ಪತ್ನಿಯನ್ನು ತಾನೆ ಕೊಂದು ಮನೆಗೆ ಬಾರದ ಕಳ್ಳರ ವಿರುದ್ಧ ಸುಳ್ಳು ಕೊಲೆ ಆರೋಪ ಹೊರಿಸಿದ ವ್ಯಕ್ತಿ

ಪತ್ನಿಯನ್ನು ತಾನೇ ಕೊಲೆ ಮಾಡಿ ಯಾರದ್ದೋ ತಲೆಗೆ ಕಟ್ಟಲು ನೋಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿಗೆ ಬೇರೊಬ್ಬನ ಜತೆ ಅನೈತಿಕ ಸಂಬಂಧವಿದೆ ಎಂಬ ಅನುಮಾನದಿಂದ ಆಕೆಯನ್ನು ಕೊಲೆ ಮಾಡಿದ್ದ. ಮುಸುಕುಧಾರಿಗಳು ಬಂದು ತನ್ನ ಪತ್ನಿಗೆ ಕಿರುಕುಳ ನೀಡಿ ಕೊಂದಿದ್ದಾರೆ ಎಂದು ಪತಿ ಇನಾಯತ್ ಪೊಲೀಸರಿಗೆ ದೂರು ನೀಡಿದ್ದ. ಆದರೂ ವಿಚಾರಣೆ ಸಮಯದಲ್ಲಿ ಆತ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಪತ್ನಿಯನ್ನು ತಾನೆ ಕೊಂದು ಮನೆಗೆ ಬಾರದ ಕಳ್ಳರ ವಿರುದ್ಧ ಸುಳ್ಳು ಕೊಲೆ ಆರೋಪ ಹೊರಿಸಿದ ವ್ಯಕ್ತಿ
ಕ್ರೈಂ

Updated on: Jan 30, 2025 | 10:18 AM

ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿ ವ್ಯಕ್ತಿಯೊಬ್ಬ ಪತ್ನಿಯನ್ನು ತಾನೇ ಹತ್ಯೆ ಮಾಡಿ, ಮನೆಗೆ ಬಾರದ ಕಳ್ಳರ ವಿರುದ್ಧ ಕೊಲೆ ಆರೋಪಹೊರಿಸಿದ್ದಾನೆ. ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಆತನಿಗೆ ಬಂದೂಕು ನೀಡಿದ ವ್ಯಕ್ತಿ ಹಾಗೂ ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಹರ್ಯಾಣ ಹಾಜಿಪುರದ ಗೌಹೆಟಾ ಗ್ರಾಮದಲ್ಲಿ ಘಟನೆ ನಡೆದಿದೆ.

ಮುಸುಕುಧಾರಿಗಳು ಬಂದು ತನ್ನ ಪತ್ನಿಗೆ ಕಿರುಕುಳ ನೀಡಿ ಕೊಂದಿದ್ದಾರೆ ಎಂದು ಪತಿ ಇನಾಯತ್ ಪೊಲೀಸರಿಗೆ ದೂರು ನೀಡಿದ್ದ. ಆದರೂ ವಿಚಾರಣೆ ಸಮಯದಲ್ಲಿ ಆತ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಎನ್‌ಕೌಂಟರ್ ಬಳಿಕ ಇನಾಯತ್‌ಗೆ ಕಂಟ್ರಿಮೇಡ್ ಪಿಸ್ತೂಲ್ ನೀಡಿದ್ದ ಶಕೀರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತೀಕಾರದ ಗುಂಡಿನ ದಾಳಿಯಲ್ಲಿ ಶಾಕಿರ್ ಅವರ ಕಾಲಿಗೆ ಗುಂಡು ತಗುಲಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ತನಿಖೆಯ ಸಮಯದಲ್ಲಿ, ಕೊಲೆಯ ಪ್ರಮುಖ ಆರೋಪಿ ಮಹಿಳೆಯ ಪತಿ ಇನಾಯತ್ ಎಂದು ತಿಳಿದುಬಂದಿದೆ.

ಮತ್ತಷ್ಟು ಓದಿ: ವಿಜಯಪುರದಲ್ಲಿ ಹಾಡಹಗಲೇ ಗುಂಡಿನ ದಾಳಿ: ಕೊಲೆ ಹಿಂದೆ ಯುವತಿಯ ಕರಿನೆರಳು?

ಸುಳ್ಳು ಕತೆ ಕಟ್ಟಿದ್ದಾನೆ, ದುಷ್ಕರ್ಮಿಗಳು ನಮ್ಮನ್ನು ಲೂಟಿ ಮಾಡಿದ್ದಾರೆ ಆಕೆಗೆ ಕಿರುಕುಳ ನೀಡಿದ್ದರು. ಅವರ ವಿರುದ್ಧ ಪ್ರತಿಭಟಿಸಿದಾಗ ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು ಎಂದು ನುಹ್ ಪೊಲೀಸರಿಗೆ ತಿಳಿಸಿದ್ದ.

ಶಕೀರ್ ಮೋಟಾರ್ ಸೈಕಲ್ ನಲ್ಲಿ ತಿರವಾಡ ಕಡೆಗೆ ಹೋಗುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆತ ಪೊಲೀಸರನ್ನು ಕಂಡಾಗ ಓಡಿಹೋಗಲು ಯತ್ನಿಸಿದ್ದ, ಪೊಲೀಸರು ಗುಂಡು ಹಾರಿಸಿದ್ದಾರೆ ಆತ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಆ ಸಮಯದಲ್ಲಿ ಶಕೀರ್​ ಕಾಲಿಗೆ ಗುಂಡು ತಗುಲಿದೆ. ​

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:18 am, Thu, 30 January 25