ನೆಗಡಿ ಎಂದು 8 ತಿಂಗಳ ಮಗುವಿಗೆ ವಿಕ್ಸ್, ಕರ್ಪೂರ ಹಚ್ಚಿದ ಪೋಷಕರು, ಶಿಶು ಸಾವು
ಮಗುವಿಗೆ ನೆಗಡಿ(Cold)ಯಾಗಿದೆ ಎಂದು ಪೋಷಕರು ವಿಕ್ಸ್ ಹಚ್ಚಿದ ಪರಿಣಾಮ 8 ತಿಂಗಳ ಶಿಶು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ಅಬಿರಾಮಪುರಂ ಪ್ರದೇಶದಲ್ಲಿ ಘಟನೆ ನಡೆದಿದೆ. ಮಗುವಿಗೆ ನೆಗಡಿ ಹಾಗೂ ಕೆಮ್ಮಿತ್ತು, ಪೋಷಕರು ಮೂಗಿಗೆ ಹಾಗೂ ಗಂಟಲಿಗೆ ವಿಕ್ಸ್ ಹಚ್ಚಿದ್ದಾರೆ ಇದರಿಂದ ಉಸಿರಾಟ ಸಮಸ್ಯೆಯುಂಟಾಗಿ ಮಗು ಸಾವನ್ನಪ್ಪಿದೆ. ಅಬಿರಾಮಪುರಂ ನಿವಾಸಿ ರಾಧಾಕೃಷ್ಣನ್ ಪುರಂ ದೇವನಾಥನ್ ಅವರಿಗೆ 8 ತಿಂಗಳ ಹೆಣ್ಣು ಮಗು ಇತ್ತು. ಕಳೆದ ಕೆಲವು ದಿನಗಳಿಂದ ಮಗು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿತ್ತು ಎಂದು ವರದಿಯಾಗಿದೆ.

ಚೆನ್ನೈ, ಜುಲೈ 16: ಮಗುವಿಗೆ ನೆಗಡಿ(Cold)ಯಾಗಿದೆ ಎಂದು ಪೋಷಕರು ವಿಕ್ಸ್ ಹಚ್ಚಿದ ಪರಿಣಾಮ 8 ತಿಂಗಳ ಶಿಶು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ಅಬಿರಾಮಪುರಂ ಪ್ರದೇಶದಲ್ಲಿ ಘಟನೆ ನಡೆದಿದೆ. ಮಗುವಿಗೆ ನೆಗಡಿ ಹಾಗೂ ಕೆಮ್ಮಿತ್ತು, ಪೋಷಕರು ಮೂಗಿಗೆ ಹಾಗೂ ಗಂಟಲಿಗೆ ವಿಕ್ಸ್ ಹಚ್ಚಿದ್ದಾರೆ ಇದರಿಂದ ಉಸಿರಾಟ ಸಮಸ್ಯೆಯುಂಟಾಗಿ ಮಗು ಸಾವನ್ನಪ್ಪಿದೆ.
ಅಬಿರಾಮಪುರಂ ನಿವಾಸಿ ರಾಧಾಕೃಷ್ಣನ್ ಪುರಂ ದೇವನಾಥನ್ ಅವರಿಗೆ 8 ತಿಂಗಳ ಹೆಣ್ಣು ಮಗು ಇತ್ತು. ಕಳೆದ ಕೆಲವು ದಿನಗಳಿಂದ ಮಗು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿತ್ತು ಎಂದು ವರದಿಯಾಗಿದೆ. ಈ ಪರಿಸ್ಥಿತಿಯಲ್ಲಿ, ಜುಲೈ 13 ರ ಸಂಜೆ, ದೇವನಾಥನ್ ಮತ್ತು ಅವರ ಕುಟುಂಬ ಸದಸ್ಯರು ಮಗುವಿನ ಮೂಗಿಗೆ ಶೀತವನ್ನು ಕಡಿಮೆ ಮಾಡಲು ವಿಕ್ಸ್ ಮತ್ತು ಕರ್ಪೂರವನ್ನು ಹಚ್ಚಿದ್ದರು.
ಇದಾದ ಸ್ವಲ್ಪ ಸಮಯದ ನಂತರ, ಮಗುವಿಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಮಗುವನ್ನು ತಕ್ಷಣ ಎಗ್ಮೋರ್ ಸರ್ಕಾರಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಕೂಡಲೇ ಚಿಕಿತ್ಸೆ ನೀಡಲಾಯಿತಾದರೂ ಬದುಕುಳಿಯಲಿಲ್ಲ. ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮಗು ಸಾವನ್ನಪ್ಪಿದೆ.
ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಇಲಿ ಜ್ವರದ ಟೆನ್ಷನ್: ಡೆಂಘಿ, ಚಿಕುನ್ ಗುನ್ಯಾ ನಡುವೆ ಮತ್ತೊಂದು ಆತಂಕ
ಮಗು ಶೀತದಿಂದ ಸಾವನ್ನಪ್ಪಿದೆಯೇ ಅಥವಾ ಮೂಗಿಗೆ ಕರ್ಪೂರ ಬೆರೆಸಿದ ವಿಕ್ಸ್ ಹಚ್ಚಿದ ನಂತರ ಉಸಿರಾಟದ ತೊಂದರೆ ಉಂಟಾಗಿದೆಯೇ ಎಂಬ ಬಗ್ಗೆ ಅನುಮಾನಗಳಿವೆ. ಶವಪರೀಕ್ಷೆ ವರದಿಯ ನಂತರ ನಿಖರವಾದ ಕಾರಣ ತಿಳಿಯಲಿದೆ ಎಂದು ವೈದ್ಯಕೀಯ ಮತ್ತು ಪೊಲೀಸ್ ಮೂಲಗಳು ತಿಳಿಸಿವೆ.
ಅಭಿರಾಮಪುರಂ ಪೊಲೀಸರು ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅದೇ ಸಮಯದಲ್ಲಿ, ಮಕ್ಕಳಲ್ಲಿ ಶೀತ, ಜ್ವರ ಇತ್ಯಾದಿಗಳಿಗೆ ಮನೆಮದ್ದುಗಳನ್ನು, ವಿಶೇಷವಾಗಿ ಮಕ್ಕಳಿಗೆ ವಿಕ್ಸ್, ಕರ್ಪೂರದಂತಹ ಉತ್ಪನ್ನಗಳನ್ನು ಬಳಸುವ ಮೊದಲು, ವೈದ್ಯರನ್ನು ಸಂಪರ್ಕಿಸಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಕೆಲವು ಮನೆಮದ್ದುಗಳು ರೋಗಗಳನ್ನು ನಿವಾರಿಸಲು ಸಹಕಾರಿ, ಆದರೆ ಮಕ್ಕಳಿಗೆ ಕೊಡುವಾಗ ಸ್ವಲ್ಪ ಆಲೋಚನೆ ಮಾಡಲೇಬೇಕಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:14 pm, Wed, 16 July 25




