ಮಣಪ್ಪುರಂ ಗೋಲ್ಡ್ ಲೋನ್ ಸಂಸ್ಥೆಯಲ್ಲಿ 10 ಕೆ ಜಿ ಚಿನ್ನಾಭರಣ ಮಾಯ, ಮ್ಯಾನೇಜರ್​ ಪಾವನಿ ನಾಪತ್ತೆ!

Vijayawada: ಗ್ರಾಹಕರಿಗೆ ಸೇರಿದ 10 ಕೆಜಿ ಚಿನ್ನ ಕಾಣದಿದ್ದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಕ್ಯಾಮೆರಾ ಆಧರಿಸಿ ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಸಂಬಂಧಿಕರು ಮತ್ತು ಆಪ್ತರು ನಾಪತ್ತೆಯಾಗಿರುವ ಮಹಿಳಾ ಸಿಬ್ಬಂದಿ ಪಾವನಿಗಾಗಿ ಹುಡುಕುತ್ತಿದ್ದಾರೆ. 10 ಕೆಜಿ ಚಿನ್ನಾಭರಣದ ಮಾರುಕಟ್ಟೆ ಮೌಲ್ಯ 6 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.

ಮಣಪ್ಪುರಂ ಗೋಲ್ಡ್ ಲೋನ್ ಸಂಸ್ಥೆಯಲ್ಲಿ 10 ಕೆ ಜಿ ಚಿನ್ನಾಭರಣ ಮಾಯ, ಮ್ಯಾನೇಜರ್​ ಪಾವನಿ ನಾಪತ್ತೆ!
ಮಣಪ್ಪುರಂ ಗೋಲ್ಡ್ ಲೋನ್ ಸಂಸ್ಥೆಯಲ್ಲಿ 10 ಕೆ ಜಿ ಚಿನ್ನಾಭರಣ ಮಾಯ
Follow us
ಸಾಧು ಶ್ರೀನಾಥ್​
|

Updated on: Oct 19, 2023 | 10:08 AM

ಕಂಕಿಪಾಡು ಗ್ರಾಮ, ಅಕ್ಟೋಬರ್ 19: ಚಿನ್ನದ ಸಾಲ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ ಕೆಲ ದಿನಗಳಿಂದ ಕರ್ತವ್ಯಕ್ಕೆ ಬಂದಿಲ್ಲ. ಅವರಿಗೆ ಏನಾಯಿತೋ ಎಂದು ಸಂಸ್ಥೆಯ ಇತರೆ ಸಿಬ್ಬಂದಿ ಫೋನ್ ಮಾಡಿದ್ದಾರೆ. ಆದರೆ ಫೋನ್​ ಲಿಫ್ಟ್ ಮಾಡದಿರುವುದನ್ನು ಕಂಡು ಸಿಬ್ಬಂದಿಗೆ ಶಾಕ್​ ಆಗಿದೆ. ಜೊತೆಗೆ ಸಿಬ್ಬಂದಿಗೆ ಆ ನೌಕರನ ಮೇಲೆ ಅನುಮಾನವೂ ಮೂಡಿದೆ. ಸಂಸ್ಥೆಯ ಲಾಕರ್‌ಗಳಲ್ಲಿದ್ದ ನಗದು ಮತ್ತಿತರ ವಸ್ತುಗಳನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಗ್ರಾಹಕರ ಲಾಕರ್‌ಗಳಲ್ಲಿ ಇಟ್ಟಿದ್ದ ಸುಮಾರು 10 ಕಿ ಲೋ ಚಿನ್ನಾಭರಣ ಕಣ್ಣಿಗೆ ಕಾಣದಂತೆ (Gold missing) ಮಾಯವಾಗಿದೆ. ಇದರಿಂದ ಸಂಸ್ಥೆಯ ನೌಕರರು ಪೊಲೀಸರ ಮೊರೆ ಹೋದರು. ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ (Kankipadu, Krishna District) ಈ ಘಟನೆ ನಡೆದಿದೆ. ಆ ವಿವರಗಳ ಬಗ್ಗೆ ನೋಡುವುದಾದರೆ…

ವಿಜಯವಾಡ ಸಮೀಪದ ಕಂಕಿಪಾಡು ಗ್ರಾಮದಲ್ಲಿರುವ ಮಣಪ್ಪುರಂ ಗೋಲ್ಡ್ ಲೋನ್ ಫೈನಾನ್ಸ್‌ನಲ್ಲಿ (Manappuram Gold loan finance) ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರು ತಮ್ಮ ಕೈ ಚಳಕ ತೋರಿಸಿದ್ದಾರೆ. ಈ ಚಿನ್ನದ ಸಾಲ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮ್ಯಾನೇಜರ್ ಪಾವನಿ ಗ್ರಾಹಕರ ಶಾಖೆಯಲ್ಲಿ ಇಟ್ಟಿದ್ದ ಸುಮಾರು 10 ಕೆಜಿ ಚಿನ್ನಾಭರಣದೊಂದಿಗೆ ನಾಪತ್ತೆಯಾಗಿದ್ದಾರೆ. ಆರೋಗ್ಯ ಸರಿಯಿಲ್ಲವೆಂದು ಆಕೆ ರಜೆ ಹಾಕಿಹೋಗಿದ್ದಾರೆ. ಹಲವು ದಿನಗಳಿಂದ ಕಚೇರಿಗೆ ಬಾರದೆ, ಸಿಬ್ಬಂದಿ ಕರೆ ಮಾಡಿದರೂ ಅಟೆಂಡ್ ಮಾಡದ ಕಾರಣ ಹಿರಿಯ ಅಧಿಕಾರಿಗಳಿಗೆ ಅನುಮಾನ ಬಂದು ಲಾಕರ್ ಗಳನ್ನು ಪರಿಶೀಲಿಸಿದರು.

Also Read: ಪತ್ನಿಯ ಆತ್ಮಹತ್ಯೆ ಸುದ್ದಿ ಕೇಳಿ, ತಲೆಗೆ ಗುಂಡು ಹಾರಿಸಿಕೊಂಡು ಬಿಎಸ್​ಎಫ್​ ಯೋಧ ಆತ್ಮಹತ್ಯೆ

ಗ್ರಾಹಕರಿಗೆ ಸೇರಿದ 10 ಕೆಜಿ ಚಿನ್ನ ಕಾಣದಿದ್ದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಕ್ಯಾಮೆರಾ ಆಧರಿಸಿ ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಸಂಬಂಧಿಕರು ಮತ್ತು ಆಪ್ತರು ನಾಪತ್ತೆಯಾಗಿರುವ ಮಹಿಳಾ ಸಿಬ್ಬಂದಿ ಪಾವನಿಗಾಗಿ ಹುಡುಕುತ್ತಿದ್ದಾರೆ. ಆಕೆ ಕದ್ದಿರುವ 10 ಕೆಜಿ ಚಿನ್ನಾಭರಣದ ಮಾರುಕಟ್ಟೆ ಮೌಲ್ಯ ಅಂದಾಜು 6 ಕೋಟಿ ರೂಪಾಯಿ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಇತ್ತ ಸಂಸ್ಥೆಯಲ್ಲಿ ತಾವಿಟ್ಟಿದ್ದ ಚಿನ್ನ ಮಾಯವಾಗಿರುವ ಸುದ್ದಿಯಿಂದ ಗ್ರಾಹಕರು ಕಂಗಾಲಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ