ್ ಪೇದೆ ಸೋಮನಾಥ್ ಚೌಧರಿ ಅವರನ್ನು ಕಾರಿನಿಂದ ಬಾನೆಟ್ ಮೇಲೆ ಎಳೆದುಕೊಂಡು ಹೋಗುವುದನ್ನು ತೋರಿಸಿವೆ.

ಚಾಲಕ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಕಾರು ಚಲಾಯಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆಗೆ ಯತ್ನ), 308 (ಅಪರಾಧ ನರಹತ್ಯೆ ಮಾಡಲು ಯತ್ನ) ಮತ್ತು 353 (ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯದಿಂದ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲ) ಮತ್ತು ಮೋಟಾರು ವಾಹನ ಕಾಯ್ದೆಯ ಇತರ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾರು ಉತ್ತರ ಪ್ರದೇಶದ ನಂಬರ್ ಪ್ಲೇಟ್ ಹೊಂದಿದ್ದು, ಅವರು ಸಿಗ್ನಲ್ ಜಂಪ್ ಮಾಡಿದಾಗ, ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್ ಅವರನ್ನು ನಿಲ್ಲಿಸಲು ಹೇಳಿದರು ಮತ್ತು ವಿವರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಆಗ ಸಿಗ್ನಲ್ ಜಂಪ್ ಮಾಡಿ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ