ಮಾಂಸ ಕೊಡಲು ನಿರಾಕರಿಸಿದ್ದಕ್ಕೆ ಮಾಂಸದಂಗಡಿ ಎದುರು ಕೊಳೆತ ಶವ ಎಸೆದ ವ್ಯಕ್ತಿ

ಮಾಂಸದಂಗಡಿಯವರು ಮಾಂಸ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ಕೊಳೆತ ಶವವನ್ನು ಆತನ ಅಂಗಡಿ ಎದುರು ಎಸೆದು ಹೋಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕುಮಾರ್ ಎಂಬಾತ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದ, ಮಣಿಯರಸನ್ ನಡೆಸುತ್ತಿದ್ದ ಅಂಗಡಿಯಲ್ಲಿ ಕಾಯಂ ಗ್ರಾಹಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಕುಮಾರ್ ಅಂಗಡಿಗೆ ಹೋಗಿ ಮಾಂಸ ಕೇಳಿದ್ದ, ಆದರೆ ಮಣಿಯರಸನ್ ಆತನಿಗೆ ಮಾಂಸ ಕೊಡುವುದಿಲ್ಲ ಎಂದು ಹೇಳಿದ್ದರು.

ಮಾಂಸ ಕೊಡಲು ನಿರಾಕರಿಸಿದ್ದಕ್ಕೆ ಮಾಂಸದಂಗಡಿ ಎದುರು ಕೊಳೆತ ಶವ ಎಸೆದ ವ್ಯಕ್ತಿ
ಜನರು
Image Credit source: India Today

Updated on: Feb 10, 2025 | 8:54 AM

ಮಾಂಸ ಕೊಡಲು ನಿರಾಕರಿಸಿದ್ದಕ್ಕೆ ಮಾಂಸದ ಅಂಗಡಿ ಎದುರು ವ್ಯಕ್ತಿಯೊಬ್ಬ ಕೊಳೆತ ಶವವನ್ನು ಎಸೆದಿರುವ ಘಟನೆ ತಮಿಳುನಾಡಿನ ಪಳನಿ ಚೆಟ್ಟಿಪಟ್ಟಿಯಲ್ಲಿ ನಡೆದಿದೆ. ಮಾಂಸ ಕೊಟ್ಟಿಲ್ಲ ಎನ್ನುವ ಕೋಪಕ್ಕೆ ಶವವನ್ನು ಅಂಗಡಿ ಎದುರು ಎಸೆದಿದ್ದಾರೆ.

ಕುಮಾರ್ ಎಂಬಾತ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದ, ಮಣಿಯರಸನ್ ನಡೆಸುತ್ತಿದ್ದ ಅಂಗಡಿಯಲ್ಲಿ ಕಾಯಂ ಗ್ರಾಹಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಕುಮಾರ್ ಅಂಗಡಿಗೆ ಹೋಗಿ ಮಾಂಸ ಕೇಳಿದ್ದ, ಆದರೆ ಮಣಿಯರಸನ್ ಆತನಿಗೆ ಮಾಂಸ ಕೊಡುವುದಿಲ್ಲ ಎಂದು ಹೇಳಿದ್ದರು. ಇದು ಸಣ್ಣ ಜಗಳವೆಂದು ಅಂಗಡಿಯವರು ಅಂದುಕೊಂಡಿದ್ದರು.

ಕುಮಾರ್ ಅಲ್ಲಿಂದ ಹೊರಟು ಹೋದ, ನಂತರ ಸ್ಮಶಾನಕ್ಕೆ ಹೋಗಿ ಅರ್ಧ ಕೊಳೆತ ಶವವನ್ನು ತೆಗೆದುಕೊಂಡು ಬಂದು, ಅಂಗಡಿಯ ಮುಂದೆ ಎಸೆದು ಪರಾರಿಯಾಗಿದ್ದಾನೆ. ಇದನ್ನು ನೋಡಿ ಅಂಗಿಯವರು ಹಾಗೂ ಗ್ರಾಹಕರು ಒಮ್ಮೆ ಬೆಚ್ಚಿಬಿದ್ದಾರೆ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅವರು ಬಂದು ತನಿಖೆ ನಡೆಸಿದಾಗ ಈತನೇ ಶವ ಎಸೆದಿರಬಹುದು ಎಂದು ಅಂದಾಜಿಸಲಾಯಿತು.

ಮತ್ತಷ್ಟು ಓದಿ:
ಕೊಲೆ ಮಾಡಿ ಹೆಣದ ಜೊತೆ ತ್ರಿಬಲ್ ರೈಡ್ ಹೋಗಿ ಹೆಣ ಎಸೆದು ಬಂದ ಆರೋಪಿಗಳ ಬಂಧನ

ಅಧಿಕಾರಿಗಳು ಆಗಮಿಸಿ, ಶವವನ್ನು ಹೊರತೆಗೆದು ಶವಾಗಾರ ವ್ಯಾನ್‌ನಲ್ಲಿ ಸ್ಮಶಾನಕ್ಕೆ ಸಾಗಿಸಿದರು. ಪೊಲೀಸರು ಕುಮಾರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ