Hijab Ban ಹಿಜಾಬ್ ನಿಷೇಧ ಧರ್ಮ ನಿರಪೇಕ್ಷ ಆದೇಶ, ಶಾಲೆಗಳಲ್ಲಿ ಕೇಸರಿ ಶಾಲು ಅಥವಾ ಹಿಜಾಬ್​​ ಅನುಮತಿಸಿಲ್ಲ: ಸುಪ್ರೀಂನಲ್ಲಿ ಕರ್ನಾಟಕ ಸರ್ಕಾರ

ರಾಜ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ...

Hijab Ban ಹಿಜಾಬ್ ನಿಷೇಧ  ಧರ್ಮ ನಿರಪೇಕ್ಷ ಆದೇಶ, ಶಾಲೆಗಳಲ್ಲಿ ಕೇಸರಿ ಶಾಲು ಅಥವಾ ಹಿಜಾಬ್​​ ಅನುಮತಿಸಿಲ್ಲ: ಸುಪ್ರೀಂನಲ್ಲಿ ಕರ್ನಾಟಕ ಸರ್ಕಾರ
ಹಿಜಾಬ್ ವಿವಾದImage Credit source: Live Law
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 20, 2022 | 2:41 PM

ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠವು ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ (Hijab) ಧರಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಮಂಗಳವಾರ ವಿಚಾರಣೆ ನಡೆಸಿದೆ. 23 ಅರ್ಜಿಗಳನ್ನು ಅನ್ನು ಪೀಠದ ಮುಂದೆ ವಿಚಾರಣೆಗಾಗಿ ಇರಿಸಲಾಗಿದೆ. ಅವುಗಳಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವ ಹಕ್ಕನ್ನು ಕೋರಿ ಸುಪ್ರೀಂಕೋರ್ಟ್‌ಗೆ (Supreme Court) ನೇರವಾಗಿ ಸಲ್ಲಿಸಲಾದ ರಿಟ್ ಅರ್ಜಿಗಳಾಗಿವೆ. ಇನ್ನು ಕೆಲವು ವಿಶೇಷ ರಜಾಕಾಲದ ಅರ್ಜಿಗಳಾಗಿದ್ದು, ಮಾರ್ಚ್ 15 ರಂದು ಕರ್ನಾಟಕ ಹೈಕೋರ್ಟ್ ಹಿಜಾಬ್ ನಿಷೇಧವನ್ನು ಎತ್ತಿ ಹಿಡಿದ ತೀರ್ಪನ್ನು ಪ್ರಶ್ನಿಸಿವೆ.ಕರ್ನಾಟಕ ಹಿಜಾಬ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಪುನರಾರಂಭಿಸಿದೆ. ರಾಜ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ ಧರ್ಮದ ಅವಿಭಾಜ್ಯ ಮತ್ತು ಅಗತ್ಯ ಭಾಗವಾಗಿರುವ ಧಾರ್ಮಿಕ ಆಚರಣೆಯೊಂದಿಗೆ ಆರ್ಟಿಕಲ್ 25 ಮತ್ತು 26 ರ ರಕ್ಷಣೆಯಾಗಿದೆ ಎಂದು ಸರ್ಕಾರ ವಾದಿಸಿದೆ. ಆಚರಣೆಯು ಧಾರ್ಮಿಕ ಆಚರಣೆಯಾಗಿರಬಹುದು ಆದರೆ ಅಗತ್ಯವಾಗಿರುವುದಿಲ್ಲ. ಅದು ಆ ಧರ್ಮದ ಆಚರಣೆಯ ಅವಿಭಾಜ್ಯ ಅಂಗವಾಗಿದೆ. ಎರಡನೆಯದು ಸಂವಿಧಾನದಿಂದ ರಕ್ಷಿಸಲ್ಪಟ್ಟಿಲ್ಲ, ಅವರು ಹೇಳಿದ್ದು ಇದನ್ನೇ, ನಾನು ಅದನ್ನೇ ಹೇಳಿದ್ದು ಎಂದಿದ್ದಾರೆ.

ಸುಪ್ರೀಂಕೋರ್ಟ್​​ನಲ್ಲಿ ವಾದಿಸಿದ ದವೆ  ಎಲ್ಲರೂ ಸರ್ವಶಕ್ತನನ್ನು ವಿಭಿನ್ನ ರೀತಿಯಲ್ಲಿ ನೋಡುತ್ತಾರೆ. ಶಬರಿಮಲೆಗೆ ಹೋಗುವವರು ಕಪ್ಪು ಬಟ್ಟೆ ಧರಿಸುತ್ತಾರೆ, ಅದು ಸಂಪ್ರದಾಯ. ಧಾರ್ಮಿಕ ಸ್ವಾತಂತ್ರ್ಯವನ್ನು ವೈಯಕ್ತಿಕ ರೀತಿಯಲ್ಲಿ ಅನುಭವಿಸಲು ಪ್ರತಿಯೊಬ್ಬರಿಗೂ ಹಕ್ಕು ಇದೆ ಎಂದ ದವೆ  ಶಬರಿಮಲೆ ತೀರ್ಪು ಮತ್ತು ಹಿಜಾಬ್ ಪ್ರಕರಣದ ನಡುವೆ ವ್ಯತ್ಯಾಸವನ್ನು ತೋರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಗುಪ್ತಾ ಅಲ್ಲಿ ಅರ್ಜಿದಾರರಿಗೆ ದೇವಸ್ಥಾನ ಪ್ರವೇಶಿಸುವ ಮೂಲಭೂತ ಹಕ್ಕು ಇರಲಿಲ್ಲ ಎಂದಿದ್ದಾರೆ. ಮೈ ಲಾರ್ಡ್ಸ್, ಈಗ ಎಲ್ಲರೂ ದೇವಸ್ಥಾನಗಳನ್ನು ಪ್ರವೇಶಿಸಬಹುದು ಎಂದಿದ್ದಾರೆ ದವೆ.

ಸಮವಸ್ತ್ರವು ಶ್ರೇಷ್ಠ ಮಟ್ಟದ್ದು. ಇದು ವಿದ್ಯಾರ್ಥಿಯು ಶ್ರೀಮಂತ ಅಥವಾ ಬಡವ ಎನ್ನುವುದನ್ನು ಲೆಕ್ಕಿಸದೆ ಒಂದೇ ರೀತಿಯ ಬಟ್ಟೆಯನ್ನು ಧರಿಸುವಂತೆ ಮಾಡುತ್ತದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ಆಗ ದವೆ ಅವರು  ಹಿಜಾಬ್ ಘನತೆಯ ಸಂಕೇತವಾಗಿದೆ.ಹಿಂದೂ ಮಹಿಳೆ ಸೀರೆ ಸೆರಗನ್ನು  ತಲೆ ಮೇಲೆ ಹೊದ್ದಾಗ ಕಾಣುವ ಘನತೆಯಂತೆಯೇ ಮುಸ್ಲಿಂ ಮಹಿಳೆ ಹಿಜಾಬ್ ಧರಿಸಿದಾಗ ಕಾಣುತ್ತದೆ ಎಂದಿದ್ದಾರೆ.

ಕರ್ನಾಟಕ ಸರ್ಕಾರ ಪರ ವಾದ ಮಂಡಿಸಿದ ತುಷಾರ್ ಮೆಹ್ತಾ ಹೇಳಿದ್ದೇನು?

ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 2013 ಮಾರ್ಚ್ 29ರಂದು ಉಡುಪಿಯ ಪಿಯು ಕಾಲೇಜು ಸಮವಸ್ತ್ರ ನಿಗದಿ ಮಾಡುವುದಾಗಿ ನಿರ್ಣಯ ಅಂಗೀಕರಿಸಿತ್ತು. ಸಮವಸ್ತ್ರವು ಹಿಜಾಬ್ ಅನ್ನು ಒಳಗೊಂಡಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮವಸ್ತ್ರ ಧರಿಸಿದ್ದರು. 2021 ರಲ್ಲಿ ಪಿಯು ಕಾಲೇಜಿಗೆ ಪ್ರವೇಶ ಪಡೆದ ಅರ್ಜಿದಾರರು ಆರಂಭದಲ್ಲಿ ಏಕರೂಪದ ನಿಯಮಗಳನ್ನು ಪಾಲಿಸಿದ್ದಾರೆ ಎಂದು ಎಸ್‌ಜಿ ತುಷಾರ್ ಮೆಹ್ತಾ ಹೇಳಿದರು. 2022ರಲ್ಲಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಸಂಘಟನೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಚಳುವಳಿ ಪ್ರಾರಂಭವಾಯಿತು. ಸಾಮಾಜಿಕ ಮಾಧ್ಯಮ ಚಳುವಳಿಯು ಜನರ ಧಾರ್ಮಿಕ ಭಾವನೆಗಳ ಆಧಾರದ ಮೇಲೆ ಆಂದೋಲನವನ್ನು ಸೃಷ್ಟಿಸಲು ಬಳಸಲಾಗಿದೆ ಎಂದಿದ್ದಾರೆ ತುಷಾರ್ ಮೆಹ್ತಾ. ರಾಜ್ಯ ಸರ್ಕಾರಿ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿದ ವಿದ್ಯಾರ್ಥಿ ಅರ್ಜಿದಾರರು ತೀವ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಿಂದ ಪ್ರಭಾವಿತರಾಗಿದ್ದಾರೆ. ಹಿಜಾಬ್ ಧರಿಸಲು ಬಯಸುತ್ತೇವೆ ಎಂಬುದು ಕೆಲವು ಮಕ್ಕಳ ಸ್ವಯಂಪ್ರೇರಿತ ಕ್ರಿಯೆಯಲ್ಲ,ಅವರು ಯೋಜಿತ ಪಿತೂರಿಯ ಭಾಗವಾಗಿದ್ದಾರೆ. ಈ ಮಕ್ಕಳು ಪಿಎಫ್‌ಐ ಸಲಹೆಯಂತೆ ವರ್ತಿಸುತ್ತಿದ್ದಾರೆ ಎಂದು ಕರ್ನಾಟಕ ಸರ್ಕಾರ ಪರ ವಾದಿಸಿದ ಮೆಹ್ತಾ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.

‘ಶಾಂತಿ, ಸೌಹಾರ್ದತೆ, ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಬಟ್ಟೆ’ ಧರಿಸದಂತೆ ವಿದ್ಯಾರ್ಥಿಗಳನ್ನು ನಿರ್ಬಂಧಿಸಿರುವ ರಾಜ್ಯ ಸರ್ಕಾರ ಫೆ.5ರಂದು ಅಧಿಸೂಚನೆ ಹೊರಡಿಸದಿದ್ದರೆ ಅದು ಕರ್ತವ್ಯಲೋಪವಾಗುತ್ತಿತ್ತು ಎಂದು ಎಸ್‌ಜಿ ತುಷಾರ್ ಮೆಹ್ತಾ ಹೇಳಿದ್ದಾರೆ.

ಶಾಲೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸುವ ಕರ್ನಾಟಕ ಸರ್ಕಾರದ ನಿರ್ಧಾರವು ಧರ್ಮನಿರಪೇಕ್ಷ ಆದೇಶವಾಗಿದೆ. ಶಾಲೆಗಳಲ್ಲಿ ಕೇಸರಿ ಶಾಲು ಅಥವಾ ಹಿಜಾಬ್ ಅನ್ನು ಅನುಮತಿಸುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಂಗಳವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದರು.

Published On - 1:37 pm, Tue, 20 September 22

ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ