ಭಾರತ ಇತರೆ ರಾಷ್ಟ್ರಗಳ ಆಲೋಚನೆ ಮತ್ತು ಒತ್ತಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ -ಮೋದಿ

|

Updated on: May 30, 2021 | 12:46 PM

ಎನ್ಡಿಎ ಸರ್ಕಾರದ 7 ವರ್ಷಗಳ ಆಡಳಿತದ ಬಗ್ಗೆ ಮಾಡನಾಡಿದ ಮೋದಿ ಭಾರತ ಇತರೆ ರಾಷ್ಟ್ರಗಳ ಆಲೋಚನೆ ಮತ್ತು ಒತ್ತಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬದಲಾಗಿ ತನ್ನ ಸಂಕಲ್ಪದ ಪ್ರಕಾರವೇ ಕೆಲಸ ಮಾಡುತ್ತಿದೆ. ಇದು ನಮಗೆ ಹೆಮ್ಮೆಯಾಗುತ್ತದೆ ಎಂದು ಹೇಳಿದರು.

ಭಾರತ ಇತರೆ ರಾಷ್ಟ್ರಗಳ ಆಲೋಚನೆ ಮತ್ತು ಒತ್ತಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ -ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us on

ದೆಹಲಿ: ಇಂದು ನರೇಂದ್ರ ಮೋದಿ ತಮ್ಮ 77ನೇ ಆವೃತ್ತಿಯ ಮನ್ ಕೀ ಬಾತ್ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ದೇಶದ ಸಮಸ್ಯೆ, ಆಕ್ಸಿಜನ್, ಡಿಜಿಟಲ್ ವ್ಯವಹಾರ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಮೊದಲಿಗೆ ಅವರು ತಮ್ಮ ಪ್ರೀತಿ ಪಾತ್ರರಾದ ಕುಟುಂಬಸ್ಥರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿದ್ರು. ಬಳಿಕ ಅವರಿಗೆ ಧೈರ್ಯ ತುಂಬುವ ಮಾತುಗಳನ್ನು ಆಡಿದ್ದಾರೆ.

ಕೊರೊನಾ ವಿರುದ್ಧ ಇಡೀ ದೇಶ ಹೋರಾಟ ನಡೆಸುತ್ತಿದೆ. 100 ವರ್ಷಗಳಲ್ಲಿ ಕೊರೊನಾ ಅತಿ ದೊಡ್ಡ ಸಾಂಕ್ರಾಮಿಕ ರೋಗ. ಶತಮಾನದಲ್ಲಿಯೇ ಇಂತಹ ಸೋಂಕು ಕಂಡಿರಲಿಲ್ಲ. ಇದನ್ನು ನಿರ್ವಹಿಸುವುದು ಹೇಗೆಂದು ಅನುಭವ ಇರಲಿಲ್ಲ. ಆದರೆ ಸೇವಾ ಮನೋಭಾವ, ಸಂಕಲ್ಪದಿಂದ ಎದುರಿಸಿದ್ದೇವೆ. ಕೊರೊನಾ ಜೊತೆಗೆ ನೈಸರ್ಗಿಕ ವಿಕೋಪ ಎದುರಿಸುವಂತಾಗಿದೆ. ಕಳೆದ 10 ದಿನದ ಅಂತರದಲ್ಲಿ 2 ಸೈಕ್ಲೋನ್ ಎದುರಿಸಿದ್ದೇವೆ. ತೌತೆ, ಯಾಸ್ ಚಂಡಮಾರುತದಿಂದ ಅಪಾರ ಹಾನಿಯಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಪರಿಣಾಮ ಬೀರಿದೆ. ಸಂಕಷ್ಟದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡಿವೆ. ಸಂಕಷ್ಟಕ್ಕೆ ಸಿಲುಕಿರುವವರಿಗೆ ನಾವು ಬೆಂಬಲವಾಗಿ ನಿಲ್ಲೋಣ ಎಂದು ಮನ್ ಕೀ ಬಾತ್ನಲ್ಲಿ ಹೇಳಿದರು. ಹಾಗೂ ಚಂಡ ಮಾರುತದಿಂದ ಹಾನಿಗೆ ಒಳಗಾದ ರಾಜ್ಯಗಳ ಜನರು ತುಂಬ ಧೈರ್ಯದಿಂದ ಹೋರಾಡಿದ್ದಾರೆ. ತಾಳ್ಮೆ ಶಿಸ್ತಿನಿಂದ ವರ್ತಿಸಿದ್ದಾರೆ. ರಾಜ್ಯದ ಎಲ್ಲಾ ನಾಗರಿಕರಿಗೂ ಹೃದಯಪೂರ್ವಕ, ಗೌರವಪೂರ್ವಕವಾಗಿ ಶ್ಲಾಘಿಸುತ್ತೇನೆ. ಅವರೆಲ್ಲರಿಗೂ ನನ್ನ ಸಲ್ಯೂಟ್.

ದೇಶದ ಮೂಲೆ ಮೂಲೆಗೂ ಆಕ್ಸಿಜನ್ ಪೂರೈಸಲಾಗಿದೆ
ಕೊರೊನಾ 2ನೇ ಅಲೆ ಆರಂಭದಲ್ಲಿ ಮೆಡಿಕಲ್ ಆಕ್ಸಿಜನ್‌ಗೆ ಬೇಡಿಕೆ ಇದ್ದಕ್ಕಿದ್ದಂತೆ ಏರಿಕೆಯಾಯಿತು. ಮೆಡಿಕಲ್ ಆಕ್ಸಿಜನ್ ಪೂರೈಕೆ ಮಾಡುವುದು ಸವಾಲಾಗಿತ್ತು. ಈ ಸಮಯದಲ್ಲಿ ಆಕ್ಸಿಜನ್ ಟ್ಯಾಂಕರ್ ಚಾಲಕರಿಂದ ನೆರವು ಸಿಕ್ಕಿತ್ತು. ಆಕ್ಸಿಜನ್ ಪೂರೈಕೆಗೆ ವಾಯುಸೇನೆಯೂ ಸಹಾಯ ಮಾಡಿತ್ತು, ನೂರಾರು ಜನರ ಪ್ರಾಣ ಉಳಿಸಿದರು. ದೇಶದ ಮೂಲೆ ಮೂಲೆಗೂ ಆಕ್ಸಿಜನ್ ಪೂರೈಸಲಾಗಿದೆ. ಈ ವೇಳೆ ಆಕ್ಸಿಜನ್ ಎಕ್ಸ್ಪ್ರೆಸ್ ರೈಲಿನ ಮಹಿಳಾ ಚಾಲಕರೊಂದಿಗೆ ಮೋದಿ ಮಾತನಾಡಿದ್ರು. 1 ಆಕ್ಸಿಜನ್ ಎಕ್ಸ್‌ಪ್ರೆಸ್ ಮಹಿಳೆಯರಿಂದ ನಿರ್ವಹಣೆಯಾಗುತ್ತಿದೆ. ಇದು ಹೆಮ್ಮೆ ಪಡುವ ವಿಷಯ. ದೇಶದಲ್ಲಿ ಲಕ್ಷಾಂತರ ಜನ ಹಗಲಿರುಳು ಕೆಲಸ ಮಾಡ್ತಿದ್ದಾರೆ. ದಿನದಲ್ಲಿ 900 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ಆದರೆ ಈಗ ಇದು 10ರಿಂದ 15 ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದರು.

ಲ್ಯಾಬ್ ತಂತ್ರಜ್ಞಾನರೊಂದಿಗೆ ಮೋದಿ ಮಾತು
ಈ ವೇಳೆ ಲ್ಯಾಬ್ ತಂತ್ರಜ್ಞಾನರೊಂದಿಗೆ ಮಾತನಾಡಿದ ಮೋದಿ, ಅನೇಕ ಮುಂಚೂಣಿ ಕಾರ್ಯಕರ್ತರು ಗಂಟಲು ಮಾದರಿ ಸಂಗ್ರಹಣೆ, ಕೊರೊನಾ ಸೋಂಕಿತರ ಬಳಿ ಹೋಗಿ ಅವರ ಗಂಟಲು ದ್ರವ ಮಾದರಿ ಪಡೆಯುವುದು ಸೇರಿದಂತೆ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.

ಎನ್ಡಿಎ ಸರ್ಕಾರದ 7 ವರ್ಷಗಳ ಆಡಳಿತದ ಬಗ್ಗೆ ಮಾಡನಾಡಿದ ಮೋದಿ ಭಾರತ ಇತರೆ ರಾಷ್ಟ್ರಗಳ ಆಲೋಚನೆ ಮತ್ತು ಒತ್ತಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬದಲಾಗಿ ತನ್ನ ಸಂಕಲ್ಪದ ಪ್ರಕಾರವೇ ಕೆಲಸ ಮಾಡುತ್ತಿದೆ. ಇದು ನಮಗೆ ಹೆಮ್ಮೆಯಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Mann Ki Baat LIVE: ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್