
ಹೊಸ ವರ್ಷಕ್ಕೆ ಹೊಸ ಹೊಸ ರೂಲ್ಸ್ಗಳನ್ನು ತರಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರು ಪಾಲಿಸಲೇಬೇಕಾದ ಕೆಲವೊಂದು ನಿಯಮಗಳನ್ನು ತರಲು ಮುಂದಾಗಿದೆ. ಇದೀಗ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ಸರ್ಕಾರದ ಪ್ರಯತ್ನದ ಭಾಗವಾಗಿ, ರೆಫ್ರಿಜರೇಟರ್‌ಗಳು, ಟೆಲಿವಿಷನ್‌ಗಳು, ಎಲ್‌ಪಿಜಿ ಗ್ಯಾಸ್ ಸ್ಟೌವ್‌ಗಳು, ಕೂಲಿಂಗ್ ಟವರ್‌ಗಳು ಸೇರಿದಂತೆ ಹೆಚ್ಚು ವಿದ್ಯುತ್ ಉಪಯೋಗವಾಗುವ ಉಪಕರಣಗಳಿಗೆ ಜನವರಿ 1 ರಿಂದ ಅಂದರೆ ನೆನ್ನೆಯಿಂದ ಇಂಧನ ದಕ್ಷತೆಯ ಸ್ಟಾರ್-ಲೇಬಲಿಂಗ್ (energy star labeling) ಕಡ್ಡಾಯವಾಗಲಿದೆ.
ಪಿಟಿಐ ವರದಿ ಪ್ರಕಾರ, ಇಂಧನ ದಕ್ಷತೆ ಬ್ಯೂರೋ (ಬಿಇಇ) ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ಕಡ್ಡಾಯವಾಗಿ ಎಲ್ಲ ಎಲೆಕ್ಟ್ರಾನಿಕ್ ಕಂಪನಿಗಳು ತಮ್ಮ ಎಲೆಕ್ಟ್ರಾನಿಕ್ ವಸ್ತುಗಳಿಗೆ ಈ ವರ್ಷದಿಂದ ಇಂಧನ ದಕ್ಷತೆಯ ಸ್ಟಾರ್-ಲೇಬಲಿಂಗ್ಗಳನ್ನು ಅಳವಡಿಸಲೇಬೇಕು. ಡೀಪ್ ಫ್ರೀಜರ್‌ಗಳು, ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ಮೇಲೆ ಈ ಸ್ಟಾರ್-ಲೇಬಲಿಂಗ್ ಇರಲೇಬೇಕು. ಇನ್ನು ಇದಕ್ಕೂ ಮೊದಲು, ಫ್ರಾಸ್ಟ್-ಫ್ರೀ ರೆಫ್ರಿಜರೇಟರ್‌ಗಳು, ಡೈರೆಕ್ಟ್ ಕೂಲ್ ರೆಫ್ರಿಜರೇಟರ್‌ಗಳು, ಡೀಪ್ ಫ್ರೀಜರ್‌ಗಳು, ಆರ್‌ಎಸಿ(ಕ್ಯಾಸೆಟ್, ಫ್ಲೋರ್ ಸ್ಟ್ಯಾಂಡಿಂಗ್ ಟವರ್, ಸೀಲಿಂಗ್, ಕಾರ್ನರ್ ಎಸಿ), ಕಲರ್ ಟೆಲಿವಿಷನ್‌ಗಳು ಮತ್ತು ಅಲ್ಟ್ರಾ-ಹೈ ಡೆಫಿನಿಷನ್ ಟೆಲಿವಿಷನ್‌ಗಳಂತಹ ವಸ್ತುಗಳ ಮೇಲೆ ಸ್ಟಾರ್ ರೇಟಿಂಗ್ ಸ್ವಯಂಪ್ರೇರಿತವಾಗಿತ್ತು. ಇದೀಗ ಅದನ್ನು ಕಡ್ಡಾಯಗೊಳಿಸಲಾಗಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಪ್ರಾಯೋಗಿಕ ಪರೀಕ್ಷೆಗಳಿಗೆ ಹೊಸ ರೂಲ್ಸ್ ತಂದ ಇಲಾಖೆ
ಇನ್ನು ಈ ಬಗ್ಗೆ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ, ಈಗಾಗಲೇ ಸ್ಟಾರ್ ಲೇಬಲಿಂಗ್ ಹಾಕಿರುವ ಉಪಕರಣಗಳ ಪಟ್ಟಿಯನ್ನು ಪರಿಶೀಲಿಸಲಾಗುತ್ತದೆ ಮತ್ತು ಅದನ್ನು ಮುಂದಿನ ದಿನಗಳಲ್ಲಿ ನವೀಕರಣ ಮಾಡಲಾಗುತ್ತದೆ. ಇನ್ನು ಹೊಸ ಉಪಕರಣಗಳಿಗೆ ಈಗಾಗಲೇ ಕರಡು ನಿಯಮಗಳನ್ನು ಜುಲೈ 2025ರಲ್ಲಿ ಸಾರ್ವಜನಿಕ ಸಮಾಲೋಚನೆಗಾಗಿ ಬಿಡುಗಡೆ ಮಾಡಲಾಗಿತ್ತು. ಇದೀಗ ಇದಕ್ಕೆ ಅಧಿಕೃತ ಅಧಿಸೂಚನೆ ನೀಡಿದೆ ಎಂದು ಹೇಳಿದ್ದಾರೆ. ಕೊಠಡಿ ಹವಾನಿಯಂತ್ರಣಗಳು (ಸ್ಥಿರ ಮತ್ತು ವೇರಿಯಬಲ್ ವೇಗ), ವಿದ್ಯುತ್ ಸೀಲಿಂಗ್-ಮಾದರಿಯ ಫ್ಯಾನ್‌ಗಳು, ಸ್ಟೇಷನರಿ ಸ್ಟೋರೇಜ್ ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳು, ವಾಷಿಂಗ್ ಮೆಷಿನ್‌ಗಳು, ಟ್ಯೂಬ್ಯುಲರ್ ಫ್ಲೋರೊಸೆಂಟ್ ದೀಪಗಳು ಮತ್ತು ಸ್ವಯಂ-ಬ್ಯಾಲಸ್ಟೆಡ್ ಎಲ್‌ಇಡಿ ದೀಪಗಳು ಮುಂತಾದ ಉಪಕರಣಗಳಿಗೆ ಸ್ಟಾರ್ ಲೇಬಲಿಂಗ್ ಅನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿತ್ತು.ಈ ವರ್ಗಗಳಿಗೆ ಸ್ಟಾರ್ ಲೇಬಲಿಂಗ್ ಈಗಾಗಲೇ ಕಡ್ಡಾಯವಾಗಿದ್ದರೂ, ಇಂಧನ-ಕಾರ್ಯಕ್ಷಮತೆಯ ಮಾನದಂಡಗಳನ್ನು ಮತ್ತಷ್ಟು ಬಿಗಿಗೊಳಿಸಲು ದಕ್ಷತೆಯ ಮಾನದಂಡಗಳನ್ನು ನವೀಕರಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ