ಗುವಾಹಟಿ, ಜುಲೈ 29: ಮಣಿಪುರದಲ್ಲಿ ಹಿಂಸಾಚಾರ (Manipur Violence) , ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಕ್ರಮ ಮ್ಯಾನ್ಮಾರ್ ವಲಸಿಗರ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸುವ ಪ್ರಕ್ರಿಯೆಯನ್ನು ಇಂದು ಮಣಿಪುರದಲ್ಲಿ ಆರಂಭಿಸಲಾಗಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಜಂಟಿ ಕಾರ್ಯದರ್ಶಿ ಪೀಟರ್ ಸಲಾಮ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಸರ್ಕಾರಿ ಅಧಿಕಾರಿಗಳಿಗೆ ತರಬೇತಿ ನೀಡಲು ರಾಷ್ಟ್ರೀಯ ಅಪರಾಧ ಬ್ಯೂರೋ (ಎನ್ಸಿಆರ್ಬಿ) ತಂಡವನ್ನು ನಿಯೋಜಿಸಿದೆ. ಜುಲೈ 26 ರಂದು, ಅಕ್ರಮ ವಲಸಿಗರ ಬಯೋಮೆಟ್ರಿಕ್ ಸಂಗ್ರಹ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತರಬೇತಿ ನೀಡಲಾಗುವುದು.
ಇದನ್ನೂ ಓದಿ: Manipur Violence: ಮಣಿಪುರ ಲೈಂಗಿಕ ದೌರ್ಜನ್ಯ ಪ್ರಕರಣ ತನಿಖೆ ಸಿಬಿಐಗೆ; ಎಫ್ಐಆರ್ ದಾಖಲು
ಇಂಫಾಲ್ ಪೂರ್ವ ಜಿಲ್ಲೆಯ ಸೈಜ್ವಾದ ಶಿಬಿರದಲ್ಲಿ ಬಯೊಮೆಟ್ರಿಕ್ ವಿವರ ಸಂಗ್ರಹಿಸುವ ಕಾರ್ಯ ನಡೆಸಲಾಗಿದೆ. ಸದ್ಯ ಈ ಶಿಬಿರದಲ್ಲಿ ಒಟ್ಟು 105 ಮ್ಯಾನ್ಮಾರ್ ವಲಸಿಗರನ್ನು ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
On instructions of the Ministry of Home Affairs, Govt of India to complete the campaign for biometric capture of illegal Myanmar immigrants in the State of Manipur by September 2023, the Govt of Manipur has resumed its campaign for biometric capture of all illegal Myanmar… pic.twitter.com/sx68ji2ZOO
— ANI (@ANI) July 29, 2023
ರಾಜ್ಯದಲ್ಲಿ ಅರಣ್ಯನಾಶ, ಕೃಷಿ ನಾಶ ಮತ್ತು ಮಾದಕವಸ್ತುಗಳ ಹಾವಳಿಯೇ ವಲಸಿಗರು ಮ್ಯಾನ್ಮಾರ್ಗೆ ಆಗಮಿಸಲು ಕಾರಣ ಎಂದು ಇತ್ತೀಚೆಗೆ ಮಣಿಪುರ ಸಿಎಂ ಎನ್ಬಿರೇನ್ ಸಿಂಗ್ ಹಿಂದೆ ಹೇಳಿದ್ದರು.
ಕಳೆದ ಮೂರು ತಿಂಗಳಿಂದ ಜನಾಂಗೀಯ ಹಿಂಸಾಚಾರಕ್ಕೆ ಮಣಿಪುರ ಬೆಂದು ಹೋಗಿದೆ. ನೂರಾರು ಜನ ಮೃತಪಟ್ಟಿದ್ದಾರೆ. ಹಿಂಸಾಚಾರಕ್ಕೆ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಗಲಭೆ ಪೀಡಿತ ಮಣಿಪುರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್‌ನಲ್ಲಿ ತುಟಿಬಿಚ್ಚುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಹೀಗಾಗಿ ವಸ್ತುಸ್ಥಿತಿ ತಿಳಿಯಲು ವಿರೋಧ ಪಕ್ಷಗಳ ನಾಯಕರ ನಿಯೋಗ ಇವತ್ತು ಮಣಿಪುರಕ್ಕೆ ಎಂಟ್ರಿ ಕೊಟ್ಟಿದೆ.
ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಬಗ್ಗೆ ಮೌನವೇಕೆ?: ಸ್ಮೃತಿ ಇರಾನಿಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್
ಬೆಳಗ್ಗೆ ದೆಹಲಿಯಿಂದ ಹೊರಟ 16 ಪಕ್ಷಗಳ 21 ಸದಸ್ಯರ ನಿಯೋಗ, ಮಣಿಪುರದ ಇಂಫಾಲಕ್ಕೆ ಬಂದಿಳಿದಿತ್ತು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ, ಗಲಭೆಯ ಕೇಂದ್ರ ಸ್ಥಳವಾಗಿರುವ ಚುರಾಚುಂದ್‌ಪುರಕ್ಕೆ ಭೇಟಿ ನೀಡಿದರು. ಅಲ್ಲಿನ ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿದ ವಾಸ್ತವ ಪರಿಸ್ಥಿತಿ ತಿಳಿಯುವ ಪ್ರಯತ್ನ ಮಾಡಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:41 pm, Sat, 29 July 23