ಸ್ನೇಹಿತೆ ಮೇಲಾಗುತ್ತಿದ್ದ ಲೈಂಗಿಕ ಕಿರುಕುಳ ತಡೆಯಲು ಹೋದ ವ್ಯಕ್ತಿಯನ್ನು ಹೊಡೆದು ಕೊಂದ ಗುಂಪು

ಸ್ನೇಹಿತೆ ಮೇಲಾಗುತ್ತಿದ್ದ ಲೈಂಗಿಕ ಕಿರುಕುಳ ತಡೆಯಲು ಹೋದ ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಂದಿರುವ ಘಟನೆ ಕೋಲ್ಕತ್ತಾದ ನ್ಯೂ ಟೌನ್​ನಲ್ಲಿ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಮೂವರು ಪುರುಷರ ಕಿರುಕುಳದಿಂದ ತನ್ನ ಮಹಿಳಾ ಸ್ನೇಹಿತೆಯನ್ನು ರಕ್ಷಿಸಲು ಪ್ರಯತ್ನಿಸಿದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.ಬಿದಿರಿನ ದಿಮ್ಮಿಯಿಂದ ಸಂಕೇತ್ ಚಟರ್ಜಿ ತಲೆಗೆ ಹಲವು ಬಾರಿ ಹೊಡೆದಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು,

ಸ್ನೇಹಿತೆ ಮೇಲಾಗುತ್ತಿದ್ದ ಲೈಂಗಿಕ ಕಿರುಕುಳ ತಡೆಯಲು ಹೋದ ವ್ಯಕ್ತಿಯನ್ನು ಹೊಡೆದು ಕೊಂದ ಗುಂಪು
ಸಾವು
Image Credit source: Indian Express

Updated on: Apr 25, 2025 | 9:15 AM

ಕೋಲ್ಕತ್ತಾ, ಏಪ್ರಿಲ್ 25: ಸ್ನೇಹಿತೆ(Friend) ಮೇಲಾಗುತ್ತಿದ್ದ ಲೈಂಗಿಕ ಕಿರುಕುಳ ತಡೆಯಲು ಹೋದ ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಂದಿರುವ ಘಟನೆ ಕೋಲ್ಕತ್ತಾದ ನ್ಯೂ ಟೌನ್​ನಲ್ಲಿ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಮೂವರು ಪುರುಷರ ಕಿರುಕುಳದಿಂದ ತನ್ನ ಮಹಿಳಾ ಸ್ನೇಹಿತೆಯನ್ನು ರಕ್ಷಿಸಲು ಪ್ರಯತ್ನಿಸಿದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.

ಬಿದಿರಿನ ದಿಮ್ಮಿಯಿಂದ ಸಂಕೇತ್ ಚಟರ್ಜಿ ತಲೆಗೆ ಹಲವು ಬಾರಿ ಹೊಡೆದಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು, ತಲೆಗೆ ವೈದ್ಯರು ಹಲವಾರು ಹೊಲಿಗೆಗಳನ್ನು ಕೂಡ ಹಾಕಿದ್ದರು. ಕೆಲವು ಗಂಟೆಗಳ ಬಳಿಕ ನಿಧನರಾಗಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಸಂಕೇತ್ ತನ್ನ ಸ್ನೇಹಿತೆಯೊಂದಿಗೆ ಜಗಳವಾಡಿದ್ದ ಎಂಬುದು ತಿಳಿದುಬಂದಿದೆ.

ಬೆಳಗಿನ ಜಾವ 1.30ಕ್ಕೆ ಅಪಾರ್ಟ್​ಮೆಂಟ್​ನಿಂದ ಆಕೆ ಹೊರಬಂದು ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಮುಖ್ಯರಸ್ತೆಯ ಬಳಿ ಕುಳಿತಿದ್ದ ಮೂವರು ಆಕೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಆಕೆಯನ್ನು ಹಿಂಬಾಲಿಸಿದ್ದಾರೆ.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಮತ್ತಷ್ಟು ಓದಿ: ಗ್ವಾಲಿಯರ್: 3 ವರ್ಷದ ಮಗು ಮೇಲೆ ಮನೆ ಮಾಲೀಕನ ಮಗನಿಂದ ಅತ್ಯಾಚಾರ

ಸ್ನೇಹಿತೆಯನ್ನು ಹುಡುಕುತ್ತಾ ಅಪಾರ್ಟ್‌ಮೆಂಟ್‌ನಿಂದ ಹೊರಬಂದ ಸಂಕೇತ್, ಪುರುಷರು ಆಕೆಗೆ ಕಿರುಕುಳ ನೀಡುತ್ತಿರುವುದನ್ನು ನೋಡಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದನು. ಸಂಕೇತ್ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ಪ್ರಯತ್ನಿಸಿದಾಗ ಮತ್ತು ಆಕೆಗೆ ಕಿರುಕುಳ ನೀಡುವುದನ್ನು ಪ್ರತಿಭಟಿಸಿದಾಗ ಮೂವರು ಆರೋಪಿಗಳು ಆತನನ್ನು ಹೊಡೆಯಲು ಪ್ರಾರಂಭಿಸಿದರು.

ದಪ್ಪ ಬಿದಿರಿನ ದಿಮ್ಮಿಯಿಂದ ಆತನ ತಲೆಗೆ ಹೊಡೆದಿದ್ದಾರೆ. ಸಂಕೇತ್ ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡರು. ಆರೋಪಿ ಮೂವರು ಪರಾರಿಯಾಗಿದ್ದಾರೆ ಎಂದು ಅಧಿಕಾರಿ ಹೇಳಿದರು. ಆಕೆ ಕೂಡಲೇ ಸ್ನೇಹಿತನ ಕುಟುಂಬದವರಿಗೆ ಮಾಹಿತಿ ನೀಡಿದ್ದಾಳೆ, ಸಂಕೇತ್ ಅವರನ್ನು ಮೊದಲು ಸಾಲ್ಟ್ ಲೇಕ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ನಂತರ, ಅವರನ್ನು ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು, ಬೆಳಗ್ಗೆ 8 ಗಂಟೆ ಸುಮಾರಿಗೆ ನಿಧನರಾದರು. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ಸಾಗರ್ ದಾಸ್, ರಾಜು ಘೋಷ್ ಮತ್ತು ಶಂಭು ಮಂಡಲ್ ಎಂದು ಗುರುತಿಸಲಾಗಿದೆ.
ಗುರುವಾರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:14 am, Fri, 25 April 25