ಆಕ್ಲೆಂಡ್: ಚುನಾವಣಾ ಪ್ರಚಾರ ಆರ್ಭಟಗಳ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 30ರಂದು 100ನೇ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ (100th Episode of Mann Ki Baat) ದೇಶ ವಿದೇಶಗಳಲ್ಲಿನ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು. ಮನ್ ಕೀ ಬಾತ್ನ 100ನೇ ಎಪಿಸೋಡ್ನ ಬಾನುಲಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ನಲ್ಲಿ ಭಾರತೀಯ ಸಮುದಾಯದ 100ಕ್ಕೂ ಹೆಚ್ಚು ಮಹಿಳೆಯರು ಸಂಭ್ರಮಾಚರಣೆ ಮಾಡಿದ ಘಟನೆ ವರದಿಯಾಗಿದೆ. ಈ 100 ಮಹಿಳೆಯರಲ್ಲಿ ಶತಾಯುಷಿ ಅಜ್ಜಿಯೊಬ್ಬರೂ ಇದ್ದದ್ದು ವಿಶೇಷ. 100 ವರ್ಷಗಳಿಗೂ ಹೆಚ್ಚು ವಯಸ್ಸಾಗಿರುವ ರಾಮಿ ಬೆನ್ ಕಿರಿಯರೂ ನಾಚುವ ರೀತಿಯಲ್ಲಿ ಉತ್ಸಾಹದಿಂದ ಈ ಸಂಭ್ರಮಿಸಿದ್ದು ಎಲ್ಲರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಶೀರ್ವಾದ ಕೂಡ ಮಾಡಿದರು.
‘ತನು ಮನ ಧನಗಳಿಂದ ನಿಮಗೆ ಖುಷಿ ಸಿಗಲಿ. ಒಳ್ಳೆಯ ಆಯುರಾರೋಗ್ಯ, ಸಂಪತ್ತು ಮತ್ತು ಮನಸು ನಿಮಗೆ ಒಲಿಯಲಿ’ ಎಂದು ರಾಮಿ ಬೆನ್ ಅವರು ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಉಜ್ವಲ ಭವಿಷ್ಯ ಸಿಗಲೆಂದು ಹಾರೈಸಿದರು.
ಇದನ್ನೂ ಓದಿ: Mann Ki Baat 100th Episode: ಜನರೇ ದೇವರು, ಮನ್ ಕೀ ಬಾತ್ ನನಗೊಂದು ವ್ರತವಿದ್ದಂತೆ, ಪ್ರಧಾನಿ ಮೋದಿ ಮನದಾಳದ ಮಾತುಗಳು
ಆಕ್ಲೆಂಡ್ನಲ್ಲಿ ಆಯೋಜಿಸಲಾಗಿದ್ದ ಮನ್ ಕೀ ಬಾತ್ ಎಪಿಸೋಡ್ ಕಾರ್ಯಕ್ರಮ ಪ್ರಸಾರದ ಸ್ಥಳದಲ್ಲಿ ನ್ಯೂಜಿಲೆಂಡ್ನ ಉಪಪ್ರಧಾನಿ ವಿನ್ಸ್ಟನ್ ಪೀಟರ್ಸ್ ಹಾಜರಿದ್ದರು. ಮನ್ ಕೀ ಬಾತ್ ಕಾರ್ಯಕ್ರಮದ ಬಗ್ಗೆ ಅವರು ಈ ಸಂದರ್ಭದಲ್ಲಿ ಹೆಮ್ಮೆ ವ್ಯಕ್ತಪಡಿಸಿದರು.
‘ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಖುಷಿಯಾತ್ತದೆ. ಪಿಎಂ ಮೋದಿ ಅವರನ್ನು ಹಲವಾರು ಸಂದರ್ಭದಲ್ಲಿ ಭೇಟಿ ಮಾಡುವ ಭಾಗ್ಯ ನನಗೆ ಸಿಕ್ಕಿದೆ. ಈ ಮನ್ ಕೀ ಬಾತ್ ಕಾರ್ಯಕ್ರಮ ಅವರ ಮನದಾಳದಿಂದ ಬರುವ ಸಂವಾದವಾಗಿದೆ. 100ನೇ ಎಪಿಸೋಡ್ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ’ ಎಂದು ಕಿವೀಸ್ ನಾಡಿನ ಉಪಪ್ರಧಾನಿಗಳು ಹೇಳಿದರು.
ಇದನ್ನೂ ಓದಿ: Mann Ki Baat: ಮನದ ಮಾತಿಗೆ ಶತ ಸಂಭ್ರಮ, 100 ಕೋಟಿ ಜನರನ್ನು ತಲುಪಿದ ಮನ್ ಕೀ ಬಾತ್
2014 ಅಕ್ಟೋಬರ್ 3ರಂದು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಮನ್ ಕೀ ಬಾತ್ ಕಾರ್ಯಕ್ರಮ ತಿಂಗಳಿಗೊಮ್ಮೆ ಇರುತ್ತದೆ. ರಾಜಕೀಯ ಹೊರತಾಗಿ ಹಲವಾರು ವಿಚಾರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ. 500ಕ್ಕೂ ಹೆಚ್ಚು ರೇಡಿಯೋ ಕೇಂದ್ರಗಳಿಂದ ಇದರ ಪ್ರಸಾರ ಆಗುತ್ತದೆ. ಅಲ್ಲದೇ ಸೋಷಿಯಲ್ ಮೀಡಿಯಾಗಳಲ್ಲೂ ಪ್ರಸಾರ ಇರುತ್ತದೆ. ಕನ್ನಡವೂ ಸೇರಿದಂತೆ 22 ಭಾರತೀಯ ಭಾಷೆಗಳಲ್ಲಿ ಇದರ ಮರುಪ್ರಸಾರ ಆಗುತ್ತದೆ. ಫ್ರೆಂಚ್, ಮಂದಾರಿನ್, ಇಂಡೋನೇಷ್ಯನ್, ಟಿಬೆಟನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತೂನ್, ಪರ್ಷಿಯನ್, ದರಿ, ಸ್ವಾಹಿಲಿ ಸೇರಿದಂತೆ 11 ವಿದೇಶೀ ಭಾಷೆಗಳಲ್ಲೂ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ಪ್ರಸಾರ ಆಗುತ್ತದೆ.
ವಿದೇಶಗಳಲ್ಲಿ ಭಾರತೀಯ ಸಮುದಾಯದ ಜನರು ಒಟ್ಟಿಗೆ ಸೇರಿ ಕಾರ್ಯಕ್ರಮವನ್ನು ಆಲಿಸುವುದಿದೆ. ಲಂಡನ್ನ ಭಾರತೀಯ ರಾಯಭಾರ ಕಚೇರಿಯು ಈ ಬಾರಿ ಮನ್ ಕೀ ಬಾತ್ ಕಾರ್ಯಕ್ರಮ ಕೇಳಲು ಸಮುದಾಯದವರನ್ನು ಆಹ್ವಾನಿಸಿತ್ತು. ಅಮೆರಿಕದ ನ್ಯೂಜೆರ್ಸಿ ಇತ್ಯಾದಿ ಹಲವು ಕಡೆ ಕಾರ್ಯಕ್ರಮ ಕೇಳಲು ಸ್ಥಳದ ವ್ಯವಸ್ಥೆ ಮಾಡಲಾಗಿತ್ತು.
Published On - 5:43 pm, Sun, 30 April 23