ಆಂಧ್ರಪ್ರದೇಶ: ಜನನಿಬಿಡ ರಸ್ತೆಯಲ್ಲಿ ಪತ್ನಿಯನ್ನು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ ಪತಿ

|

Updated on: Mar 05, 2024 | 7:58 AM

ಪತಿಯೊಬ್ಬ ಜನನಿಬಿಡ ಪ್ರದೇಶದಲ್ಲಿ ಪತ್ನಿಯನ್ನು ಕೊಂದು ಆಕೆಯ ತಾಯಿಯ ಮೇಲೂ ಹಲ್ಲೆ ನಡೆಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆತನನ್ನು ರಂಗಸ್ವಾಮಿ ಎಂದು ಗುರುತಿಸಲಾಗಿದ್ದು, ಪೊಲೀಸರು ವಶಕ್ಕೆ ಡಪೆದಿದ್ದಾರೆ, ಕೊಲೆಗೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.

ಆಂಧ್ರಪ್ರದೇಶ: ಜನನಿಬಿಡ ರಸ್ತೆಯಲ್ಲಿ ಪತ್ನಿಯನ್ನು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ ಪತಿ
ಆಂಧ್ರಪ್ರದೇಶ
Image Credit source: NDTV
Follow us on

ಆಂಧ್ರಪ್ರದೇಶದ ನಂದ್ಯಾಲ್‌ನ ಜನನಿಬಿಡ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಬರ್ಬರವಾಗಿ ಕೊಂದು, ಅತ್ತೆಯನ್ನು ಗಾಯಗೊಳಿಸಿದ್ದಾನೆ. ರಂಗಸ್ವಾಮಿ ಎಂಬಾತ ತನ್ನ ಪತ್ನಿ ಕುಮಾರಿ ಮತ್ತು ಆಕೆಯ ತಾಯಿಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ.

ಅಲ್ಲೇ ಇದ್ದವರೊಬ್ಬರು ರೆಕಾರ್ಡ್​ ಮಾಡಿದ್ದ ವಿಡಿಯೋದಲ್ಲಿ ರಸ್ತೆಯ ಬದಿಯ ಅಂಗಡಿಗಳ ಮಧ್ಯೆ ನೆಲದ ಮೇಲೆ ಮಹಿಳೆಯ ರಕ್ತಸಿಕ್ತವಾದ ದೇಹ ಕಾಣುತ್ತಿತ್ತು. ರಂಗಸ್ವಾಮಿ ನಿರ್ದಯಿಯಾಗಿ ಆಕೆಯ ಮೇಲೆ ಹಲ್ಲೆ ನಡೆಸುವುದನ್ನು ಕಾಣಬಹುದು.
ವ್ಯಕ್ತಿಯ ಪತ್ನಿ ಸಾವನ್ನಪ್ಪಿದ್ದು, ಆಕೆಯ ತಾಯಿಗೆ ತೀವ್ರ ಗಾಯಗಳಾಗಿವೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ರಂಗಸ್ವಾಮಿಯನ್ನು ಬಂಧಿಸಿದ್ದಾರೆ. ನಂತರ ಅವರ ಅತ್ತೆಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು.

ರಂಗಸ್ವಾಮಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಕ್ರೂರ ದಾಳಿಗೆ ಕಾರಣವೇನು ಎಂಬುದು ಪೊಲೀಸರಿಗೆ ಇನ್ನೂ ತಿಳಿದುಬಂದಿಲ್ಲ.

ಪತ್ನಿ ಕೊಂದು 3 ದಿನಗಳ ಕಾಲ ಶವದ ಜತೆಯಲ್ಲೇ ಇದ್ದ ಪತಿ
ಕೋಪದಲ್ಲಿ ಪತ್ನಿಯನ್ನು ಕೊಂದು 3 ದಿನಗಳ ಕಾಲ ಶವದ ಜತೆಯೆಲ್ಲೇ ಇದ್ದ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಗಾಜಿಯಾಬಾದ್​ನಲ್ಲಿ ನಡೆದಿದೆ. ಫೆಬ್ರವರಿ 27ರಂದು ಘಟನೆ ನಡೆದಿದ್ದು, ಮಾರ್ಚ್​ 1ರಂದು ಬೆಳಕಿಗೆ ಬಂದಿದೆ, ಮನೆಯಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಅಕ್ಕಪಕ್ಕದ ಮನೆಯವರು ಪೊಲೀಸರು ಮಾಹಿತಿ ನೀಡಿದ್ದರು.

ಮತ್ತಷ್ಟು ಓದಿ: ಬೆಂಗಳೂರಿನಲ್ಲೊಂದು ಅಮಾನುಷ ಕೃತ್ಯ, ಹೆತ್ತ ತಾಯಿಯಿಂದಲೇ ಮಗುವಿನ ಮೇಲೆ ಹಲ್ಲೆ

ಬಳಿಕ ಪೊಲೀಸರು ಮನೆಗೆ ಬಂದು ವಿಚಾರಣೆ ನಡೆಸಿದಾಗ ಕೋಣೆಯಲ್ಲಿ ಶವ ಪತ್ತೆಯಾಗಿತ್ತು. ಆರೋಪಿ ಭರತ್​ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಭರತ್ ಪತಿ ಜತೆ ಜಗಳವಾಡಿದ್ದ ಕೋಪದಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ, ಭರತ್ ಮೂರು ದಿನಗಳ ಕಾಲ ಶವದೊಂದಿಗೆ ಮನೆಯಲ್ಲಿಯೇ ಇದ್ದ. ಬಳಿಕ ಪತ್ನಿ ಸುನಿತಾಳ ದೇಹವನ್ನು ಹಾಸಿಗೆಯ ಮೇಲೆ ಮಲಗಿಸಿ ಶುಕ್ರವಾರವಷ್ಟೇ ಕೆಲಸಕ್ಕೆಂದು ಕಚೇರಿಗೆ ಹೋಗಿದ್ದ. ಶನಿವಾರ ಅಕ್ಕಪಕ್ಕದ ಮನೆಯವರು ಈ ಮನೆಯಿಂದ ವಾಸನೆ ಬರುತ್ತಿರುವುದನ್ನು ಪತ್ತೆಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸುನಿತಾ ಅವರ ದೇಹವು ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ವ್ಯವಸ್ಥೆ ಮಾಡಿದರು. ಎರಡೂವರೆ ವರ್ಷಗಳ ಹಿಂದೆ ಅಧಿಕೃತವಾಗಿ ಮದುವೆಯಾಗುವ ಮೊದಲು ಇಬ್ಬರಿಗೂ ಬೇರೊಂದು ಮದುವೆಯಾಗಿತ್ತು. ಭರತ್ ತನ್ನ ಮಾಜಿ ಪತ್ನಿಗೆ ನಿರಂತರ ಆರ್ಥಿಕ ಬೆಂಬಲ ನೀಡಿದ್ದರಿಂದ ಅವರ ಸಂಬಂಧದಲ್ಲಿ ತೊಡಕುಗಳು ಉದ್ಭವಿಸಿದವು, ಇದು ಅವನ ಮತ್ತು ಸುನೀತಾ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಯಿತು. ಫೆಬ್ರವರಿ 27 ರಂದು ನಡೆದ ಮಾರಣಾಂತಿಕ ಘರ್ಷಣೆ ಮಹಿಳೆಯ ಕೊಲೆಯಲ್ಲಿ ಅಂತ್ಯಗೊಂಡಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ