ಜೂನ್​ನಲ್ಲಿ 12 ಕೋಟಿ ಡೋಸ್​​ಗಳಷ್ಟು ಕೊರೊನಾ ಲಸಿಕೆ ಲಭ್ಯ; ಕೇಂದ್ರ ಸರ್ಕಾರದಿಂದ ಅಭಯ

ಜನವರಿ 16ರಿಂದ ಶುರುವಾದ ಕೊವಿಡ್​ 19 ಲಸಿಕೆ ವಿತರಣೆ ಅಭಿಯಾನ ಎರಡು ಹಂತ ಪೂರೈಸಿದೆ. ಈ ಮೂರನೇ ಹಂತದಲ್ಲಿ 18-44ವರ್ಷದವರಿಗೆ ಕೊರೊನಾ ಲಸಿಕೆ ನೀಡಬೇಕಿತ್ತು.

ಜೂನ್​ನಲ್ಲಿ 12 ಕೋಟಿ ಡೋಸ್​​ಗಳಷ್ಟು ಕೊರೊನಾ ಲಸಿಕೆ ಲಭ್ಯ; ಕೇಂದ್ರ ಸರ್ಕಾರದಿಂದ ಅಭಯ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:May 30, 2021 | 2:49 PM

ದೆಹಲಿ: ಸದ್ಯ ದೇಶದಲ್ಲಿ ಕೊವಿಡ್ 19 ಲಸಿಕೆ ಅಭಾವದಿಂದಾಗಿ ಲಸಿಕೆ ವಿತರಣೆ ಅಭಿಯಾನ ತುಸು ಹಿಂದೆ ಬಿದ್ದಿದೆ. ಆದರೆ ಆತಂಕ ಪಡಬೇಕಿಲ್ಲ. ಜೂನ್​ನಲ್ಲಿ ಸುಮಾರು 12 ಕೋಟಿ ಡೋಸ್​ಗಳಷ್ಟು ವ್ಯಾಕ್ಸಿನ್​​ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸದ್ಯ ಕೊವಿಡ್​ 19 ಲಸಿಕೆಗಾಗಿ ಸಿಕ್ಕಾಪಟೆ ಬೇಡಿಕೆಯಿದೆ. ಆದರೆ ವ್ಯಾಕ್ಸಿನ್ ಕೊರತೆಯಿಂದ ಫಲಾನುಭವಿಗಳಿಗೆ ಅಗತ್ಯವಿರುವಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಜೂನ್​ ಹೊತ್ತಿಗೆ ವ್ಯಾಕ್ಸಿನ್​ ಉತ್ಪಾದನೆ ಹೆಚ್ಚಲಿದ್ದು, ಪೂರೈಕೆ ಪ್ರಮಾಣವೂ ಹೆಚ್ಚಲಿದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.

ಜನವರಿ 16ರಿಂದ ಶುರುವಾದ ಕೊವಿಡ್​ 19 ಲಸಿಕೆ ವಿತರಣೆ ಅಭಿಯಾನ ಎರಡು ಹಂತ ಪೂರೈಸಿದೆ. ಈ ಮೂರನೇ ಹಂತದಲ್ಲಿ 18-44ವರ್ಷದವರಿಗೆ ಕೊರೊನಾ ಲಸಿಕೆ ನೀಡಬೇಕಿತ್ತು. ಆದರೆ ಸದ್ಯಕ್ಕೆ ಸಿಗುತ್ತಿಲ್ಲ. ಇದುವರೆಗೆ ದೇಶದಲ್ಲಿ ಒಟ್ಟು 21 ಕೋಟಿ ಜನರಿಗೆ ಲಸಿಕೆ ಕೊಟ್ಟಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಶನಿವಾರ ಒಂದೇದಿನ 18-44ವರ್ಷದವರೆಗಿನ 14.15 ಲಕ್ಷ ಜನರು ಮೊದಲ ಡೋಸ್​ ಲಸಿಕೆ ಪಡೆದಿದ್ದಾರೆ. 9,075 ಮಂದಿ ಎರಡನೇ ಡೋಸ್​ ಪಡೆದಿದ್ದಾರೆ ಎಂದೂ ತಿಳಿಸಿದೆ. ದೇಶದಲ್ಲಿ ಕೊವಿಶೀಲ್ಡ್​ ಮತ್ತು ಕೊವ್ಯಾಕ್ಸಿನ್​ ಲಸಿಕೆ ಉತ್ಪತ್ತಿ ಮಾಡುತ್ತಿದ್ದರೂ ಅಭಾವ ಉಂಟಾಗಿದೆ.

ಮೂರನೇ ಹಂತದ ಅಂದರೆ 18-44ವರ್ಷದವರೆಗಿ ವರ್ಗಕ್ಕೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಪೂರೈಕೆ ಮಾಡುವುದಿಲ್ಲ. ಲಸಿಕೆ ಉತ್ಪಾದಕರಿಂದ ರಾಜ್ಯ ಸರ್ಕಾರಗಳು ನೇರವಾಗಿ ಖರೀದಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಜ್ಯಗಳಿಂದ ಬೇಡಿಕೆ ಹೆಚ್ಚಾಗಿಯೇ ಇದ್ದು, ಆದಷ್ಟು ಶೀಘ್ರದಲ್ಲೇ ಪೂರೈಕೆಗೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಭರವಸೆ ನೀಡಿದೆ. ರಷ್ಯಾದ ಸ್ಪುಟ್ನಿಕ್​ ಲಸಿಕೆಗೂ ಕೂಡ ಭಾರತದಲ್ಲಿ ಅನುಮೋದನೆ ದೊರೆತಿದೆ.

ಇದನ್ನೂ ಓದಿ: ಮೆಹುಲ್​ ಚೋಕ್ಸಿ ಡೊಮಿನಿಕಾದಿಂದ ಭಾರತಕ್ಕೆ ತೆರಳಲಿದ್ದಾರೆ ಎಂದ ಆಂಟಿಗುವಾ ಪ್ರಧಾನಿ; ಡೌಗ್ಲಾಸ್-ಚಾರ್ಲ್ಸ್ ಏರ್​ಪೋರ್ಟ್ ತಲುಪಿದ ಖಾಸಗಿ ಜೆಟ್​

Published On - 2:49 pm, Sun, 30 May 21