Andhra Pradesh: ಪತ್ನಿಯ ಶವವನ್ನು ಹೆಗಲಮೇಲೆ ಹೊತ್ತು ಕಿಲೋಮೀಟರ್ಗಟ್ಟಲೆ ನಡೆದ ವ್ಯಕ್ತಿ
ಪತ್ನಿಯ ಮೃತದೇಹವನ್ನು ಹೊತ್ತು ವ್ಯಕ್ತಿಯೊಬ್ಬ ಕಿಲೋಮೀಟರ್ಗಟ್ಟಲೆ ನಡೆದಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಒಡಿಶಾದ ಕೊರಾಪುಟ್ ಜಿಲ್ಲೆಯ 35 ವರ್ಷದ ವ್ಯಕ್ತಿಯೊಬ್ಬರು ಆಂಧ್ರಪ್ರದೇಶದ ಆಸ್ಪತ್ರೆಯಿಂದ ಹಿಂದಿರುಗುವಾಗ ಆಟೋದಲ್ಲಿ ಪತ್ನಿ ಮೃತಪಟ್ಟಿದ್ದು, ಬಳಿಕ ಹೆಗಲ ಮೇಲೆ ಹೊತ್ತು ನಡೆದಿದ್ದಾರೆ.
ಪತ್ನಿಯ ಮೃತದೇಹವನ್ನು ಹೊತ್ತು ವ್ಯಕ್ತಿಯೊಬ್ಬ ಕಿಲೋಮೀಟರ್ಗಟ್ಟಲೆ ನಡೆದಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಒಡಿಶಾದ ಕೊರಾಪುಟ್ ಜಿಲ್ಲೆಯ 35 ವರ್ಷದ ವ್ಯಕ್ತಿಯೊಬ್ಬರು ಆಂಧ್ರಪ್ರದೇಶದ ಆಸ್ಪತ್ರೆಯಿಂದ ಹಿಂದಿರುಗುವಾಗ ಆಟೋದಲ್ಲಿ ಪತ್ನಿ ಮೃತಪಟ್ಟಿದ್ದು, ಬಳಿಕ ಹೆಗಲ ಮೇಲೆ ಹೊತ್ತು ನಡೆದಿದ್ದಾರೆ. ಪೊಲೀಸರು ಇದನ್ನು ಗಮನಿಸಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಸಂಗಿವಲಸದಲ್ಲಿರುವ ತನ್ನ ಅಸ್ವಸ್ಥ ಪತ್ನಿಯನ್ನು ಪಾಂಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಅಲ್ಲಿನ ವೈದ್ಯರು ತಿಳಿಸಿದ್ದು, ಸುಮಾರು 100 ಕಿ.ಮೀ ದೂರದಲ್ಲಿರುವ ಮನೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
ಪಾಂಗಿ ಅವರು ತಮ್ಮ ಹಳ್ಳಿಗೆ ಮರಳಲು ಆಟೋ ರಿಕ್ಷಾವನ್ನು ಬಾಡಿಗೆಗೆ ಪಡೆದರು, ಆದರೆ ಪತ್ನಿ ಅವರು ವಿಜಯನಗರದ ಬಳಿ ಮಧ್ಯದಲ್ಲಿ ನಿಧನರಾದರು. ನಂತರ ಆಟೋ ಚಾಲಕ ಪ್ರಯಾಣ ಮುಂದುವರಿಸಲು ನಿರಾಕರಿಸಿ ಚೆಲ್ಲೂರು ರಿಂಗ್ ರೋಡ್ನಲ್ಲಿ ಅವರನ್ನು ಇಳಿಸಿದ್ದಾನೆ. ಬೇರೆ ದಾರಿ ಕಾಣದೆ ಪಾಂಗಿ ತನ್ನ ಹೆಂಡತಿಯ ಶವವನ್ನು ಹೆಗಲ ಮೇಲೆ ಹೊತ್ತು ಸುಮಾರು 80 ಕಿಲೋಮೀಟರ್ ದೂರದಲ್ಲಿದ್ದ ಮನೆಯ ಕಡೆಗೆ ನಡೆದಿದ್ದಾರೆ.
ಮತ್ತಷ್ಟು ಓದಿ: ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗು ಸಾವು ಪ್ರಕರಣ: ಸರ್ಕಾರದ ಪರಿಹಾರ ತಿರಸ್ಕರಿಸಿದ ಕುಟುಂಬಸ್ಥರು
ಆರಂಭದಲ್ಲಿ ಆಂಧ್ರಪ್ರದೇಶದ ಪೊಲೀಸರಿಗೆ ಭಾಷೆಯ ಸಮಸ್ಯೆಯಿಂದ ಪಾಂಗಿ ಏನು ಹೇಳುತ್ತಿದ್ದನೆಂದು ತಿಳಿದುಕೊಳ್ಳಲು ಕಷ್ಟಪಡುತ್ತಿದ್ದರು. ನಂತರ ಒಡಿಶಾ ಮೂಲದ ವ್ಯಕ್ತಿಯ ಭಾಷೆಯನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿ ಸಿಕ್ಕಿದ್ದಾರೆ. ಪೊಲೀಸ್ ಅಧಿಕಾರಿಗಳು, ಏನಾಯಿತು ಎಂಬುದನ್ನು ಖಚಿತಪಡಿಸಿಕೊಂಡ ನಂತರ, ಪಾಂಗಿ ಮತ್ತು ಅವರ ಪತ್ನಿಯ ಮೃತದೇಹಗಳನ್ನು ಅವರ ಗ್ರಾಮಕ್ಕೆ ಕೊಂಡೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು.
2016ರಲ್ಲಿ ಒಡಿಶಾದ ಭವಾನಿಪಟ್ನಾದಲ್ಲಿ ನಡೆದ ಘಟನೆಯನ್ನು ನೆನಪಿಸುವಂತಿದ್ದು, ಆಸ್ಪತ್ರೆಯೊಂದು ಶವಸಂಸ್ಕಾರವನ್ನು ನಿರಾಕರಿಸಿದ ಬಳಿಕ ಮತ್ತೊಬ್ಬ ವ್ಯಕ್ತಿ ದಾನಾ ಮಾಂಝಿ ತನ್ನ ಪತ್ನಿಯ ಶವವನ್ನು ಸುಮಾರು 12 ಕಿ.ಮೀ ವರೆಗೆ ತನ್ನ ಭುಜದ ಮೇಲೆ ಹೊತ್ತು ನಡೆದಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:27 am, Thu, 9 February 23