Mann Ki Baat: ಮೋದಿ ಮನ್ ಕಿ ಬಾತ್​​ನಲ್ಲಿ ಅಟಲ್ ಸ್ಮರಣೆ; ಭಾರತದ ಸಾಧನೆಗಳ ಮೆಲುಕು ಹಾಕಿ 2022ಕ್ಕೆ ವಿದಾಯ ಹೇಳಿದ ಪ್ರಧಾನಿ

| Updated By: ಸುಷ್ಮಾ ಚಕ್ರೆ

Updated on: Dec 25, 2022 | 12:10 PM

ದೇಶದಲ್ಲಿ ಮತ್ತೆ ಕೊರೊನಾ ಕೇಸುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಎಲ್ಲರೂ ಮತ್ತೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಕೈಗಳನ್ನು ತೊಳೆಯುತ್ತಿರಬೇಕು. ಸಾರ್ವಜನಿಕ ಸ್ಥಳದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಮೋದಿ ಮನ್ ಕಿ ಬಾತ್​​ನಲ್ಲಿ ಸಲಹೆ ನೀಡಿದ್ದಾರೆ.

Mann Ki Baat: ಮೋದಿ ಮನ್ ಕಿ ಬಾತ್​​ನಲ್ಲಿ ಅಟಲ್ ಸ್ಮರಣೆ; ಭಾರತದ ಸಾಧನೆಗಳ ಮೆಲುಕು ಹಾಕಿ 2022ಕ್ಕೆ ವಿದಾಯ ಹೇಳಿದ ಪ್ರಧಾನಿ
ನರೇಂದ್ರ ಮೋದಿ
Follow us on

ನವದೆಹಲಿ: 2022ರ ಕೊನೆಯ ಮನ್​ ಕಿ ಬಾತ್​​ (Mann Ki Baat) ಕಾರ್ಯಕ್ರಮದಲ್ಲಿ ಇಂದು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ಜನರಿಗೆ ಕ್ರಿಸ್‌ಮಸ್‌ ಶುಭಾಶಯಗಳನ್ನು ಕೋರಿದ್ದಾರೆ. ಇದೇ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ 98ನೇ ಜನ್ಮದಿನದಂದು ಅವರನ್ನು ಸ್ಮರಿಸಿ ಗೌರವ ಸಲ್ಲಿಸಿದ್ದಾರೆ. ಈ ವರ್ಷಕ್ಕೆ ವಿದಾಯ ಹೇಳಿದ ಪ್ರಧಾನಿ ಮೋದಿ ಈ ವರ್ಷದ ಭಾರತದ ಸಾಧನೆಗಳನ್ನು ಪ್ರಸ್ತಾಪಿಸಿದ್ದಾರೆ. 2022ರ ವರ್ಷ ಅದ್ಭುತವಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿದೆ. ಇದೀಗ ದೇಶದಲ್ಲಿ ‘ಅಮೃತ ಕಾಲ’ ಪ್ರಾರಂಭವಾಗಿದೆ. ಭಾರತವು ಈ ವರ್ಷ ಕ್ಷಿಪ್ರ ಪ್ರಗತಿಯನ್ನು ಸಾಧಿಸಿದೆ ಮತ್ತು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಶಿಕ್ಷಣ, ವಿದೇಶಾಂಗ ನೀತಿ ಮತ್ತು ಮೂಲಸೌಕರ್ಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಅವರ 98ನೇ ಜನ್ಮದಿನದಂದು ನಾನು ಅವರಿಗೆ ನಮ್ರತೆಯಿಂದ ನಮಿಸುತ್ತೇನೆ. ಅವರು ದೇಶಕ್ಕೆ ಅಸಾಧಾರಣ ನಾಯಕತ್ವವನ್ನು ನೀಡಿದ ಮಹಾನ್ ರಾಜನೀತಿಜ್ಞರಾಗಿದ್ದರು. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಅವರಿಗೊಂದು ವಿಶೇಷ ಸ್ಥಾನವಿದೆ. ‘ಮನ್ ಕಿ ಬಾತ್’ನ ಮುಂದಿನ ಸಂಚಿಕೆ 2023ರ ಮೊದಲ ಸಂಚಿಕೆಯಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: Mann Ki Baat: ಇಂದು ಬೆಳಗ್ಗೆ ಪ್ರಧಾನಿ ಮೋದಿಯವರಿಂದ ಈ ವರ್ಷದ ಕೊನೆಯ ಮನ್ ಕಿ ಬಾತ್

ಭೂತಕಾಲದ ಅವಲೋಕನವು ಯಾವಾಗಲೂ ಪ್ರಸ್ತುತ ಮತ್ತು ಭವಿಷ್ಯದ ಸಿದ್ಧತೆಗಳಿಗೆ ನಮಗೆ ಸ್ಫೂರ್ತಿ ನೀಡುತ್ತದೆ. 2022ರಲ್ಲಿ ದೇಶದ ಜನರ ಶಕ್ತಿ, ಅವರ ಸಹಕಾರ, ಸಂಕಲ್ಪ, ಯಶಸ್ಸಿನ ವಿಸ್ತರಣೆ ಎಷ್ಟಿದೆ ಎಂದರೆ ಎಲ್ಲರನ್ನೂ ಈ ‘ಮನ್ ಕಿ ಬಾತ್’ನಲ್ಲಿ ಸೇರಿಸುವುದು ಕಷ್ಟ. ನನ್ನ ಪಾಲಿಗೆ 2022 ಬಹಳ ವಿಶೇಷವಾದ ವರ್ಷವಾಗಿತ್ತು ಎಂದು ಮೋದಿ ಹೇಳಿದ್ದಾರೆ.

ದೇಶದಲ್ಲಿ ಮತ್ತೆ ಕೊರೊನಾ ಕೇಸುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಎಲ್ಲರೂ ಮತ್ತೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಕೈಗಳನ್ನು ತೊಳೆಯುತ್ತಿರಬೇಕು. ಸಾರ್ವಜನಿಕ ಸ್ಥಳದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಮೋದಿ ಮನ್ ಕಿ ಬಾತ್​​ನಲ್ಲಿ ಸಲಹೆ ನೀಡಿದ್ದಾರೆ.

ಈ ವರ್ಷ ದೇಶದ ಜನರು ಏಕತೆ ಮತ್ತು ಒಗ್ಗಟ್ಟನ್ನು ಆಚರಿಸಲು ಅನೇಕ ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಗುಜರಾತಿನ ಮಾಧವಪುರ ಮೇಳವಾಗಲಿ, ಅಲ್ಲಿನ ರುಕ್ಮಿಣಿಯ ವಿವಾಹವಾಗಲಿ ಮತ್ತು ಶ್ರೀಕೃಷ್ಣನ ಈಶಾನ್ಯ ಸಂಬಂಧಗಳಾಗಲಿ ಅಥವಾ ಕಾಶಿ-ತಮಿಳು ಸಂಗಮವಾಗಲಿ, ಈ ಹಬ್ಬಗಳಲ್ಲಿ ಏಕತೆಯ ಹಲವು ಬಣ್ಣಗಳು ಗೋಚರಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

‘2022ರಲ್ಲಿ ದೇಶವಾಸಿಗಳು ಮತ್ತೊಂದು ಅಮರ ಇತಿಹಾಸ ಬರೆದಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ನಡೆದ ‘ಹರ್ ಘರ್ ತಿರಂಗ’ ಅಭಿಯಾನವನ್ನು ಮರೆಯಲು ಅಸಾಧ್ಯ. ಸ್ವಾತಂತ್ರ್ಯದ 75 ವರ್ಷಗಳ ಈ ಅಭಿಯಾನದಲ್ಲಿ ಇಡೀ ದೇಶವೇ ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮಿಸಿತು. 6 ಕೋಟಿಗೂ ಹೆಚ್ಚು ಜನರು ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿ ಕೂಡ ಕಳುಹಿಸಿದ್ದಾರೆ. ಈ ಸ್ವಾತಂತ್ರ್ಯದ ಅಮೃತ ಮಹೋತ್ಸವವು ಮುಂದಿನ ವರ್ಷವೂ ಅದೇ ರೀತಿಯಲ್ಲಿ ಮುಂದುವರಿಯುತ್ತದೆ. ಇದು ಅಮೃತ ಕಾಲದ ಅಡಿಪಾಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Good Governance Day 2022: ಇಂದು ಮಾಜಿ ಪ್ರಧಾನಿ ದಿ.ವಾಜಪೇಯಿ ಅವರ 98ನೇ ಜನ್ಮದಿನ, ದೇಶಾದ್ಯಂತ ಉತ್ತಮ ಆಡಳಿತ ದಿನ ಆಚರಣೆ

‘2022ರ ವಿವಿಧ ಯಶಸ್ಸುಗಳು ಇಂದು ಇಡೀ ಜಗತ್ತಿನಲ್ಲಿ ಭಾರತಕ್ಕೆ ವಿಶೇಷ ಸ್ಥಾನವನ್ನು ಸೃಷ್ಟಿಸಿವೆ. 2022 ಎಂದರೆ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ಸ್ಥಾನಮಾನವನ್ನು ಸಾಧಿಸಿದೆ. 2022 ಎಂದರೆ ಭಾರತದಿಂದ 220 ಕೋಟಿ ಲಸಿಕೆಗಳ ನಂಬಲಾಗದ ಅಂಕಿಅಂಶವನ್ನು ದಾಟಿದ ದಾಖಲೆ ನಿರ್ಮಾಣವಾಗಿದೆ. 2022 ಎಂದರೆ ದೇಶದ ಜನರಿಂದ ‘ಸ್ವಾವಲಂಬಿ ಭಾರತ’ದ ಸಂಕಲ್ಪವನ್ನು ಅಳವಡಿಸಿಕೊಂಡು ಬದುಕುವುದು. 2022 ಎಂದರೆ ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ INS ವಿಕ್ರಾಂತ್‌ಗೆ ಸ್ವಾಗತ ಕೋರಿದ್ದು. 2022 ಎಂದರೆ ಬಾಹ್ಯಾಕಾಶ, ಡ್ರೋನ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಭಾರತದ ಕೀರ್ತಿ ಬೆಳಗಿದ್ದು. 2022 ಎಂದರೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತದ ಶಕ್ತಿ ಹೊರಹೊಮ್ಮಿದ್ದು. ಕಾಮನ್‌ವೆಲ್ತ್ ಕ್ರೀಡಾಕೂಟವಾಗಲಿ ಅಥವಾ ನಮ್ಮ ಮಹಿಳಾ ಹಾಕಿ ತಂಡದ ವಿಜಯವಾಗಲಿ ಕ್ರೀಡಾ ಕ್ಷೇತ್ರದಲ್ಲಿಯೂ ಸಹ, ನಮ್ಮ ಯುವಕರು ಅದ್ಭುತ ಸಾಮರ್ಥ್ಯವನ್ನು ತೋರಿಸಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:02 pm, Sun, 25 December 22