ಸತ್ತ ಮೇಲೆ ಶವಸಂಸ್ಕಾರ ನಡೆಸಲು ತನ್ನ ದೇಹವನ್ನು ಕುಟುಂಬದ ಸದಸ್ಯರಿಗೆ ನೀಡಬಾರದೆಂದು ದೆಹಲಿ ಹೈಕೋರ್ಟ್ ಮೊರೆಹೋದ ವ್ಯಕ್ತಿ!
ಮಗಳ ಲಾಲನೆ-ಪೋಷಣೆಯಲ್ಲಿ ಭಾಗಿಯಾಗುವ ಅವಕಾಶವನ್ನು ಪತ್ನಿ ಯಾವತ್ತೂ ತನಗೆ ನೀಡಲಿಲ್ಲ, ಅವಳ ಮದುವೆಗೂ ಆಹ್ವಾನಿಸದ ಮಟ್ಟಿಗೆ ತನ್ನನ್ನು ಕಡೆಗಾಣಿಸಲಾಯಿತು ಎಂದು ಬನ್ಸಲ್ ತಮ್ಮ ಮನವಿಯಲ್ಲಿ ವಿಜ್ಞಾಪಿಸಿಕೊಂಡಿದ್ದಾರೆ.
ನವ ದೆಹಲಿ: ಇದೊಂದು ವಿಚಿತ್ರ ಆದರೆ ಸತ್ಯ ಸಂಗತಿ ಮಾರಾಯ್ರೇ. 56-ವರ್ಷ-ವಯಸ್ಸಿನ ವ್ಯಕ್ತಿಯೊಬ್ಬರು ದೆಹಲಿ ಉಚ್ಚ ನ್ಯಾಯಾಲಯಲ್ಲಿ (Delhi high court) ಮನವಿಯೊಂದನ್ನು ಸಲ್ಲಿಸಿ, ತಾನು ಸತ್ತಮೇಲೆ ಅಂತ್ಯಸಂಸ್ಕಾರದ ವಿಧಿಗಳನ್ನು ಪೂರೈಸಲು ಕುಟುಂಬದ ಸದಸ್ಯರಿಗೆ ಅನುಮತಿ ನೀಡದೆ ತಾನು ಕಾಯಿಲೆಯಿಂದ ಬಳಲುತ್ತಿದ್ದಾಗ ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದ ಮತ್ತು ತಾನು ಮಗನಂತೆ ಕಾಣುವ ಯುವಕನೊಬ್ಬನಿಗೆ ಆ ಹಕ್ಕು ನೀಡಬೇಕೆಂದು ಕೋರಿದ್ದಾರೆ. ಹೃದ್ರೋಗದಿಂದ (cardiac disease) ಬಳಲುತ್ತಿರುವ ಕುಂಜ್ ಬಿಹಾರಿ ಬನ್ಸಲ್ (Kunj Bihari Bansal) ಹೆಸರಿನ ದೆಹಲಿ ನಿವಾಸಿ, ತಮ್ಮ ಪತ್ನಿ, ಮಗಳು ಮತ್ತು ಅಳಿಯನಿಗೆ ತನ್ನ ಶವಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಬಾರದೆಂದು ತಮ್ಮ ಮನವಿಯಲ್ಲಿ ಕೋರಿದ್ದಾರೆ.
ದೆಹಲಿ ಸರ್ಕಾರವು ರೂಪಿಸಿರುವ ನಿಯಮವೊಂದರ ಪ್ರಕಾರ ಮರಣಿಸಿದ ವ್ಯಕ್ತಿಯೊಬ್ಬನ ಅಂತಿಮ ಸಂಸ್ಕಾರಕ್ಕೆ ಸಂಬಂಧಿಸಿದಂತೆ ದೇಹವನ್ನು ಸಂಬಂಧಿಕರಿಗೆ ಮಾತ್ರ ನೀಡಬೇಕು. ಆದರೆ ಬನ್ಸಲ್ ಅವರು ಈ ಪ್ರಮಾಣಿತ ಕಾರ್ಯರೂಪಿ ವಿಧಾನದ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ನ (ಎಸ್ ಒ ಪಿ) 7.1 ಅನುಚ್ಛೇದವನ್ನೇ ಬನ್ಸಲ್ ಪ್ರಶ್ನಿಸಿರುವುದರಿಂದ ಅವರ ಮನವಿಯಲ್ಲಿನ ಸಾಧಕ ಬಾಧಕಗಳನ್ನು ಪರಿಶೀಲಿಸುವಂತೆ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬನ್ಸಾಲ್ ಅವರ ನಿಧನ ನಂತರ ಅಂತಿಮ ವಿಧಿವಿಧಾನಗಳ ‘ಅಸಂಭವನೀಯ ಘಟನೆ’ ಯಲ್ಲಿ ಕ್ರಿಶ್ ಶರ್ಮಾ ಅದನ್ನು ನಡೆಸಲು ಅನುವಾಗಲು ಎಸ್ ಒಪಿ ವ್ಯಾಖ್ಯಾನಿಸುವ ರೀತಿ ಮಾಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಕಕ್ಷಿದಾರರ ನಡುವೆ ಗಂಭೀರ ವಾಗ್ವಾದವಿದೆ ಎಂಬ ಅಂಶವನ್ನು ಗಮನಕ್ಕೆ ತಂದುಕೊಂಡಿರುವ ನ್ಯಾಯಾಲಯವು ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿದೆ.
ಮಗಳ ಲಾಲನೆ-ಪೋಷಣೆಯಲ್ಲಿ ಭಾಗಿಯಾಗುವ ಅವಕಾಶವನ್ನು ಪತ್ನಿ ಯಾವತ್ತೂ ತನಗೆ ನೀಡಲಿಲ್ಲ, ಅವಳ ಮದುವೆಗೂ ಆಹ್ವಾನಿಸದ ಮಟ್ಟಿಗೆ ತನ್ನನ್ನು ಕಡೆಗಾಣಿಸಲಾಯಿತು ಎಂದು ಬನ್ಸಲ್ ತಮ್ಮ ಮನವಿಯಲ್ಲಿ ವಿಜ್ಞಾಪಿಸಿಕೊಂಡಿದ್ದಾರೆ.
‘ಅರ್ಜಿದಾರರು… ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ದೊರಕುವ ಜೀವಿಸುವ, ಸಮರ್ಪವಾಗಿ ನಡೆಸಿಕೊಳ್ಳುವ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಜೊತೆಗೆ ಸಾವಿನ ನಂತರ ಮೃತ ದೇಹದ ಅಂತ್ಯಸಂಸ್ಕಾರ ನಡೆಸುವ ತಮಗಿಷ್ಟ ಬಂದವರಿಗೆ ನೀಡಲು ತನಗಿರುವ ಹಕ್ಕನ್ನು ಮಾನ್ಯ ಮಾಡುವಂತೆ ಅವರು ಕೋರುತ್ತಿದ್ದಾರೆ, ಎಂದು ನ್ಯಾಯಾಲಯ ಹೇಳಿದೆ.
Published On - 1:04 pm, Tue, 20 September 22