ಕುಂಭಮೇಳದಲ್ಲಿ ಭಾಗವಹಿಸಿದವರಿಗೆ 14 ದಿನ ಕಡ್ಡಾಯ ಹೋಮ್ ಕ್ವಾರಂಟೈನ್: ದೆಹಲಿ ಸರ್ಕಾರ

|

Updated on: Apr 18, 2021 | 10:54 AM

Delhi: ಏಪ್ರಿಲ್ 18 ಮತ್ತು ಏಪ್ರಿಲ್ 30ರ ಅವಧಿಯಲ್ಲಿ ಕುಂಭಮೇಳದಲ್ಲಿ ಭಾಗವಹಿಸುವವರು ಇದ್ದರೆ ಕಡ್ಡಾಯವಾಗಿ ಮಾಹಿತಿ ಭರ್ತಿ ಮಾಡಬೇಕು. ಕುಂಭಮೇಳಕ್ಕೆ ಹೋಗಿ ಬಂದ ನಂತರ ಅವರ ಮೇಲೆ ನಿಗಾ ಇರಿಸಲಾಗುವುದು. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

ಕುಂಭಮೇಳದಲ್ಲಿ ಭಾಗವಹಿಸಿದವರಿಗೆ 14 ದಿನ ಕಡ್ಡಾಯ ಹೋಮ್ ಕ್ವಾರಂಟೈನ್: ದೆಹಲಿ ಸರ್ಕಾರ
ದೆಹಲಿಯ ಬಸ್​ಗಳನ್ನು ರೋಗಾಣುಮುಕ್ತ ಮಾಡುತ್ತಿರುವುದು
Follow us on

ದೆಹಲಿ: ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಿದವರು ದೆಹಲಿ ಸರ್ಕಾರದ ವೆಬ್ ಸೈಟ್ ನಲ್ಲಿ ಹೆಸರು ನೋಂದಣಿ ಮಾಡಬೇಕು ಮತ್ತು 14ದಿನ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ನಲ್ಲಿರಬೇಕು ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ಹೇಳಿದೆ. ದೆಹಲಿಯಲ್ಲಿ ಶನಿವಾರ 24,375 ಹೊಸ ಕೊವಿಡ್ ಪ್ರಕರಣಗಳು ವರದಿಯಾದ ಬೆನ್ನಲ್ಲೇ ತಜ್ಞರ ಸಮಿತಿ ಈ ಆದೇಶ ಹೊರಡಿಸಿದೆ.ದೆಹಲಿ ಸರ್ಕಾರದ www.delhi.gov.in ವೆಬ್ ಸೈಟ್ ನಲ್ಲಿ ಹೆಸರು ನೋಂದಣಿ ಮಾಡಬೇಕು ಎಂದು ಸರ್ಕಾರ ಹೇಳಿದೆ.

ಈ ರೀತಿಯ ಪೋರ್ಟಲ್ ಮುಂಚೆಯೇ ಸಿದ್ದಪಡಿಸಬೇಕಿತ್ತು.ಕುಂಭಮೇಳ ಮಾರ್ಚ್ 11ಕ್ಕೆ ಆರಂಭವಾಗಿತ್ತು. ಏಪ್ರಿಲ್ 1ರಿಂದ ದೆಹಲಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗಿತ್ತು. ಆ ಹೊತ್ತಿಗೆ ಆ ವೆಬ್​ಸೈಟ್ ಸಿದ್ಧ ಮಾಡಬೇಕಿತ್ತು ಎಂದು ಹೆಸರು ಹೇಳಲಿಚ್ಛಿಸದ ದೆಹಲಿ ಸರ್ಕಾರದ ಅಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ಹಿಂದೆ ಕುಂಭಮೇಳಕ್ಕೆ ಹೋಗಿ ಬಂದವರಿಗೆ ಆರ್​ಟಿ- ಪಿಸಿಆರ್ ಪರೀಕ್ಷೆ ಅಥವಾ ಆರೋಗ್ಯದ ಬಗ್ಗೆ ಸ್ವಯಂ ನಿಗಾ ಕಡ್ಡಾಯವಾಗಿರಲಿಲ್ಲ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಏಪ್ರಿಲ್​ 4 ಮತ್ತು ಏಪ್ರಿಲ್ 17ರ ಅವಧಿಯಲ್ಲಿ ಕುಂಭಮೇಳದಲ್ಲಿ ಭಾಗವಹಿಸಿದವರು 24 ಗಂಟೆಗಳೊಳಗೆ ಅಂದರೆ ಭಾನುವಾರ ಮಧ್ಯರಾತ್ರಿಗೆ ಮುಂಚೆ ತಮ್ಮ ಸಂಪರ್ಕ ಮಾಹಿತಿಯನ್ನು ಕಡ್ಡಾಯವಾಗಿ ದೆಹಲಿ ಸರ್ಕಾರದ ವೆಬ್​ಸೈಟ್​ನಲ್ಲಿರುವ ಲಿಂಕ್​ನಲ್ಲಿ ಅಪ್​ಲೋಡ್ ಮಾಡಬೇಕು. ಏಪ್ರಿಲ್ 30ರಂದು ಕುಂಭಮೇಳ ಮುಕ್ತಾಯವಾಗಲಿದ್ದು, ಅದಕ್ಕಿಂತ ಮುನ್ನ ಅಲ್ಲಿಗೆ ಹೋಗುವವರಿದ್ದರೆ ವೆಬ್​ಸೈಟ್​ನಲ್ಲಿರುವ ಅರ್ಜಿ ತುಂಬ ಬೇಕು ಎಂದು ಡಿಡಿಎಂಎ ಹೇಳಿದೆ .

ದೆಹಲಿ ಸರ್ಕಾರದ ವೆಬ್​ಸೈಟ್

ಏಪ್ರಿಲ್ 18 ಮತ್ತು ಏಪ್ರಿಲ್ 30ರ ಅವಧಿಯಲ್ಲಿ ಕುಂಭಮೇಳದಲ್ಲಿ ಭಾಗವಹಿಸುವವರು ಇದ್ದರೆ ಕಡ್ಡಾಯವಾಗಿ ಮಾಹಿತಿ ಭರ್ತಿ ಮಾಡಬೇಕು. ಕುಂಭಮೇಳಕ್ಕೆ ಹೋಗಿ ಬಂದ ನಂತರ ಅವರ ಮೇಲೆ ನಿಗಾ ಇರಿಸಲಾಗುವುದು. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ-2021ಗೆ ಭೇಟಿ ನೀಡಿದ ಅಥವಾ ಭೇಟಿ ನೀಡಲಿರುವ ದೆಹಲಿಯ ಎಲ್ಲಾ ನಿವಾಸಿಗಳನ್ನು ಕಡ್ಡಾಯವಾಗಿ ಪರೀಕ್ಷಿಸುವುದು, ಪತ್ತೆಹಚ್ಚುವುದು ಮತ್ತು ನಿರ್ಬಂಧಿಸುವುದು ಕಡ್ಡಾಯವಾಗಿದೆ. ದೆಹಲಿಗೆ ಭೇಟಿ ನೀಡಿದ ಅಥವಾ ಕುಂಭಮೇಳಕ್ಕೆ ಭೇಟಿ ನೀಡಲಿರುವ ಎಲ್ಲ ನಿವಾಸಿಗಳು ದೆಹಲಿಗೆ ಆಗಮಿಸಿದಾಗ 14 ದಿನಗಳ ಕಾಲ ಕಡ್ಡಾಯವಾಗಿ ಮನೆಯಲ್ಲಿಯೇ ಕ್ವಾರಂಟೈನ್​ನಲ್ಲಿರಬೇಕಾಗುತ್ತದೆ ಎಂದು ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಮಹಾ ಕುಂಭಮೇಳದಿಂದ ಹಿಂದಿರುಗಿದವರು ಭಾನುವಾರ ಮಧ್ಯರಾತ್ರಿಯೊಳಗೆ 24 ಗಂಟೆಗಳ ಒಳಗೆ ದೆಹಲಿ ಸರ್ಕಾರಿ ವೆಬ್‌ಸೈಟ್ www.delhi.gov.in ನಲ್ಲಿ ತಮ್ಮ ವಿವರಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಕುಂಭಮೇಳಕ್ಕೆ ಭೇಟಿ ನೀಡಿ ದೆಹಲಿಗೆ ಮರಳಿದ ಅಂತಹ ಯಾವುದೇ ದೆಹಲಿಯ ನಿವಾಸಿಗಳು ಅಗತ್ಯವಾದ ವಿವರಗಳನ್ನು , ಮಾಹಿತಿಯನ್ನು ಅಪ್‌ಲೋಡ್ ಮಾಡಿಲ್ಲ ಎಂದು ಕಂಡುಬಂದಲ್ಲಿ ಅಥವಾ ವರದಿ ಮಾಡಿದರೆ, ಅವನು / ಅವಳನ್ನು ಸಾಂಸ್ಥಿಕ ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ದೆಹಲಿಯ ಜಿಲ್ಲಾಧಿಕಾರಿಗಳು ದೆಹಲಿಯ ಅಂತಹ ನಿವಾಸಿಗಳ ಪ್ರತಿದಿನವೂ ಪತ್ತೆಹಚ್ಚುವಿಕೆ ಮತ್ತು ನಿಗಾ ಇರಿಸುವಿಕೆಯನ್ನು ಖಚಿತಪಡಿಸಿಕೊಳ್ಳುತ್ತಾರೆ. ದೆಹಲಿಯ ಎಲ್ಲಾ ಜಿಲ್ಲಾ ನ್ಯಾಯಾಧೀಶರು ಮತ್ತು ಡಿಸಿಪಿಗಳು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಅದು ಆದೇಶದಲ್ಲಿ ಹೇಳಲಾಗಿದೆ.

ಇದನ್ನೂ ಓದಿ:  ದೆಹಲಿಯಲ್ಲಿ ಆಕ್ಸಿಜನ್​, ರೆಮ್​ಡಿಸಿವಿರ್ ಔಷಧ​​ಗಳ ತೀವ್ರ ಕೊರತೆ: ಆತಂಕ ವ್ಯಕ್ತಪಡಿಸಿದ ಸಿಎಂ ಅರವಿಂದ್ ಕೇಜ್ರಿವಾಲ್​

ದೆಹಲಿಯಲ್ಲಿ ಕೊವಿಡ್ ಪರಿಸ್ಥಿತಿ ಗಂಭೀರ, ಲಾಕ್​ಡೌನ್ ಇದಕ್ಕೆ ಪರಿಹಾರವಲ್ಲ: ಅರವಿಂದ್ ಕೇಜ್ರಿವಾಲ್

(Mandatory 14 day Home Quarantine for all residents returning Kumbh Mela 2021 visitors orders Delhi Disaster Management Authority)