Mann Ki Baat: 100ನೇ ಮನ್​ ಕಿ ಬಾತ್​ ಕಾರ್ಯಕ್ರಮಕ್ಕೆ ಲೊಗೊ, ಜಿಂಗಲ್ ಆಹ್ವಾನ; ಒಟ್ಟು 1.11 ಲಕ್ಷ ಬಹುಮಾನ

PM Narendra Modi: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಬಾನುಲಿ ಕಾರ್ಯಕ್ರಮ ‘ಮನ್​ ಕಿ ಬಾತ್’ನ 100ನೇ ಆವೃತ್ತಿಗಾಗಿ ವಿಶೇಷ ವಿನ್ಯಾಸದ ಲೊಗೊ ಹಾಗೂ ಜಿಂಗಲ್​ಗಳನ್ನು ಆಕಾಶವಾಣಿ ಆಹ್ವಾನಿಸಿದೆ.

Mann Ki Baat: 100ನೇ ಮನ್​ ಕಿ ಬಾತ್​ ಕಾರ್ಯಕ್ರಮಕ್ಕೆ ಲೊಗೊ, ಜಿಂಗಲ್ ಆಹ್ವಾನ; ಒಟ್ಟು 1.11 ಲಕ್ಷ ಬಹುಮಾನ
ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 28, 2023 | 2:58 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಬಾನುಲಿ ಕಾರ್ಯಕ್ರಮ ‘ಮನ್​ ಕಿ ಬಾತ್’ನ (Mann Ki Baat) 100ನೇ ಆವೃತ್ತಿಗಾಗಿ ವಿಶೇಷ ವಿನ್ಯಾಸದ ಲೊಗೊ ಹಾಗೂ ಜಿಂಗಲ್​ಗಳನ್ನು ಆಕಾಶವಾಣಿ (All India Radio – AIR) ಸಾರ್ವಜನಿಕರಿಂದ ಆಹ್ವಾನಿಸಿದೆ. ಮನ್​ ಕಿ ಬಾತ್​ನ 97ನೇ ಆವೃತ್ತಿ ಜ 29ರಂದು ನಡೆಯಲಿದೆ. 100ನೇ ಆವೃತ್ತಿಯು ಏಪ್ರಿಲ್​ ತಿಂಗಳ ಕೊನೆಯ ಭಾನುವಾರ (ಏ 30) ನಡೆಯಲಿದೆ. ಮನ್​ ಕಿ ಬಾತ್ ಮೂಲಕ ಮೋದಿ ಅವರು ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದು, ಕಾರ್ಯಕ್ರಮವೂ ಸಂಚಿಕೆಯಿಂದ ಸಂಚಿಕೆಗೆ ಹೆಚ್ಚು ಜನಪ್ರಿಯವಾಗುತ್ತಿದೆ.

ಲೋಗೊ ಕಳಿಸಿ: ಬಹುಮಾನ ಗೆಲ್ಲಿ

ಭಾರತ ಸರ್ಕಾರದ mygov.in ಜಾಲತಾಣದಲ್ಲಿ ಲೋಗೊ ಮತ್ತು ಜಿಂಗಲ್​ಗೆ ಸಂಬಂಧಿಸಿದ ತಾಂತ್ರಿಕ ವಿವರಗಳನ್ನು ನೀಡಲಾಗಿದೆ. ಲೊಗೊಗಳನ್ನು JPEG/ JPG/ PNG/ SVG ಫಾರ್ಮಾಟ್​ಗಳಲ್ಲಿ ಅಪ್​ಲೋಡ್ ಮಾಡಬಹುದು. ವರ್ಣಗಳಲ್ಲಿ ವಿನ್ಯಾಸ ಮಾಡಬೇಕು. 5X5 ಸೆಂಮೀಯಿಂದ, 60X60 ಸೆಂಮೀ ಅಳತೆಯಲ್ಲಿ, ಪೋರ್ಟೇಟ್ (ಉದ್ದ) ಅಥವಾ ಲ್ಯಾಂಡ್​ಸ್ಕೇಪ್ (ಅಡ್ಡ) ಆಕಾರದಲ್ಲಿ ಲೋಗೊಗಳನ್ನು ವಿನ್ಯಾಸ ಮಾಡಬಹುದಾಗಿದೆ. ಇವು ವೆಬ್​ಸೈಟ್, ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುವಂತಿರಬೇಕು. ಪತ್ರಿಕಾ ಹೇಳಿಕೆಗಳು, ಲೇಖನ ಸಾಮಗ್ರಿಗಳು, ಸ್ಮರಣಿಕೆಗಳು ಸೇರಿದಂತೆ ಇತರ ಪ್ರಚಾರ ಸಾಮಗ್ರಿಗಳಲ್ಲಿ ಸುಲಭವಾಗಿ ಬಳಸುವ ರೀತಿಯಲ್ಲಿರಬೇಕು. ಲೊಗೊಗಳು ಕನಿಷ್ಠ 300 ಡಿಪಿಐ ರೆಸಲ್ಯೂಶನ್ ಹೊಂದಿರಬೇಕು ಎಂದು ಭಾರತ ಸರ್ಕಾರವು ವಿವರಗಳನ್ನು ನೀಡಿದೆ.

ವಿನ್ಯಾಸ ಸಿದ್ಧವಾದ ಲೊಗೊಗಳನ್ನು ಸಲ್ಲಿಸಲು ಫೆ 1 ಕೊನೆಯ ದಿನವಾಗಿದ್ದು, ವಿಜೇತರಿಗೆ ₹ 1 ಲಕ್ಷ ಬಹುಮಾನ ಸಿಗಲಿದೆ. ಹೆಚ್ಚಿನ ಮಾಹಿತಿ ಮತ್ತು ನಿಯಮಗಳ ದಾಖಲೆಗಾಗಿ ಇಲ್ಲಿ ಕ್ಲಿಕ್ ಮಾಡಿ.

ಸಂಗೀತ ಪ್ರಿಯರೇ; ಜಿಂಗಲ್ ಬಗ್ಗೆ ಯೋಚಿಸಿ

ಮನ್​ ಕಿ ಬಾತ್​ನ ಪ್ರಾಮುಖ್ಯತೆ ಬಿಂಬಿಸುವ ಜಿಂಗಲ್​ಗಳನ್ನು ಭಾರತ ಸರ್ಕಾರ ಆಹ್ವಾನಿಸಿದೆ. ಸದಾ ನೆನಪಿನಲ್ಲಿ ಉಳಿಯುವ, ಮಾಧುರ್ಯಭರಿತ, ಕೇಳಿದವರ ಹೃದಯಗೆಲ್ಲುವ ಜಿಂಗಲ್​ಗಳನ್ನು ನೀಡಬೇಕು ಎಂದು mygov.in ವೆಬ್​ಸೈಟ್ ಮೂಲಕ ಮನವಿ ಮಾಡಲಾಗಿದೆ.

ಜಿಂಗಲ್​ಗಳಿಗೆ 25ರಿಂದ 30 ಪದಗಳ ಸ್ಕ್ರಿಪ್ಟ್​ ಇರಲೇಬೇಕು. ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುವ ಪದಗಳನ್ನು ಬಳಸಬೇಕು. ಸೌಂಡ್​ಕ್ಲೌಡ್, ಯುಟ್ಯೂಬ್, ಗೂಗಲ್ ಡ್ರೈವ್, ಡ್ರಾಪ್​ಬಾಕ್ಸ್​ನಂಥ ಯಾವುದೇ ಮಾಧ್ಯಮ ಪ್ಲಾಟ್​ಫಾರ್ಮ್​ನಲ್ಲಿ ಆಡಿಯೊ ಫೈಲ್ ಅಪ್​ಲೋಡ್ ಮಾಡಿ ಅದರ ಲಿಂಕ್ ಶೇರ್ ಮಾಡಬೇಕು. ಅತ್ಯುತ್ತಮ ಜಿಂಗಲ್​ಗೆ ₹ 11,000 ಬಹುಮಾನ ಸಿಗಲಿದೆ. ಜಿಂಗಲ್ ಕಳಿಸಲು ಕೊನೆಯ ದಿನ ಫೆ 28. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.‘

ಇದನ್ನೂ ಓದಿ: ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಕ್ಕಿದ ದೊಡ್ಡ ಅವಕಾಶ: ಮನ್ ಕಿ ಬಾತ್​​ನಲ್ಲಿ ಪ್ರಧಾನಿ ಮೋದಿ

ಮನ್​ ಕಿ ಬಾತ್ ಕುರಿತು ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:58 pm, Sat, 28 January 23

ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಚನ್ನಪಟ್ಟಣದಲ್ಲಿ ನಾನೇ ಮುಖ್ಯಮಂತ್ರಿ ಅಂತ ಶಿವಕುಮಾರ್ ಹೇಳುತ್ತಾರೆ: ಅಶೋಕ
ಚನ್ನಪಟ್ಟಣದಲ್ಲಿ ನಾನೇ ಮುಖ್ಯಮಂತ್ರಿ ಅಂತ ಶಿವಕುಮಾರ್ ಹೇಳುತ್ತಾರೆ: ಅಶೋಕ
ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದ ಮುನಿರತ್ನ
ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದ ಮುನಿರತ್ನ
ಕುಮಾರಸ್ವಾಮಿಯನ್ನು ಸಿಎಂ ಮಾಡಲು ನಾನು ಬಸ್ ಓಡಿಸಿದ್ದು: ಜಮೀರ್ ಅಹ್ಮದ್
ಕುಮಾರಸ್ವಾಮಿಯನ್ನು ಸಿಎಂ ಮಾಡಲು ನಾನು ಬಸ್ ಓಡಿಸಿದ್ದು: ಜಮೀರ್ ಅಹ್ಮದ್
ಮಹಿಳೆಯ ಎದೆ ಸ್ಪರ್ಶಿಸಿ ಪರಾರಿಯಾದ ಯುವಕನ ಬಂಧನ; ವಿಡಿಯೋ ವೈರಲ್​​
ಮಹಿಳೆಯ ಎದೆ ಸ್ಪರ್ಶಿಸಿ ಪರಾರಿಯಾದ ಯುವಕನ ಬಂಧನ; ವಿಡಿಯೋ ವೈರಲ್​​