ಸಹೋದರನ ಸಾವಿನಿಂದ ಮನನೊಂದು ಮನೆ ಬಳಿಯ ನೀರಿನ ಟ್ಯಾಂಕ್ಗೆ ಹಾರಿ ಯುವತಿ ಆತ್ಮಹತ್ಯೆ
ಸಹೋದರನ ಸಾವಿನಿಂದ ಮನನೊಂದು ಯುವತಿ ರೇಖಾ ಮನೆಯ ನೀರಿನ ಟ್ಯಾಂಕ್ಗೆ ಹಾರಿ ಮೃತಪಟ್ಟಿರುವ ಘಟನೆ ಬಿಕಾನೇರ್ನ ನುಲ್ಲಾದಲ್ಲಿ ನಡೆದಿದೆ.
ಜೈಪುರ, ಜುಲೈ 30: ಸಹೋದರನ ಸಾವಿನಿಂದ ಮನನೊಂದು ಯುವತಿ ರೇಖಾ ಮನೆಯ ನೀರಿನ ಟ್ಯಾಂಕ್ಗೆ ಹಾರಿ ಮೃತಪಟ್ಟಿರುವ ಘಟನೆ ಬಿಕಾನೇರ್ನ ನುಲ್ಲಾದಲ್ಲಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ತನ್ನ 19 ವರ್ಷದ ಸಹೋದರ ಸಂದೀಪ್ ಸಾವಿನಿಂದ ಆಕೆ ಬೇಸರಗೊಂಡಿದ್ದಳು, ತನ್ನ ಮನೆಯ ಸಮೀಪವಿದ್ದ ನೀರಿನ ಟ್ಯಾಂಕ್ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಯ ಬಳಿ ನೀರು ತುಂಬಿ ಹರಿಯುತ್ತಿದ್ದ ನಾಲೆಗೆ ಅಚಾನಕ್ಕಾಗಿ ಬಿದ್ದು ಸಂದೀಪ್ ಮೃತಪಟ್ಟಿದ್ದರು.ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:29 am, Sun, 30 July 23