ಮಣಿಪುರ(Manipur) ದಲ್ಲಿ ಹಿಂಸಾಚಾರ(Violence) ಮುಂದುವರೆದಿದ್ದು, ಘಟನೆಯಲ್ಲಿ ಮೂವರು ಬಿಎಸ್‌ಎಫ್ ಯೋಧರಿಗೆ ಗಾಯಗಳಾಗಿವೆ. ಹೊಸ ಹಿಂಸಾಚಾರದ ವರದಿಗಳ ನಡುವೆ ಮೊರೆಹ್ ಪ್ರದೇಶದಲ್ಲಿ ಇಬ್ಬರು ಮಣಿಪುರ ಪೊಲೀಸ್ ಕಮಾಂಡೋಗಳು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ.
ಶಸ್ತ್ರಸಜ್ಜಿತ ಉಗ್ರಗಾಮಿಗಳು ರಾಜ್ಯ ಪೊಲೀಸ್ ತಂಡದ ಮೇಲೆ ದಾಳಿ ನಡೆಸಿದ್ದಾರೆ, ಇಬ್ಬರು ಕಮಾಂಡೋಗಳನ್ನು ಸೊಮೊರ್ಜಿತ್ ಮೀಟೆಯ್ ಮತ್ತು ತಖೆಲ್ಲಂಬಮ್ ಸೀಲೆಶ್ವರ್ ಸಿಂಗ್ ಎಂದು ಗುರುತಿಸಲಾಗಿದೆ. ತೆಂಗ್ನೌಪಾಲ್ ಜಿಲ್ಲೆಯ ಮೊರೆಹ್‌ನಲ್ಲಿ ಬಂದೂಕುಗಳು ಮತ್ತು ಸ್ಫೋಟಕಗಳನ್ನು ಬಳಸಿದ್ದಾರೆ.
ಮೊಹಮ್ಮದ್ ಕಮಲ್ ಹಾಸನ್, ಸಾಂಗ್ಸುವಾತುಯಿ ಐಮೋಲ್, ಮೊಹಮ್ಮದ್ ಅಬ್ದುಲ್ ಹಾಸಿಂ, ನಾಗಸೇಪಂ ವಿಮ್, ಎಎಸ್ಐ ಸಿದ್ದಾರ್ಥ್ ತೊಕ್ಚೋಮ್, ಕೆ ಪ್ರೇಮಾನಂದ್ ಗಾಯಗೊಂಡಿದ್ದಾರೆ ಎಂದು ಮಣಿಪುರ ಪೊಲೀಸರು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಓದಿ:ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಕಮಾಂಡೋ ಹತ್ಯೆ
ತೌಬಲ್ ಜಿಲ್ಲೆಯಲ್ಲಿ ಮತ್ತೊಂದು ಘಟನೆಯ ಬಗ್ಗೆ ಮಾಹಿತಿ ನೀಡಿದ ರಾಜ್ಯ ಪೊಲೀಸರು, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿಯ ಮೇಲೆ ಗುಂಪು ಗುಂಡು ಹಾರಿಸಿದೆ ಎಂದು ಹೇಳಿದರು. ಈ ಗುಂಡಿನ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ರಾಜ್ ಮೆಡಿಸಿಟಿಗೆ ವರ್ಗಾಯಿಸಲಾಗಿದೆ.
ಮಣಿಪುರ(Manipur)ದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು, ಕಮಾಂಡೋ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಂಗಳವಾರ ಇಂಫಾಲ್ ಪಶ್ಚಿಮ ಜಿಲ್ಲೆಯ ಕೌತ್ರುಕ್ ಗ್ರಾಮದಲ್ಲಿ ಭಾರೀ ಗುಂಡಿನ ಚಕಮಕಿ ವರದಿಯಾದ ನಂತರ ಕಲಹ ಪೀಡಿತ ಮಣಿಪುರದಲ್ಲಿ ಹೊಸ ಹಿಂಸಾಚಾರ ಸಂಭವಿಸಿತ್ತು.
ಕಳೆದ ವರ್ಷ ಮೇ 3 ರಂದು ಕಣಿವೆಯ ಬಹುಸಂಖ್ಯಾತ ಮೈಥಿ ಮತ್ತು ಗುಡ್ಡಗಾಡು ಬಹುಸಂಖ್ಯಾತ ಕುಕಿಗಳ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ