ಮದುವೆ ಎಂಬುದು ಜೀವನದ ಅದ್ಭುತ ಕ್ಷಣ, ಆ ಕ್ಷಣಕ್ಕೆ ಎಲ್ಲರೂ ಸಾಕ್ಷಿಯಾಗಿ ಎಂದು ಕೇಳಲು ಲಗ್ನ ಪತ್ರಿಕೆ ಹಿಡಿದು ಹೋಗುತ್ತಿದ್ದಾಗ ಕಾರಿಗೆ ಬೆಂಕಿ ತಗುಲಿ ಯುವಕ ಸುಟ್ಟು ಕರಕಲಾಗಿರುವ ಘಟನೆ ದೆಹಲಿಯ ಗಾಜಿಪುರ ಪ್ರದೇಶದಲ್ಲಿ ನಡೆದಿದೆ. ದೆಹಲಿಯ ಗಾಜಿಪುರ ಪ್ರದೇಶದ ಬಾಬಾ ಬ್ಯಾಂಕ್ವೆಟ್ ಹಾಲ್ ಬಳಿ ಈ ಘಟನೆ ನಡೆದಿದೆ.
ವ್ಯಕ್ತಿ ಇದ್ದ ವ್ಯಾಗನ್ಆರ್ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಆತ ಕಾರಿನೊಳಗೆ ಉಸಿರು ಚೆಲ್ಲಿದ್ದಾನೆ. ಮೃತ ವ್ಯಕ್ತಿಯನ್ನು ಅನಿಲ್ ಎಂದು ಗುರುತಿಸಲಾಗಿದೆ ಗ್ರೇಟರ್ ನೋಯ್ಡಾದ ನಾವಡಾ ನಿವಾಸಿಯಾಗಿದ್ದು, ವರದಿಯ ಪ್ರಕಾರ ತನ್ನ ಮದುವೆಯ ಕಾರ್ಡ್‌ಗಳನ್ನು ವಿತರಿಸಲು ಹೊರಟಿದ್ದರು. ಫೆಬ್ರವರಿ 14 ರಂದು ಮದುವೆಯಾಗಬೇಕಿತ್ತು.
ಮಧ್ಯಾಹ್ನ ತನ್ನ ಮದುವೆಯ ಆಮಂತ್ರಣ ಪತ್ರಗಳನ್ನು ವಿತರಿಸಲು ಅವರು ಹೊರಟಿದ್ದರು, ತಡರಾತ್ರಿಯವರೆಗೆ ಹಿಂತಿರುಗದಿದ್ದಾಗ ಮನೆಯವರು ತುಂಬಾ ಬಾರಿ ಕರೆ ಮಾಡಿದ್ದರು. ಆದರೆ ಸ್ವಿಚ್ಡ್ ಆಫ್ ಬರ್ತಿತ್ತು. ರಾತ್ರಿ 11, 11.30ರ ನಡುವೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅನಿಲ್ ಅವರನ್ನು ಆಗಲೇ ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ಸಂತ್ರಸ್ತೆಯ ಹಿರಿಯ ಸಹೋದರ ಸುಮಿತ್ ಹೇಳಿದ್ದಾರೆ.
ಮತ್ತಷ್ಟು ಓದಿ: ಮದುವೆ ಹಿಂದಿನ ರಾತ್ರಿ ಡ್ಯಾನ್ಸ್ ಮಾಡುವಾಗ ಹೃದಯಾಘಾತದಿಂದ ಮದುಮಗ ಸಾವು!
ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಎಂದು ಅನಿಲ್ ಅವರ ಬಾವ ತಿಳಿಸಿದ್ದಾರೆ, ತಮ್ಮ ಸಹೋದರಿಯೊಂದಿಗೆ ಫೆಬ್ರವರಿಯಲ್ಲಿ ಮದುವೆಯಾಗಬೇಕಿತ್ತು, ನಿನ್ನೆ ರಾತ್ರಿ ತಡವಾಗಿ ಸಾವಿನ ವಿಚಾರ ತಿಳಿಯಿತು, ಆದರೆ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದರು.
ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ತನಿಖೆ ನಡೆಯುತ್ತಿದೆ. ಶುಕ್ರವಾರ, ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಗಾಜಿಪುರ ಬಳಿ ಕಾರಿಗೆ ಬೆಂಕಿ ಹೊತ್ತಿಕೊಂಡ ಇಂಥದ್ದೇ ಘಟನೆ ನಡೆದಿತ್ತು. ಆನ್‌ಲೈನ್‌ನಲ್ಲಿ ಹಂಚಿಕೊಂಡ ಘಟನೆಯ ದೃಶ್ಯಗಳು ಕಿಟಕಿಗಳಿಂದ ಜ್ವಾಲೆಗಳು ಸುರಿಯುವುದನ್ನುತೋರಿಸಿವೆ. ಅದೃಷ್ಟವಶಾತ್ ಬೆಂಕಿ ಹೊತ್ತಿಕೊಂಡಾಗ ಕಾರಿನೊಳಗೆ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಈ ತಿಂಗಳ ಆರಂಭದಲ್ಲಿ, ಹೈದರಾಬಾದ್‌ನಲ್ಲಿ ಬಚಾರಮ್‌ನಿಂದ ಘಟ್‌ಕೇಸಾಗೆ ಪ್ರಯಾಣಿಸುತ್ತಿದ್ದಾಗ ಅವರ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಇಬ್ಬರು ಸುಟ್ಟು ಕರಕಲಾಗಿದ್ದರು. ವರದಿಗಳ ಪ್ರಕಾರ, ಮೃತರಲ್ಲಿ ಒಬ್ಬ ಪುರುಷನಿದ್ದು, ಎರಡನೇ ದೇಹವು ಗುರುತಿಸಲಾಗದಷ್ಟು ಸುಟ್ಟುಹೋಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ