AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಟ್ಟಾ ಇಲ್ಲಿ ಮೀನಿದೆ ನೋಡು ಎಂದು ಕರೆದು ಕಾಲುವೆಗೆ ತಳ್ಳಿ ತಂದೆಯಿಂದಲೇ ಮಗಳ ಹತ್ಯೆ

ಮಗಳಿಗೆ ಮೀನು ತೋರಿಸುವುದಾಗಿ ಕರೆದೊಯ್ದು, ಕಾಲುವೆಗೆ ತಳ್ಳಿ ತಂದೆಯೊಬ್ಬ ಕೊಲೆ ಮಾಡಿರುವ ಘಟನೆ ಗುಜರಾತ್​​ನಲ್ಲಿ ನಡೆದಿದೆ. ಬಾಲಕಿ ಜಾರಿ ಬಿದ್ದಿಲ್ಲ, ಬದಲಿಗೆ ಪತಿಯೇ ನರ್ಮದಾ ಕಾಲುವೆಗೆ ತಳ್ಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್ 10ರಂದು ಖೇಡಾ ನಿವಾಸಿಗಳಾದ ವಿಜಯ್ ಸೋಲಂಕಿ ಮತ್ತು ಅಂಜನಾ ತಮ್ಮ ಹಿರಿಯ ಮಗಳು ಭೂಮಿಕಾ ಜತೆ ಅಲ್ಲೇ ಹತ್ತಿರದ ದೇವಸ್ಥಾನಕ್ಕೆ ಭೇಟಿ ನೀಡಲು ಹೊರಟಿದ್ದರು. ಮೂವರು ತಮ್ಮ ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಅಂಜನಾ ತನ್ನ ಹೆತ್ತವರನ್ನು ಭೇಟಿಯಾಗಬೇಕೆಂದಿದ್ದರು. ಅದಕ್ಕೆ ವಿಜಯ್ ಜಗಳ ಆರಂಭಿಸಿದ್ದ. ನನಗೆ ಗಂಡು ಮಗು ಬೇಕಿತ್ತು, ಆದರೆ ನೀನು ಹೆಣ್ಣುಮಗುವನ್ನು ಹೆತ್ತಿದ್ದೀಯಾ ಎಂದು ಕೂಗಾಡಲು ಶುರು ಮಾಡಿದ್ದ.

ಪುಟ್ಟಾ ಇಲ್ಲಿ ಮೀನಿದೆ ನೋಡು ಎಂದು ಕರೆದು ಕಾಲುವೆಗೆ ತಳ್ಳಿ ತಂದೆಯಿಂದಲೇ ಮಗಳ ಹತ್ಯೆ
ಕೊಲೆ Image Credit source: NDTV
ನಯನಾ ರಾಜೀವ್
|

Updated on:Jul 16, 2025 | 12:07 PM

Share

ಗುಜರಾತ್, ಜುಲೈ 16: ಪುಟ್ಟಾ ಇಲ್ನೋಡು ಮೀನಿದೆ ಎಂದು ಮಗಳನ್ನು ಕರೆದು ಕಾಲುವೆಗೆ ತಳ್ಳಿ ತಂದೆಯೊಬ್ಬ ಕೊಲೆ(Murder) ಮಾಡಿರುವ ಹೃದಯವಿದ್ರಾವಕ ಘಟನೆ ಗುಜರಾತ್​​ನಲ್ಲಿ ನಡೆದಿದೆ. ಮೊದಲು ಇದು ಆಕಸ್ಮಿಕ ಸಾವೆಂದು ಎಲ್ಲರೂ ಭಾವಿಸಿದ್ದರು. ಆದರೆ ಬಾಲಕಿಯ ತಾಯಿ ಅಂಜನಾ ಸೋಲಂಕಿ ಬೇರೆಯದನ್ನೇ ಹೇಳಿದ್ದಾರೆ, ತನ್ನ ಗಂಡನೇ ತನ್ನ 7 ವರ್ಷದ ಮಗುವನ್ನು ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ.

ಬಾಲಕಿ ಜಾರಿ ಬಿದ್ದಿಲ್ಲ, ಬದಲಿಗೆ ಪತಿಯೇ ನರ್ಮದಾ ಕಾಲುವೆಗೆ ತಳ್ಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್ 10ರಂದು ಖೇಡಾ ನಿವಾಸಿಗಳಾದ ವಿಜಯ್ ಸೋಲಂಕಿ ಮತ್ತು ಅಂಜನಾ ತಮ್ಮ ಹಿರಿಯ ಮಗಳು ಭೂಮಿಕಾ ಜತೆ ಅಲ್ಲೇ ಹತ್ತಿರದ ದೇವಸ್ಥಾನಕ್ಕೆ ಭೇಟಿ ನೀಡಲು ಹೊರಟಿದ್ದರು. ಮೂವರು ತಮ್ಮ ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಅಂಜನಾ ತನ್ನ ಹೆತ್ತವರನ್ನು ಭೇಟಿಯಾಗಬೇಕೆಂದಿದ್ದರು. ಅದಕ್ಕೆ ವಿಜಯ್ ಜಗಳ ಆರಂಭಿಸಿದ್ದ. ನನಗೆ ಗಂಡು ಮಗು ಬೇಕಿತ್ತು, ಆದರೆ ನೀನು ಹೆಣ್ಣುಮಗುವನ್ನು ಹೆತ್ತಿದ್ದೀಯಾ ಎಂದು ಕೂಗಾಡಲು ಶುರು ಮಾಡಿದ್ದ ಎಂದು ಅಂಜನಾ ತಿಳಿಸಿದ್ದಾರೆ.

ಕೆಲವು ನಿಮಿಷಗಳ ನಂತರ ಅಂದರೆ ರಾತ್ರಿ 8 ಗಂಟೆ ಸುಮಾರಿಗೆ ವ್ಯಕ್ತಿ ಕಪದ್ವಾಂಜ್ ವಾಘಾವತ್ ಸೇತುವೆಯ ಮೇಲೆ ಬೈಕ್ ನಿಲ್ಲಿಸಿ ಭೂಮಿಕಾಳನ್ನು ವೇಗವಾಗಿ ಹರಿಯುವ ನರ್ಮದಾ ಕಾಲುವೆಗೆ ತಳ್ಳಿದ್ದಾನೆ. ಘಟನೆಯನ್ನು ಯಾರ ಬಳಿಯಾದರೂ ಹೇಳಿದರೆ ವಿಚ್ಛೇದನ ಕೊಡುವುದಾಗಿ ಎಚ್ಚರಿಕೆ ನೀಡಿದ್ದ. ಅಂಜನಾ ಹೇಗೋ ದುಃಖವನ್ನು ಸಹಿಸಿಕೊಂಡಿದ್ದರು.

ಮತ್ತಷ್ಟು ಓದಿ: Shocking News: ಅಮ್ಮ ಕ್ಷಮಿಸಿಬಿಡು; ತಾಯಿಯನ್ನು ಕೊಂದು ಇನ್​ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿದ ಮಗ

ಜೂನ್ 10ರಂದು ಏನಾಗಿತ್ತು?

ಖೇಡಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಗಾಧಿಯಾ ಪ್ರಕಾರ, ಮೀನುಗಳನ್ನು ನೋಡಲು ಕಾಲುವೆ ಬಳಿ ನಿಂತಿದ್ದಾಗ ಭೂಮಿಕಾ ಜಾರಿ ಬಿದ್ದು ಸಾವನ್ನಪ್ಪಿದ್ದಳು ಎಂದು ಮೊದಲು ವರದಿ ಮಾಡಲಾಗಿತ್ತು. ಪೊಲೀಸರಿಗೆ ಆಕೆಯ ಚಪ್ಪಲಿ ಹಾಗೂ ಮೃತದೇಹ ಸಿಕ್ಕಿತ್ತು. ಆಕಸ್ಮಿಕ ಸಾವು ಎಂದೇ ಪೊಲೀಸರು ಅಂದುಕೊಂಡಿದ್ದರು. ನನ್ನ ಪತಿ ನನಗೆ ತಿಳಿಯದಂತೆ ಭೂಮಿಕಾಳನ್ನು ಕಾಲುವೆಯ ದಡದಲ್ಲಿ ನಿಲ್ಲಿಸಿದರು. ಮೀನುಗಳನ್ನು ತೋರಿಸುತ್ತಿರುವುದಾಗಿ ಹೇಳಿದ ಅವರು, ಆದರೆ ನೇರವಾಗಿ ಕಾಲುವೆಗೆ ತಳ್ಳಿದರು. ನನಗೆ ಏನೂ ಅರ್ಥವಾಗುವ ಮೊದಲೇ ಭೂಮಿಕಾ ಕಾಲುವೆಗೆ ಬಿದ್ದಳು ಮತ್ತು ನಾನು ಅಸಹಾಯಕಳಾಗಿ ನಿಂತಿದ್ದೆ ಎಂದು ಅಂಜನಾ ಅಳಲು ತೋಡಿಕೊಂಡಿದ್ದಾರೆ.

ವಿಜಯ್ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ, ಗಂಡು ಮಗು ಇಲ್ಲ ಎನ್ನುವ ಕೋಪಕ್ಕೆ ಕೃತ್ಯವೆಸಗಿದ್ದಾನೆ. ಎರಡನೇ ಮಗುವಿಗೆ ಜನ್ಮ ನೀಡಿದಾಗಿನಿಂದ ಗಂಡ ನಿರಂತರ ಕಿರುಕುಳ ಕೊಡುತ್ತಿದ್ದಾನೆ ಎಂದು ಅಂಜನಾ ಆರೋಪಿಸಿದ್ದಾರೆ. ವಿಜಯ್​​ನನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:05 pm, Wed, 16 July 25

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್